Fri. Apr 4th, 2025

ಅಯೋಧ್ಯೆ ರಾಮ ಮಂದಿರದಲ್ಲಿ ಗುಂಡಿನ ದಾಳಿ- ಕರ್ತವ್ಯನಿರತ ಎಸ್​ಎಸ್​ಎಫ್ ಯೋಧ ಮೃತ್ಯು

ಅಯೋಧ್ಯೆ (ಜೂನ್ 19) : ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್‌ಎಸ್‌ಎಫ್ ಯೋಧ ಗುಂಡಿಗೆ ಬಲಿಯಾಗಿದ್ದಾರೆ. ಬುಧವಾರ ಬೆಳಗ್ಗೆ 5.25ಕ್ಕೆ ಈ ಘಟನೆ ನಡೆದಿದೆ. ಗುಂಡಿಗೆ ಬಲಿಯಾದ ಯೋಧ ಅಂಬೇಡ್ಕರ್ ನಗರದ ನಿವಾಸಿ ಶತ್ರುಘ್ನ ವಿಶ್ವಕರ್ಮ(25) ಎಂದು ತಿಳಿದು ಬಂದಿದೆ.
ಆವರಣದಲ್ಲಿ ಗುಂಡಿನ ಸದ್ದು ಕೇಳಿದ ಬಳಿಕ ಸಹ ಸಿಬ್ಬಂದಿ ಅಲ್ಲಿಗೆ ಓಡೋಡಿ ಬಂದಿದ್ದಾರೆ, ಅಷ್ಟರಲ್ಲಾಗಲೇ ಯೋಧ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಯೋಧನ ಸಾವು, ಅಯೋಧ್ಯೆ ದೇಗುಲ ಸಂಕೀರ್ಣದಲ್ಲಿ ಸಂಚಲನ ಮೂಡಿಸಿದೆ. ಘಟನಾ ಸ್ಥಳಕ್ಕೆ ಐಜಿ ಮತ್ತು ಎಸ್‌ಪಿ ಆಗಮಿಸಿ ಪರಿಶೀಲನೆ ನಡೆಸಿದರು. ಫೋರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು. ಪ್ರಾಥಮಿಕ ತನಿಖೆಯಲ್ಲಿ ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ.