Wed. Nov 20th, 2024

ಉಜಿರೆ : ಉಜಿರೆಯಲ್ಲಿ ಬೃಹತಾಕಾರದ ಮರ ಬಿದ್ದು ವಾಹನಗಳು ಜಖಂ : ಅರಣ್ಯ ಇಲಾಖೆಯವರ ವಿರುದ್ಧ ಪ್ರತಿಭಟನೆ

ಉಜಿರೆ :(ಜೂ.24)  ಬೆಳ್ತಂಗಡಿಯಿಂದ-ಉಜಿರೆ ಕಡೆಗೆ ಹಾದು ಹೋಗುವ ರಸ್ತೆಯ ಮಾವಂತೂರು ರೆಸಿಡೆನ್ಸಿ ಎದುರು  ಇರುವ ಬೃಹತಾಕಾರದ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದ ಘಟನೆ ನಡೆದಿದೆ. 
ಮರ ಬಿದ್ದ ಕಾರಣ ರಿಕ್ಷಾವು ಸಂಪೂರ್ಣವಾಗಿ  ಜಖಂ ಗೊಂಡಿದ್ದು , ಚಾಲಕನಿಗೆ ಗಂಭೀರ ಗಾಯವಾಗಿದೆ. ಅರಣ್ಯ, ಹೆದ್ದಾರಿ ಇಲಾಖೆಯ ವಿರುದ್ಧ ಪ್ರತಿಭಟನೆ ಆಕ್ರೋಶಗೊಂಡ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಜನರು ರಸ್ತೆಯಲ್ಲಿಯೇ  ಕೂತು ಪ್ರತಿಭಟನೆ ನಡೆಸುತ್ತಿದ್ದಾರೆ. 

ಇದರಿಂದ ಆಕ್ರೋಶಗೊಂಡ ಜನರು ರಸ್ತೆಯಲ್ಲಿಯೇ  ಕೂತು ಪ್ರತಿಭಟನೆ ನಡೆಸುತ್ತಿದ್ದಾರೆ. 
ಧಿಕ್ಕಾರ ಧಿಕ್ಕಾರ ಫಾರೆಸ್ಟ್ ನವರಿಗೆ ಧಿಕ್ಕಾರ ಎಂದು  ಕೂಗುತ್ತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಯಿಂದಾಗಿ ಕಿಲೋಮೀಟರ್ ನಷ್ಟು ದೂರ ಟ್ರಾಫಿಕ್ ಜಾಮ್ ಉಂಟಾಗಿ ಸಮಸ್ಯೆಯಾಗಿದೆ. 
ರಿಕ್ಷಾ ಚಾಲಕರ ಸಂಘದಿಂದ ಸಂಪೂರ್ಣ ಜಖಂಗೊಂಡ ರಿಕ್ಷಾ ನಡು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಧಾವಿಸದ ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿದ್ದಾರೆ. 

Leave a Reply

Your email address will not be published. Required fields are marked *