Sun. May 18th, 2025

ಪುತ್ತೂರು

  • Puttur: ಕೆಎಸ್ ಆರ್ ಟಿಸಿ ಬಸ್ & ಬೈಕ್ ನಡುವೆ ಭೀಕರ ಅಪಘಾತ – ತಂದೆ-ಮಗ ದಾರುಣ ಸಾವು

    Puttur: ಕೆಎಸ್ ಆರ್ ಟಿಸಿ ಬಸ್ & ಬೈಕ್ ನಡುವೆ ಭೀಕರ ಅಪಘಾತ – ತಂದೆ-ಮಗ ದಾರುಣ ಸಾವು

    ಪುತ್ತೂರು:(ಮೇ.12) ಪುತ್ತೂರು–ಮಂಗಳೂರು ಹೆದ್ದಾರಿಯ ಕಬಕ ಕುವೆತ್ತಿಲ ಸಮೀಪ, ಸರ್ಕಾರಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ-ಮಗ ಸಾವನ್ನಪ್ಪಿದ ಘಟನೆ ನಡೆದಿದೆ. ಇದನ್ನೂ ಓದಿ: ⭕⭕”ಕಾಂತಾರ ಚಾಪ್ಟರ್ 1″ ಶೂಟ್ ಮುಗಿಸಿ ಬಂದಿದ್ದ ರಾಕೇಶ್ ಪೂಜಾರಿ ಮೃತರನ್ನ ಬಂಟ್ವಾಳ ತಾಲೂಕಿನ ನರಿಕೊಂಬು ನಿವಾಸಿಗಳಾದ ಅರುಣ್ ಕುಲಾಲ್ ಹಾಗೂ ಅವರ ಮಗ ಧ್ಯಾನ್ ಎಂದು ಗುರುತಿಸಲಾಗಿದೆ.ಪುತ್ತೂರಿನಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದ ಬಸ್, ಮಾಣಿ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ…

  • Vitla: ರಸ್ತೆ ವಿವಾದ – ಮಹಿಳೆಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆದ ಗ್ರಾಮ ಪಂಚಾಯತ್ ಉಪಾಧ್ಯಕ್ಷ

    Vitla: ರಸ್ತೆ ವಿವಾದ – ಮಹಿಳೆಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆದ ಗ್ರಾಮ ಪಂಚಾಯತ್ ಉಪಾಧ್ಯಕ್ಷ

    ವಿಟ್ಲ: (ಮೇ.10) ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಪ್ಪಳ ಎಂಬಲ್ಲಿ ಪುಷ್ಪಾವತಿ ಎಂಬವರ ಮನೆಗೆ ಹೋಗುವ ಸಂಪರ್ಕ ರಸ್ತೆಗೆ ಸ್ಥಳೀಯ ನಿವಾಸಿ ಪದ್ಮನಾಭ ಸಫಲ್ಯ ಎಂಬಾತ ಗೇಟ್ ಹಾಕಿ ಬೀಗ ಜಡಿದು ಕಿರುಕುಳ ನೀಡಿದ್ದಾನೆ. ಇದನ್ನೂ ಓದಿ: ⭕Nelyadi: ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ!! ಈ ಬಗ್ಗೆ ವಿಚಾರಿಸಲು ಬಂದ ಪುಷ್ಪಾವತಿಯವರ ಮುಂದೆಯೇ ಪಂ‌ಚಾಯತ್ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ತನ್ನ ಚಡ್ಡಿ ಜಾರಿಸಿ ಗುಪ್ತಾಂಗವನ್ನು ಅಲ್ಲಾಡಿಸಿ ವಿಕೃತವಾಗಿ ವರ್ತಿಸಿದ್ದಾನೆ. ಮಾತೆತ್ತಿದರೆ ಮಹಿಳೆಯರ ಬಗ್ಗೆ ಗೌರವ, ದೇಶಪ್ರೇಮಿ,…

  • Puttur: ಪುತ್ತೂರು ಮುಳಿಯದಲ್ಲಿ ಲಲಿತಾ ಸಹಸ್ರನಾಮ ಪಠಣ, ಕುಂಕುಮಾರ್ಚನೆ

    Puttur: ಪುತ್ತೂರು ಮುಳಿಯದಲ್ಲಿ ಲಲಿತಾ ಸಹಸ್ರನಾಮ ಪಠಣ, ಕುಂಕುಮಾರ್ಚನೆ

    ಪುತ್ತೂರು:(ಮೇ.08) ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆ ತನ್ನ ನವೀಕೃತ, ನೂತನ ಹಾಗೂ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಏಪ್ರಿಲ್ 20 ರಿಂದ ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಅದರ ಭಾಗವಾಗಿ ಇಂದು ಮೇ 06 ರಂದು ಪುತ್ತೂರು ಮುಳಿಯದಲ್ಲಿ ಲಲಿತಾ ಸಹಸ್ರನಾಮ ಪಠಣದೊಂದಿಗೆ ಮಹಿಳೆಯರಿಂದ ಕುಂಕುಮಾರ್ಚನೆಯ ಪುಣ್ಯ ಕಾರ್ಯಕ್ರಮವನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು. ಊರಿನ ಗೌರವಾನ್ವಿತ ವೇದಮೂರ್ತಿ ಶ್ರೀ ಉದಯ ಭಟ್ ಅವರ ವೇದಪಾರಂಗತ ಸಾನ್ನಿಧ್ಯ ಈ…

  • Puttur: ದೇಶದಲ್ಲಿ ಮೊದಲ ಬಾರಿಗೆ ಜ್ಯುವೆಲ್ಲರಿ ಶಾಪ್ ನಲ್ಲಿ ವಜ್ರ ಪರೀಕ್ಷೆಯ ಯಂತ್ರ ಅಳವಡಿಸಿದ ಪುತ್ತೂರಿನ ಮಳಿಗೆ!!

    Puttur: ದೇಶದಲ್ಲಿ ಮೊದಲ ಬಾರಿಗೆ ಜ್ಯುವೆಲ್ಲರಿ ಶಾಪ್ ನಲ್ಲಿ ವಜ್ರ ಪರೀಕ್ಷೆಯ ಯಂತ್ರ ಅಳವಡಿಸಿದ ಪುತ್ತೂರಿನ ಮಳಿಗೆ!!

    ಪುತ್ತೂರು:(ಮೇ.6) ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಇಲ್ಲದ ವಸ್ತುಗಳು ಸಿಗೋದು ಅಷ್ಟು ಸುಲಭದ ಮಾತಲ್ಲ. ತಿನ್ನುವ ಆಹಾರ ಪದಾರ್ಥಗಳಿಂದ ಹಿಡಿದು, ಧರಿಸುವ ಆಭರಣದವರೆಗೂ ಇಂದು ಕಲಬೆರಕೆಯಿದೆ. ಅದರಲ್ಲೂ ತನ್ನ ದುಡಿಮೆಯಲ್ಲಿ ಕೂಡಿಟ್ಟು ಆಭರಣಗಳನ್ನು ತೆಗೆಯುವ ಸಂದರ್ಭದಲ್ಲಿ ಅಸಲಿ ಚಿನ್ನ,ವಜ್ರದ ಜೊತೆಗೆ ನಕಲಿ ಬಂದು ಸೇರಿಕೊಂಡಲ್ಲಿ ಭಾರೀ ನಷ್ಟ ಅನುಭವಿಸಬೇಕಾಗುತ್ತೆ. ಇದನ್ನೂ ಓದಿ: 🟠ಬೆಳ್ತಂಗಡಿ : ಶ್ರೀ ಬದಿನಡೆ ಕ್ಷೇತ್ರದಲ್ಲಿ ಪ್ರಾಯಶ್ಚಿತ್ತಾದಿ ಪೂಜೆ ಹಾಗೂ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಚಿನ್ನದಲ್ಲಿ ಕಲಬೆರಕೆ ಇದ್ದಂತೆ ವಜ್ರದಲ್ಲೂ ಕಲಬೆರಕೆ ಹೆಚ್ಚಾಗುತ್ತಿದ್ದು, ಇವುಗಳನ್ನು ಪತ್ತೆಹಚ್ಚಲು…

  • Puttur: ಉದ್ಯಮಿ ರಾಜಾರಾಂ ಭಟ್ ಹೃದಯಾಘಾತದಿಂದ ನಿಧನ

    Puttur: ಉದ್ಯಮಿ ರಾಜಾರಾಂ ಭಟ್ ಹೃದಯಾಘಾತದಿಂದ ನಿಧನ

    ಪುತ್ತೂರು:(ಮೇ.6) ಉದ್ಯಮಿ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಅರುಣ್ ಕುಮಾ‌ರ್ ಅವರ ಪುತ್ತಿಲ ಪರಿವಾರದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿದ್ದ ಎಡಕ್ಕಾನ ರಾಜಾರಾಮ ಭಟ್ ರವರು ಇಂದು ಮುಂಜಾನೆ ದುಬೈಯಲ್ಲಿ ಹೃದಯಾಘಾತದಿಂದ ನಿಧನಾರಾದರೆಂದು ತಿಳಿದುಬಂದಿದೆ. ಇದನ್ನೂ ಓದಿ: ⛔ಬೆಳ್ತಂಗಡಿ: ಶ್ರೀ ಕ್ಷೇ.ಧ.ಗ್ರಾ.ಯೋ.ಮೈರೋಳ್ತಡ್ಕ ಒಕ್ಕೂಟ & ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮೈರೋಳ್ತಡ್ಕ ಸಂಯುಕ್ತ ಆಶ್ರಯದಲ್ಲಿ ಸುಳ್ಯದ ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆ ಎಂಬಲ್ಲಿಯ ನಿವಾಸಿಯಾದ ರಾಜಾರಾಮ ಭಟ್ ರು ಎಡಕ್ಕಾನ ಟ್ರೇಡರ್ಸ್ ಎಂಬ ವ್ಯಾಪಾರ ಮಳಿಗೆಯನ್ನು ಹೊಂದಿದ್ದರಲ್ಲದೆ, ದುಬೈ,…

  • Pernaje: ದಾವಣಗೆರೆಯಲ್ಲಿ ಜೇನು ಗಡ್ಡಧಾರಿ ವಿಶಿಷ್ಟ ಬರಹಗಾರ್ತಿ ಸೌಮ್ಯಾ ಪೆರ್ನಾಜೆ ಅವರಿಗೆ “ಸರಸ್ವತಿ ಸಾಧಕ ಸಿರಿ” ರಾಷ್ಟ್ರಪ್ರಶಸ್ತಿ ಪ್ರಧಾನ

    Pernaje: ದಾವಣಗೆರೆಯಲ್ಲಿ ಜೇನು ಗಡ್ಡಧಾರಿ ವಿಶಿಷ್ಟ ಬರಹಗಾರ್ತಿ ಸೌಮ್ಯಾ ಪೆರ್ನಾಜೆ ಅವರಿಗೆ “ಸರಸ್ವತಿ ಸಾಧಕ ಸಿರಿ” ರಾಷ್ಟ್ರಪ್ರಶಸ್ತಿ ಪ್ರಧಾನ

    ಪೆರ್ನಾಜೆ:(ಮೇ.5) ಏಪ್ರಿಲ್ 27ರ ಭಾನುವಾರ ಚೆನ್ನ ಗಿರಿ ವಿರೂಪಾಕ್ಷ ಕಲ್ಯಾಣ ಮಂಟಪ ದಾವಣಗೆರೆ ಇಲ್ಲಿ ಕನ್ನಡ ನಾಡು ನುಡಿ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿ ಹೀಗೆ ಎಲ್ಲಾ ಪ್ರಕಾರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದನ್ನು ಪರಿಗಣಿಸಿ ಕಲಾಕೃತಿ ಸಾಂಸ್ಕೃತಿಕ ಸಂಸ್ಥೆಯು ಸಹಯೋಗದಲ್ಲಿ 70ನೇ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಸರಸ್ವತಿ ಸಾಧಕ ಸಿರಿ 2025 ರಾಷ್ಟ್ರ ಪ್ರಶಸ್ತಿಯನ್ನು ಜೇನು ಗಡ್ಡಧಾರಿ ವಿಶಿಷ್ಟ ಬರಹಗಾರ್ತಿ ಸೌಮ್ಯಾ ಪೆರ್ನಾಜೆ, ಪ್ರತಿಷ್ಠಾನದ ಸಂಸ್ಥಾಪಕರಾದ ಗಣೇಶ ಶೆಣೈ ಸಾಲಿಗ್ರಾಮದ ಸಮಾರಂಭದ ಅಧ್ಯಕ್ಷರು ಪ್ರಧಾನ ಮಾಡಿದರು.…

  • PUTTUR: (ಮೇ.05)ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಶ್ರೀರಾಮ ಪುನರಾಗಮನ ನೃತ್ಯರೂಪಕ

    PUTTUR: (ಮೇ.05)ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಶ್ರೀರಾಮ ಪುನರಾಗಮನ ನೃತ್ಯರೂಪಕ

    ಪುತ್ತೂರು: ರಾಮಾಯಣ ಮಹಾಕಾವ್ಯ ನಮಗೆಲ್ಲರಿಗೂ ಗೌರವದ ಕಲಾಕೃತಿ. ಹಿಂದೂ ಪರಮಪವಿತ್ರ ಗ್ರಂಥವಾದ ಶ್ರೀ ರಾಮಾಯಣವು ನಮಗೆಲ್ಲರಿಗೂ ಸದಾ ಆದರ್ಶವಾಗಿರುವಂತಹ ಪ್ರಭು ಶ್ರೀರಾಮನ ಜೀವನದ ಚಿತ್ರಣ. ಪ್ರತಿಯೊಂದು ಜೀವಿಯೂ ತಾನು ಹೇಗೆ ಬದುಕಬೇಕು ಎಂಬುದರ ದೃಷ್ಟಾಂತರೂಪವನ್ನು ಶ್ರೀರಾಮಾಯಣ ಮಹಾಕಾವ್ಯದಲ್ಲಿ ಅಳವಡಿಸಲಾಗಿದೆ. ಪಂಚವಟಿಯಲ್ಲಿ ರಾಮ ಲಕ್ಷ್ಮಣ ಸೀತೆಯರು ವನವಾಸ ಮಾಡುತ್ತಿರುವಾಗ ರಾವಣನಿಂದ ಅಪಹೃತಗೊಂಡ ಸೀತೆಯನ್ನು ಅರಸಿ ರಾವಣನ ವಧೆಯ ಬಳಿಕ ಮತ್ತೆ ಎಲ್ಲರೂ ಒಂದಾಗಿ ಅಯೋಧ್ಯೆಗೆ ಹಿಂದಿರುಗಿ ಪಟ್ಟಾಭಿಷೇಕವಾಗುವ ಕಥೆಯನ್ನು ಶ್ರೀರಾಮ ಪುನರಾಗಮನ ರೂಪಕದಲ್ಲಿ ಅಳವಡಿಸಲಾಗಿದೆ. ಮುಳಿಯ ದ ನವೀಕೃತ…

  • Puttur: ಪತ್ನಿಯ ಕೊಲೆಯಾಗಿದೆ, ಪತ್ನಿಯನ್ನು ಮಗನೇ ಕೊಂದಿರುವುದಾಗಿ ಪೊಲೀಸರಿಗೆ ಕರೆ ಮಾಡಿ ಹೇಳಿದ ವ್ಯಕ್ತಿ – ಸ್ಥಳಕ್ಕೆ ಹೋದ ಪೋಲಿಸರಿಗೆ ಕಾದಿತ್ತು ಶಾಕ್!!

    Puttur: ಪತ್ನಿಯ ಕೊಲೆಯಾಗಿದೆ, ಪತ್ನಿಯನ್ನು ಮಗನೇ ಕೊಂದಿರುವುದಾಗಿ ಪೊಲೀಸರಿಗೆ ಕರೆ ಮಾಡಿ ಹೇಳಿದ ವ್ಯಕ್ತಿ – ಸ್ಥಳಕ್ಕೆ ಹೋದ ಪೋಲಿಸರಿಗೆ ಕಾದಿತ್ತು ಶಾಕ್!!

    ಪುತ್ತೂರು:(ಮೇ.1) ಪುತ್ತೂರಿನ ಬೆಳಿಯೂರುಕಟ್ಟೆ ಸಮೀಪ ವೃದ್ಧರೊಬ್ಬರು ಪುತ್ತೂರು ಗ್ರಾಮಾಂತರ ಠಾಣೆಗೆ ಬಂದು ನನ್ನ ಪತ್ನಿಯನ್ನು ಮಗನೇ ಕೊಂದಿರುವುದಾಗಿ ದೂರು ನೀಡಿರುವ ಘಟನೆ ನಡೆದಿತ್ತು. ಕೂಡಲೇ ಪೊಲೀಸರು ಒಂದು ಕ್ಷಣ ಕೂಡಾ ವ್ಯರ್ಥ ಮಾಡದೆ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಠಾಣೆಯಿಂದ ಹೊರಡುವಾಗ ದಾರಿ ಮಧ್ಯೆ ಕೊಲೆ ನಡೆದಿದೆ ಎಂದು ಹೇಳಲಾದ ಅಕ್ಕಪಕ್ಕದವರಿಗೂ ಪೊಲೀಸರು ಕರೆ ಮಾಡಿದ್ದಾರೆ. ಇದನ್ನೂ ಓದಿ: ⭕ಬೆಳ್ತಂಗಡಿ: ಮಂಗಳೂರಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣ ಖಂಡನೀಯ: ರಕ್ಷಿತ್ ಶಿವರಾಂ ಈ ವೇಳೆ ವ್ಯಕ್ತಿ ತನ್ನ ಪತ್ನಿಯ…

  • Puttur: ಕೆಎಸ್‌ಆರ್‌ಟಿಸಿ ಬಸ್‌ & ಬೈಕ್‌ ನಡುವೆ ಭೀಕರ ಅಪಘಾತ – ಬೈಕ್ ಸವಾರ ಸಾವು!

    Puttur: ಕೆಎಸ್‌ಆರ್‌ಟಿಸಿ ಬಸ್‌ & ಬೈಕ್‌ ನಡುವೆ ಭೀಕರ ಅಪಘಾತ – ಬೈಕ್ ಸವಾರ ಸಾವು!

    ಪುತ್ತೂರು:(ಎ.30) ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕೇರಳ ನೋಂದಾಯಿತ ಬುಲೆಟ್ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಎ. 29 ರಂದು ವರದಿಯಾಗಿದೆ. ಇದನ್ನೂ ಓದಿ: 🟠ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಕಲಾವಿದರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಅಪಘಾತಕ್ಕೀಡಾದ ಬೈಕ್ ಸವಾರ ಕಾಸರಗೋಡು ಜಿಲ್ಲೆಯ ವರ್ಕಾಡಿ ಗ್ರಾಮದ ಪಾತೂರು ಸಮೀಪದ ಬದಿಮೂಲೆ ಎಂಬಲ್ಲಿ ವಾಸವಾಗಿರುವ ಅಶ್ರಫ್ ಎಂದು ತಿಳಿದು…

  • Puttur: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿಗೆ ಖಂಡನೆ – ಪುತ್ತೂರಿನಲ್ಲಿ ಎಬಿವಿಪಿ ಪ್ರತಿಭಟನೆ

    Puttur: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿಗೆ ಖಂಡನೆ – ಪುತ್ತೂರಿನಲ್ಲಿ ಎಬಿವಿಪಿ ಪ್ರತಿಭಟನೆ

    ಪುತ್ತೂರು:(ಎ.26) ಜಮ್ಮು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ಹೇಡಿತನದ ಗುಂಡಿನ ದಾಳಿ ಕೃತ್ಯವನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಇದನ್ನೂ ಓದಿ: ⭕ಪುತ್ತೂರು: ಸರಕಾರಿ ವೈದ್ಯಾಧಿಕಾರಿಗಳ ಮೇಲೆ ಹಲ್ಲೆ ಆರೋಪ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದು ಸಾರ್ವಕಾಲಿಕ ಸತ್ಯ, ಅಲ್ಲಿನ ಪ್ರತ್ಯೇಕವಾದ ಮನಸ್ಥಿತಿಯನ್ನು ಬದಲಾಯಿಸಲು ಹಾಗೂ ಜನ-ಜೀವನ ಸ್ಥಿತಿಗತಿಗಳನ್ನು ಸ್ಥಿರಗೊಳಿಸಿ ಶಾಂತಿಯುತ ಕಾಶ್ಮೀರವೆಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿರುತ್ತದೆ. ಆದರೂ ಸಹ ಅಲ್ಲಿನ ಭಯೋತ್ಪಾದಕರ ನುಸುಳುಕೋರರ ಹಾವಳಿ…