ಉಜಿರೆ:(ಜೂ.24) ಬೆಳ್ತಂಗಡಿಯಿಂದ-ಉಜಿರೆ ಕಡೆಗೆ ಹಾದು ಹೋಗುವ ರಸ್ತೆಯ ಮಾವಂತೂರು ರೆಸಿಡೆನ್ಸಿ ಎದುರು ಇರುವ ಬೃಹತಾಕಾರದ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಮರ ಬಿದ್ದ ಕಾರಣ ರಿಕ್ಷಾವು ಸಂಪೂರ್ಣವಾಗಿ ಜಖಂ ಗೊಂಡಿದೆ ಹಾಗೂ ಇತರ ವಾಹನಗಳಿಗೂ ಕೂಡ ಹಾನಿ ಉಂಟಾಗಿದೆ ಬಂದಿದೆ.
ಮರ ರಿಕ್ಷಾ ದ ಮೇಲೆಯೇ ಬಿದ್ದ ಕಾರಣ ರಿಕ್ಷಾ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಮರವು ರಸ್ತೆಗೆ ಅಡ್ಡಲಾಗಿ ಬಿದ್ದ ಕಾರಣ ಕಿಲೋಮೀಟರ್ ದೂರ ಟ್ರಾಫಿಕ್ ಜಾಮ್ ಉಂಟಾಗಿ, ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾದ ಘಟನೆಯೂ ನಡೆಯಿತು.
ತಕ್ಷಣ ಉಜಿರೆ ಪಂಚಾಯತ್ ನಿಂದ ಮರ ತೆರವು ಕಾರ್ಯಾಚರಣೆ ನಡೆಯಿತು.
ಉಜಿರೆ: ಉಜಿರೆಯಲ್ಲಿ ಆಟೋ ರಿಕ್ಷಾದ ಮೇಲೆ ಬಿದ್ದ ಬೃಹತ್ ಆಕಾರದ ಮರ

test
Hello