ಉಜಿರೆ :(ಜೂ.26) ಪರೋಪಕಾರಿ, ಜನಸ್ನೇಹಿ ಆಗಿರುವುದು ಕೂಡಾ ಅಪರಾಧವೇ …?
ಬೆಳ್ತಂಗಡಿ ತಾಲೂಕಿನ ಉಜಿರೆಯ ಹಳ್ಳಿಮನೆ ರೆಸ್ಟೋರೆಂಟ್ ಮಾಲೀಕ ಪ್ರವೀಣ್ ಫೆರ್ನಾಂಡಿಸ್ ಅವರ ಮೇಲೆ ಎಫ್.ಐ.ಅರ್ ಆಗಿರುವುದೇ ಇದಕ್ಕೆ ಸಾಕ್ಷಿ. . ಉಜಿರೆಯಲ್ಲಿ ಚಲಿಸುತ್ತಿದ್ದ ರಿಕ್ಷಾ ಹಾಗೂ ಎರಡು ಕಾರುಗಳ ಮೇಲೆ ಬೃಹತ್ ಗಾತ್ರದ ಮರ ಬಿದ್ದು ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ವಿಚಾರದಲ್ಲಿ ಜನ ಸಾಮಾನ್ಯರಿಗಾಗಿ ರಸ್ತೆ ಮೇಲೇ ಕುಳಿತು ನ್ಯಾಯ ಕೇಳಿದ ಪ್ರವೀಣ್ ಹಳ್ಳಿಮನೆ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿರುವುದು ತಪ್ಪಾಗಿದೆ ಇಲ್ಲಿನ ಪೊಲೀಸ್ ಅಧಿಕಾರಿಗಳಿಗೆ .
ಹೆದ್ದಾರಿ ಕಾಂಟ್ರಾಕ್ಟ್ ವಹಿಸಿಕೊಂಡ ಅಧಿಕಾರಿಗಳನ್ನು ಪ್ರಶ್ನಿಸಿದ್ದೇ ತಪ್ಪಾಯಿತಾ? ಪ್ರವೀಣ್ ಸೇರಿದಂತೆ 16 ಮಂದಿಯ ಮೇಲೆ ಎಫ್.ಐ.ಆರ್ ದಾಖಲಿಸಿದ ಅಸಹಾಯಕ ಪೊಲೀಸರು .. ಮರ ಬಿದ್ದು ಜಸ್ಟ್ ಪ್ರಾಣಾಪಾಯದಿಂದ ಮಿಸ್ ಆದ ಚಾಲಕರ ಪರ ಮಾತನಾಡಿದ ಪ್ರವೀಣ್ ಮೇಲೆ ಕೇಸು ದಾಖಲಿಸೋದು ಯಾವ ಸೀಮೆ ನ್ಯಾಯ? ಪರ್ಮಿಷನ್ ಇಲ್ಲದೆ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಕೇಸ್ ದಾಖಲು ಮಾಡೋದಾದ್ರೆ ಅಧಿಕಾರಿಗಳಿಂದ ಆದ ಅನ್ಯಾಯಕ್ಕೆ ನ್ಯಾಯ ಎಲ್ಲಿದೆ? ಇವರುಗಳ ಮಧ್ಯೆ ನ್ಯಾಯ ಕೇಳೋದೇ ತಪ್ಪಾ ? ನಡೆದ ಅನ್ಯಾಯ ಇವರ ಕಣ್ಣಿಗೆ ಕಾಣೋದಿಲ್ವಾ ಹಾಗಾದ್ರೆ ? ಈ ಅಂಧ ಅಧಿಕಾರಿಗೆ ಸಾಮಾನ್ಯ ಜನರ ಪ್ರಾಣಕ್ಕಿಂತ ಟ್ರಾಫಿಕ್ ಸಮಸ್ಯೆಯೇ ಹೆಚ್ಚಾಯಿತೇ? ಜನಪರ ನಾಯಕನಾಗಿ ಬೆಳೆಯುತ್ತಿರುವ ಪ್ರವೀಣ್ ರನ್ನು ತಡೆಯಲು ನಡೆಯುತ್ತಿರುವ ಷಡ್ಯಂತ್ರವೇ ಇದು ? ಜನಸಾಮಾನ್ಯರ ಸಮಸ್ಯೆಗಳಿಗೆ ಜನರೇ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಎಚ್ಚರಿಸ್ಬೇಕಾ ಇಲ್ಲಿ ? ಪ್ರವೀಣ್ ವಿರುದ್ಧ ಕೇಸ್ ಮಾಡಿದ ಪೊಲೀಸರಿಗೆ ಗುತ್ತಿಗೆ ವಹಿಸಿಕೊಂಡ ಕಂಟ್ರಾಕ್ಟರ್ ಮೇಲೆ ಕೇಸ್ ಮಾಡೋಕೆ ಆಗಲ್ವಾ? ಅವ್ರನ್ನ ಕರೆಸಿ ಪ್ರಶ್ನೆ ಮಾಡೋ ತಾಕತ್ತು ಇಲ್ವಾ? ಈ ಅಧಿಕಾರಿಗಳ ನಡೆಯನ್ನು ತಡೆ ಹಿಡಿಯೋದು ಯಾರು ? ಇಲ್ಲಿ ಕೇಸ್ ಮಾಡೋದಕ್ಕಿಂತ ಜನರಿಗೆ ಬೇಕಾಗಿರೋದು ನ್ಯಾಯ ಮಾತ್ರ .