Wed. Nov 20th, 2024

ಉಜಿರೆ : ಅನುಗ್ರಹ ಶಾಲಾ ಬಳಿ ಹಳ್ಳಿ ಮನೆ ಪ್ರವೀಣ್ ರಿಂದ ಪ್ರತಿಭಟನೆ

ಉಜಿರೆ :(ಜೂ.23) ಅನುಗ್ರಹ ಶಾಲಾ ಬಳಿ ಹಳ್ಳಿಮನೆ ಪ್ರವೀಣ್ ರಿಂದ ಇಂದು ಪ್ರತಿಭಟನೆ ನಡೆಯಿತು. ಗುತ್ತಿಗೆದಾರರ ನಿರ್ಲಕ್ಷ್ಯ ತನಕ್ಕೆ ಜನರ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆ ತುಂಬೆಲ್ಲಾ ಕೆಸರಾಗಿ , ಇದು ನಾವು ಹೋಗುವ ರಸ್ತೆನಾ ಎಂದು ಜನರು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಈ ರಸ್ತೆಯ ಅಭಿವೃದ್ಧಿಯ ಬಗ್ಗೆ ಜನರು ಎಷ್ಟೋ ಸಲ ಗುತ್ತಿಗೆದಾರರಿಗೆ ಪ್ರಶ್ನೆ ಮಾಡಿದ್ದಾರೆ , ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಆದರೆ ಗುತ್ತಿಗೆದಾರರು ಮಾತ್ರ ಡೋಂಟ್ ಕ್ಯಾರ್ ಎನ್ನುತ್ತಿದ್ದಾರೆ. 
ರಸ್ತೆ ಅನ್ನೋದು ಜನರ ಸಂಚಾರಕ್ಕೆ ಉಪಯೋಗವಾಗುವಂತದ್ದೇ ಹೊರತು ಜನರ ಜೀವನದ ಜೊತೆ ಆಟ ಆಡಲು ಅಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ನ್ಯಾಷನಲ್ ಹೈವೇ ಕಾಮಗಾರಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ.
ಆದರೆ ಉಜಿರೆಯಿಂದ ಚಾರ್ಮಾಡಿ ಹೋಗುತ್ತಿರುವ ರಸ್ತೆಯ ಅವ್ಯವಸ್ಧೆ ಕುರಿತು ಮಾತಾಡಿದ್ರು ಕೂಡಾ ಯಾರೂ ಕ್ಯಾರೇ ಅನ್ನದೇ ಇರುವುದು ಮಾತ್ರ ಆಶ್ಚರ್ಯದ ಸಂಗತಿ. ಈ ರಸ್ತೆಯಲ್ಲಿ ದಿನ ನಿತ್ಯ ಬೈಕು, ಕಾರು, ರಿಕ್ಷಾ, ಲಾರಿ, ಬಸ್ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತದೆ.
ಕೆಸರು ತುಂಬಿದ ಈ ರಸ್ತೆ ಯಮಲೋಕಕ್ಕೆ ಆಹ್ವಾನ ನೀಡುವಂತಿದೆ. ಪ್ರತಿದಿನ ದ್ವಿಚಕ್ರ ವಾಹನಗಳು ಈ ಕೆಸರುಮಯ ರೋಡಿನಲ್ಲಿ ಸಂಚರಿಸುವಾಗ ಬಿದ್ದು ಪ್ರಾಣಾಪಾಯ,  ಆದರೂ ಇಲ್ಲಿನ ಜನರ ಪ್ರಾಣಕ್ಕೆ ಬೆಲೆನೇ ಇಲ್ಲ.
ಮುಂದಿನ ಪೀಳಿಗೆಯ ಸಂಪತ್ತಾದ ಪುಟಾಣಿ ಮಕ್ಕಳಿಂದ ಹಿಡಿದು ಯುವಪೀಳಿಗೆ ವಿದ್ಯಾಭ್ಯಾಸಕ್ಕಾಗಿ ಇದೇ ದಾರಿಯಲ್ಲಿ ಹೋಗಬೇಕಾದ ಪರಿಸ್ಥಿತಿ. ಇಲ್ಲಿ ನಿತ್ಯ ಸಂಚಾರಿಗಳ ಗೋಳು ಮಾತ್ರ ಯಾರ ಕಿವಿಗೂ ಬೀಳುತ್ತಿಲ್ಲ. ಈ ರಸ್ತೆಯಲ್ಲಿ ಗರ್ಭಿಣಿ ಹೆಂಗಸರೂ ಸಂಚರಿಸಿದರಂತೂ ರಸ್ತೆಯಲ್ಲೇ ಹೆರಿಗೆ ಆಗೋದು ಗ್ಯಾರಂಟಿ. ಇನ್ನೂ  ತೀರಾ ಗಂಭೀರ ಆರೋಗ್ಯ ಸಮಸ್ಯೆ ಇರೋರು ಈ ಮಾರ್ಗ ನಂಬಿ ಹೊರಟ್ರೆ ತಲುಪೋದು ಆಸ್ಪತ್ರೆ ಅಲ್ಲ. ಡೈರೆಕ್ಟ್ ಆಗಿ ಯಮಲೋಕಕ್ಕೆ.
ಮಳೆಗಾಲ ಆರಂಭಕ್ಕೂ ಮೊದಲೇ ಧೂಳಿನಿಂದ ತುಂಬಿರುತ್ತದ್ದ ರಸ್ತೆಗೆ ನೀರು ಸಿಂಪಡನೆ ಮಾಡುತ್ತಿದ್ದಾಗಲೂ ದಿನಕ್ಕೆ ಕನಿಷ್ಠಪಕ್ಷ ಐದಾರು ದ್ವಿಚಕ್ರ ವಾಹನ ಸವಾರರು ಎದುರಿನಿಂದ ಬರುವ ಘನ ವಾಹನಗಳ ಚಕ್ರಗಳಿಗೆ ಆಹಾರವಾಗುತ್ತಿದ್ದನ್ನು,  ವರದಿ ಮಾಡಿದಾಗಲೂ ಯಾವುದೇ ಕ್ರಮ ಕೈಗೊಂಡಿಲ್ಲ.
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸ್ವತಃ ಭೇಟಿ ನೀಡಿ ಅಧಿಕಾರಿಗಳಿಗೆ ಕ್ಲಾಸ್ ತಗೊಂಡ್ರೂ ಸಿಕ್ಕಿದ ರಿಸಲ್ಟ್ ಮಾತ್ರ ಸೊನ್ನೆಯಾಗಿದೆ. 
 ಇನ್ನು ಜಡಿಮಳೆ ಸುರಿಯುತ್ತಿರುವಾಗ ಕೆಸರು ತುಂಬಿದ ಈ ರಸ್ತೆ ಸಂಚಾರ ಯೋಗ್ಯವಾಗೋದಾದ್ರೂ ಹೇಗೆ? ಕಾಮಗಾರಿಯ ಪ್ರಾರಂಭಕ್ಕೊಮ್ಮೆ ಬಂದು ಫೋಟೋಗೆ ಫೋಸ್ ಕೊಡುವ ಈ ಅಧಿಕಾರಿಗಳಿಗೆ ಈ ರಸ್ತೆಯ ಪಯಣ ಮಸಣಕ್ಕೆ ಅಂತ ಗೊತ್ತಾಗೋದಾದ್ರು ಹೇಗೆ? ಇನ್ನು ರಸ್ತೆ ಕಾಮಗಾರಿ ವಹಿಸಿಕೊಳ್ಳೋ ಕಾಂಟ್ರಾಕ್ಟರ್ ಗಳಿಗಂತೂ ಅವ್ರ ಕಿಸೆ ತುಂಬಿದ್ರೆ ಸಾಕು. ಇನ್ನೊಂದು ಮನೆಯ ಗೋಳು ಬೇಡ ಎನ್ನುವ ಮನಸ್ಥಿತಿಯಲ್ಲಿ ಇದ್ದಾರೆ. 
ಜನರಿಗೆ ಇಷ್ಟೊಂದು ಸಮಸ್ಯೆ ಆಗ್ತಾ ಇದ್ರೂ ಕೂಡಾ ಅಧಿಕಾರಿಗಳು ಮಾತ್ರ ಕಪ್ಪು ಕನ್ನಡಕ ಹಾಕ್ಕೊಂಡು ಎಸಿ ರೂಮಲ್ಲಿ ಆರಾಮಾಗಿ ಇರೋಕೆ ಹೇಗೆ ಸಾಧ್ಯ? ಸಾಮಾನ್ಯ ಜನರಿಂದಾನೆ ಈ ಸರಕಾರ, ಈ ಅಧಿಕಾರ, ಈ ಹಣ ಬಲ ಅನ್ನೋದು ಮರೆತುಬಿಟ್ರಾ? ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಇನ್ನೆಷ್ಟು ಅನಾಹುತ ನಡೀಬೇಕು ಇಲ್ಲಿ? ಜನರ ಆಕ್ರೋಶ, ಕ್ರೋಧ, ನಿರ್ಲಕ್ಷ್ಯ ಮಾಡ್ತಾ ಇರೋ ಇವ್ರುಗಳಿಗೆ ಯಾರ ಆಶೀರ್ವಾದ ಇದೆ ಅನ್ನೋದು ಮಾತ್ರಾ ಅವ್ರೇ ಹೇಳ್ಬೇಕು….