Thu. Apr 3rd, 2025

Rishi Sunak: ಬ್ರಿಟನ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ರಿಷಿ ಸುನಾಕ್ ರ ಪಕ್ಷಕ್ಕೆ ಸೋಲು

Rishi Sunak:(ಜು.6)  ಬ್ರಿಟನ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ರಿಷಿ ಸುನಾಕ್ ಅವರು ಸೋಲೊಪ್ಪಿಕೊಂಡಿದ್ದಾರೆ. ವಿಪಕ್ಷ ಲೇಬರ್ ಪಾರ್ಟಿ 300ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿದ್ದರೆ,  ರಿಷಿ ಸುನಾಕ್ ಅವರ ಕನ್ಸರ್ವೇಟಿವ್ ಪಕ್ಷ 61 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

“ಲೇಬರ್‌ ಪಾರ್ಟಿ ಚುನಾವಣೆ ಗೆದ್ದಿದೆ. ನಾನು ಸರ್‌ ಕೀರ್‌ ಸ್ಟಾರ್ಮರ್‌ ಅವರಿಗೆ ಕರೆ ಮಾಡಿ ವಿಜಯಕ್ಕೆ ಶುಭಾಶಯ ಸಲ್ಲಿಸಿದ್ದೇನೆ.  ಅಧಿಕಾರವನ್ನು ಶಾಂತಿಯುತವಾಗಿ ಹಾಗೂ ವ್ಯವಸ್ಥಿತವಾಗಿ ಹಸ್ತಾಂತರಿಸಲಾಗುವುದು. ಇದು ನಮ್ಮ ದೇಶದ ಸುಭದ್ರತೆ ಮತ್ತು ಭವಿಷ್ಯದ ಬಗ್ಗೆ ನಮ್ಮೆಲ್ಲರಲ್ಲೂ ವಿಶ್ವಾಸ ಮೂಡಿಸಬೇಕಿದೆ,” ಎಂದು ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ರಿಷಿ ಸುನಾಕ್‌ ಹೇಳಿದರು.

Leave a Reply

Your email address will not be published. Required fields are marked *