ಬಂಟ್ವಾಳ
-
Kalladka: ವೀರಕಂಭ ಮಾತೃಶ್ರೀ ಗೆಳೆಯರ ಬಳಗದ ರಜತಾ ಸಂಭ್ರಮದ ಸವಿನೆನಪಿಗಾಗಿ “ಮಾತೃಶ್ರೀ ಆಶ್ರಯ” ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ
ಕಲ್ಲಡ್ಕ : ಸಂಘ-ಸಂಸ್ಥೆ ಸಂಘಟನೆಗಳನ್ನು ಕಟ್ಟುವುದು ಸುಲಭ ಆದರೆ ಸಂಘ ಸಂಸ್ಥೆಗಳು ಸಂಘಟನೆಗಳು ದೀರ್ಘವಾಗಿ ಜೀವಂತಿಕೆಯಿಂದ ಕೂಡಿ ಕಾರ್ಯರೂಪಗೊಳ್ಳಬೇಕಾದರೆ ಅವರೊಳಗಿನ ಮನಸ್ಥಿತಿಗಳು ಏಕರೂಪವಾಗಿರಬೇಕು, ಸಮಾಜಕ್ಕೆ ಸಹಾಯ ಮಾಡುವ ಮನೋಭಾವ ಎಲ್ಲರಲ್ಲೂ ಮೂಡಿ ಬರಬೇಕು. ವಿವಿಧ ವಯೋಮಾನದ ವಿವಿಧ ಮನಸ್ಥಿತಿಗಳನ್ನು ಹೊಂದಿರುವ ಸದಸ್ಯರನ್ನೆಲ್ಲಾ ಒಂದೇ ಚೌಕಟ್ಟಿನಲ್ಲಿ ಹೊಂದಿಸಲು ಮತ್ತು ಸಮಾಜ ಸೇವೆಯ ಮನೋಭಾವನೆ ಬೆಳೆಸುವುದು ತುಂಬಾ ಕಷ್ಟದ ಕೆಲಸ, ಇಂತಹ ಪರಿಸ್ಥಿತಿಯಲ್ಲೂ ಕಳೆದ 25 ವರ್ಷಗಳಿಂದ ಊರಿನಲ್ಲಿ ಉತ್ತಮ ಸಂಘಟನೆ ಎನಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ತನ್ನ 25ರ…
-
Mangalore : ಅಕ್ರಮ ಗೋಹತ್ಯೆ ಗುಂಪಿನ ಮೇಲೆ ಪೊಲೀಸ್ ದಾಳಿ; 9 ಗೋವುಗಳ ರಕ್ಷಣೆ
(ಸೆ.23) ದಕ್ಷಿಣ ಕನ್ನಡ ಜಿಲ್ಲೆಯ ಸಂಗಬೆಟ್ಟು ಗ್ರಾಮದಲ್ಲಿ, ನವರಾತ್ರಿ ಹಬ್ಬದ ಮೊದಲ ದಿನದಂದು ಅಕ್ರಮವಾಗಿ ಗೋಹತ್ಯೆ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ ಒಂಬತ್ತು ಗೋವುಗಳನ್ನು ರಕ್ಷಿಸಿದ್ದಾರೆ. ಈ ಸಂಬಂಧ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಆಧರಿಸಿ, ಪೊಲೀಸರು ಬಂಟ್ವಾಳ ತಾಲ್ಲೂಕಿನ ಸಂಗಬೆಟ್ಟುವಿನಲ್ಲಿರುವ ಒಂದು ಮನೆಯ ಹಿಂಭಾಗದ ಶೆಡ್ ಮೇಲೆ ದಾಳಿ ನಡೆಸಿದರು. ಅಲ್ಲಿ, ಕೆಲವು ಜನರು ಗೋವುಗಳನ್ನು ಕತ್ತಿ ಹಾಗೂ ಚಾಕುಗಳಿಂದ ವಧೆ ಮಾಡುತ್ತಿರುವುದು ಪತ್ತೆಯಾಗಿದೆ. ಪೊಲೀಸರನ್ನು ಕಂಡ ತಕ್ಷಣ ಹೆಚ್ಚಿನ ಆರೋಪಿಗಳು ಸ್ಥಳದಿಂದ…
-
ಬಂಟ್ವಾಳ: ನೀರು ತುಂಬಿದ್ದ ಹೊಂಡಕ್ಕೆ ಕಾಲುಜಾರಿ ಬಿದ್ದು ಯುವಕ ಸಾವು
ಬಂಟ್ವಾಳ: ನೀರು ತುಂಬಿದ್ದ ಹೊಂಡಕ್ಕೆ ಕಾಲುಜಾರಿ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಸಜೀಪಮೂಡ ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ನಡೆದಿದೆ. ಉಳ್ಳಾಲ ತಾಲೂಕಿನ ಇರಾ ಸಮೀಪದ ಸೂತ್ರಬೈಲು ನಿವಾಸಿ ಅಬ್ದುಲ್ ಅಮೀರ್ (23) ಮೃತ ದುರ್ದೈವಿ. ಇದನ್ನೂ ಓದಿ: 🔴ಬೆಳ್ತಂಗಡಿ: ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಅಮೀರ್ ಕೂಲಿ ಕೆಲಸ ಮಾಡಿಕೊಂಡಿದ್ದು, ಸೆಪ್ಟೆಂಬರ್ 20ರಂದು ಸಂಜೆ ಗೆಳೆಯರ ಜೊತೆ ಕೆಲಸಕ್ಕೆ ಹೋಗಿದ್ದು, ಸಂಜೆ ಕೆಲಸ ಮುಗಿಸಿ ಅಲ್ಲೇ ಸಮೀಪದಲ್ಲಿದ್ದ ನೀರು ತುಂಬಿದ್ದ ಹೊಂಡಕ್ಕೆ ಕೈಕಾಲು ಮುಖ ತೊಳೆಯಲು ಹೋದ…
-
ಹದಗೆಟ್ಟ ರಸ್ತೆಗಳ ಬಗ್ಗೆ ಕ್ರಮಕ್ಕೆ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಆಗ್ರಹ: ಸಿಎಂಗೆ ಪತ್ರ
(ಸೆ.20) ಮಂಗಳೂರು: ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮೀಣ, ನಗರ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ತಕ್ಷಣವೇ ದುರಸ್ತಿಪಡಿಸಿ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿದ್ದಾರೆ, ಅಲ್ಲಿ ಹದಗೆಟ್ಟ ರಸ್ತೆ ಪರಿಸ್ಥಿತಿಯು ಈ ವರ್ಷ ಅಪಘಾತಗಳ ತೀವ್ರ ಹೆಚ್ಚಳಕ್ಕೆ ಕಾರಣವಾಗಿದೆ. ತಮ್ಮ ಪತ್ರದಲ್ಲಿ, ಡಾ. ಭಂಡಾರಿ ಅವರು ಅಧಿಕೃತ ಅಂಕಿಅಂಶಗಳನ್ನು ಉಲ್ಲೇಖಿಸಿ, 2025 ರ ಆರಂಭದಲ್ಲಿ ಸೆಪ್ಟೆಂಬರ್ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 702 ಅಪಘಾತಗಳು…
-
Mangalore: ದಕ್ಷಿಣ ಕನ್ನಡದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಿಯಮ ಸಡಿಲಿಕೆ, 23 ಅರ್ಜಿಗಳಿಗೆ ಅನುಮೋದನೆ
ಮಂಗಳೂರು: (ಸೆ.17) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಿಯಂತ್ರಣ ಚೌಕಟ್ಟನ್ನು ರಾಜ್ಯ ಸಚಿವ ಸಂಪುಟ ಮತ್ತು ಮುಖ್ಯಮಂತ್ರಿಗಳ ಅನುಮೋದನೆಯ ನಂತರ ಗಣನೀಯವಾಗಿ ಸರಳಗೊಳಿಸಲಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು. ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖಾದರ್, ಪರಿಷ್ಕೃತ ನೀತಿಯು ಅನುಮತಿ ಪ್ರಕ್ರಿಯೆಯನ್ನು ಸುಗಮಗೊಳಿಸುವ ಮತ್ತು ಈ ವಲಯವನ್ನು ದೀರ್ಘಕಾಲದಿಂದ ಕಾಡುತ್ತಿದ್ದ ಕಾನೂನು ಅಡೆತಡೆಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ ಎಂದು ಪ್ರಕಟಿಸಿದರು. ದಕ್ಷಿಣ ಕನ್ನಡದಲ್ಲಿ ಕೆಂಪು ಕಲ್ಲು ಗಣಿಗಾರಿಕೆ…
-
ಕಲ್ಲಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗೊಳ್ತಮಜಲು ಬಿ ಒಕ್ಕೂಟದ ವತಿಯಿಂದ ನಿಟಿಲಾಕ್ಷ ಸದಾಶಿವ ದೇವರಿಗೆ ಸಿಯಾಳಭಿಷೇಕ ಹಾಗೂ ಒಕ್ಕೂಟದ ವಾರ್ಷಿಕೋತ್ಸವ
ಕಲ್ಲಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಗೊಳ್ತಮಜಲು ಬಿ ಒಕ್ಕೂಟದ 20 ನೇ ವಾರ್ಷಿಕೋತ್ಸವ ರವಿವಾರ ನೆಟ್ಲ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಸಭಾಭವನದಲ್ಲಿ ಜರಗಿತು. ಇದನ್ನೂ ಓದಿ: 🔴ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ ಬೆಳಿಗ್ಗೆ ಒಕ್ಕೂಟದ ವತಿಯಿಂದ ಗ್ರಾಮ ಸುಭಿಕ್ಷೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುವ ಅಪವಾದಗಳಿಂದ ಮುಕ್ತವಾಗುವಂತೆ ಪ್ರಾರ್ಥಿಸಿ ಶ್ರೀ ನಿಟಿಲಾಕ್ಷನಿಗೆ ಸುಮಾರು 250 ಸಿಯಾಳ…
-
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ ತುಂಬೆ ಶಾರದಾಂಬ ಸಮುದಾಯ ಭವನಕ್ಕೆ 5 ಲಕ್ಷ ಸಹಾಯಧನ ಮಂಜೂರಾತಿ ಪತ್ರ ಹಸ್ತಾಂತರ
ಬಂಟ್ವಾಳ : ಬಂಟ್ವಾಳ ತಾಲೂಕು ತುಂಬೆ ಗ್ರಾಮದ ಶ್ರೀ ಶಾರದಾಂಬ ಸಮುದಾಯ ಭವನದ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 5 ಲಕ್ಷ ಅನುದಾನ ಮಂಜೂರಾತಿಯಾಗಿದ್ದು ಇದರ ಮಂಜೂರಾತಿ ಪತ್ರವನ್ನು ಸೋಮವಾರ ಬಂಟ್ವಾಳ ತಾಲೂಕಿನ ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ಮಾಧವ ವಲವೂರು ಶ್ರೀ ಶಾರದಾ ರಜತ ಮಹೋತ್ಸವ ಸಮಿತಿಗೆ ಹಸ್ತಾಂತರಿಸಿದರು. ಇದನ್ನೂ ಓದಿ: ⭕ಕರ್ನಾಟಕ ಹೈಕೋರ್ಟ್ – ಧರ್ಮಸ್ಥಳ ಶವಗಳ ಪ್ರಕರಣದ ಕುರಿತು ಎಸ್ಐಟಿಗೆ ನೋಟಿಸ್…
-
ಕಲ್ಲಡ್ಕ : ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕಲ್ಲಡ್ಕ ವಲಯ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 171ನೇ ಜನ್ಮದಿನಾಚರಣೆ ಪ್ರಯುಕ್ತ ಗುರುಪೂಜೆ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ
ಕಲ್ಲಡ್ಕ :ಆಡಂಬರ ಜೀವನಕ್ಕೆ ಕಡಿವಾಣ ಹಾಕಿ ಸರಳ ಜೀವನಕ್ಕೆ ಒತ್ತು ನೀಡಿ. ಮದುವೆ ಮದರಂಗಿ ಮುಂತಾದ ಕಾರ್ಯಕ್ರಮಗಳಲ್ಲಿ ಪ್ರತಿಷ್ಠೆಯ ನೆಪದಲ್ಲಿ ಮೂಲ ಆಚರಣೆಗಳನ್ನು ಬಿಟ್ಟು ಅನಗತ್ಯ ಖರ್ಚುಗಳನ್ನು ಮಾಡಿ ಸಾಲಗಾರರು ಆಗದೆ ಸರಳವಾಗಿ ಮಾಡಿ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಬಂಟ್ವಾಳ ಅಧ್ಯಕ್ಷರಾದ ಪ್ರೊಫೆಸರ್ ತುಕಾರಾಮ ಪೂಜಾರಿ ಕರೆ ನೀಡಿದರು. ಅವರು ಬಂಟ್ವಾಳ ತಾಲೂಕಿನ ಗೋಳ್ತಮಜಲು, ಬಾಳ್ತಿಲ,, ವೀರಕಂಭ, ಅಮ್ಮ್ಟೂರ್, ಬೋಳಂತೂರು, ಬೊಂಡಾಲ ಗ್ರಾಮಗಳನ್ನು ಒಳಗೊಂಡ ಬಿಲ್ಲವ ಸಮಾಜ ಸೇವಾ ಸಂಘ (ರಿ.)…
-
ಮಡಂತ್ಯಾರು: ಮಡಂತ್ಯಾರು ಮಹಿಳಾ ಮಂಡಲ ಶಿಶು ವಿಹಾರದಲ್ಲಿ ಶಾಸಕ ಹರೀಶ್ ಪೂಂಜರವರ ಹುಟ್ಟುಹಬ್ಬ ಆಚರಣೆ
ಮಡಂತ್ಯಾರು: ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜಾ ರವರ ಹುಟ್ಟು ಹಬ್ಬವನ್ನು ಆಗಸ್ಟ್ 19 ರಂದು ಮಡಂತ್ಯಾರು ಮಹಿಳಾ ಮಂಡಲ ಶಿಶು ವಿಹಾರದ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ತುಳಸಿ ಉಮೇಶ್, ಕೋಶಾಧಿಕಾರಿ ಶ್ರೀಮತಿ ಸಂಗೀತ ಅರುಣ್ ಶೆಟ್ಟಿ, ಶಿಶುವಿಹಾರ ಶಿಕ್ಷಕರು ಮತ್ತು ಮುದ್ದು ಪುಟಾಣಿಗಳು ಉಪಸ್ಥಿತರಿದ್ದರು. Like Dislike
-
ಕಲ್ಲಡ್ಕ : ಕಲ್ಲಡ್ಕ ನೇತಾಜಿ ಸ್ಮೃತಿ ಭವನದಲ್ಲಿ ಜನಾಗ್ರಹ ಸಭೆ ಯ ಪೂರ್ವಭಾವಿ ಸಭೆ
ಕಲ್ಲಡ್ಕ : ಶ್ರೀ ಧರ್ಮಸ್ಥಳ ಧರ್ಮ ರಕ್ಷಣಾ ವೇದಿಕೆ ಬಂಟ್ವಾಳ ವತಿಯಿಂದ ಆಗಸ್ಟ್ 20 ರಂದು ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಜರಗುವ ಜನಾಗೃಹ ಸಭೆಯ ಯಶಸ್ವಿಗೆ ಕಲ್ಲಡ್ಕ ನೇತಾಜಿ ಸ್ಮೃತಿ ಭವನದಲ್ಲಿ ಪೂರ್ವಭಾವಿ ಸಭೆ ಸೋಮವಾರ ಜರಗಿತು. ಇದನ್ನೂ ಓದಿ: 🟠ಉಜಿರೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಂಸ್ಕೃತೋತ್ಸವ ಧರ್ಮಸ್ಥಳ ಕ್ಷೇತ್ರದ ಕುರಿತು ಮಾಡುವ ಅಪಪ್ರಚಾರ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರ ತೇಜೋವದೇಯ ವಿರುದ್ಧ ಪ್ರತಿಭಟಿಸಲು ಆಯೋಜಿತ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ…