ಚಿಕ್ಕಬಳ್ಳಾಪುರ:(ಜು.9) ದೇವಸ್ಥಾನದ ಆವರಣದಲ್ಲಿ ಜೀವನ ಮಾಡುತ್ತಿದ್ದ ಲಕ್ಷ್ಮಮ್ಮ ಎಂಬ ವೃದ್ಧೆಯ ಸಹಾಯಕ್ಕೆ ಸಬ್ ಇನ್ಸ್ಪೆಕ್ಟರ್ ನೆರವಾದ ಸನ್ನಿವೇಶ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಲಕ್ಷ್ಮಮ್ಮ ಎಂಬ ಮಹಿಳೆ ಕಳೆದ 30 ವರ್ಷಗಳ ಹಿಂದೆ ಶ್ರೀರಂಗ ಪಟ್ಟಣದಿಂದ ಚಿಕ್ಕಬಳ್ಳಾಪುರಕ್ಕೆ ವಲಸೆ ಬಂದಿದ್ದರು. ಕೂಲಿ ಕೆಲಸ ಮಾಡಿಕೊಂಡು ತನ್ನ ಮಕ್ಕಳನ್ನು ನೋಡಿಕೊಂಡು ಚಿಕ್ಕಬಳ್ಳಾಪುರ ದೇವಸ್ಥಾನದ ಆವರಣದಲ್ಲಿ ಜೀವನ ಸಾಗಿಸುತ್ತಿದ್ದಳು. ಇತ್ತೀಚೆಗೆ ಮಕ್ಕಳನ್ನು ಕಳೆದುಕೊಂಡು ಲಕ್ಷ್ಮಮ್ಮ ಅನಾಥೆಯಾಗಿದ್ದಳು. ವಯಸ್ಸಾದ ಕಾರಣ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಮಕ್ಕಳನ್ನು ಕಳೆದುಕೊಂಡು , ಜೀವನ ವನ್ನು ಕಷ್ಟದಲ್ಲಿ ಸಾಗಿಸುತ್ತಿದ್ದ ಲಕ್ಷ್ಮಮ್ಮ ರಿಗೆ ಸಬ್ಇನ್ಸ್ಪೆಕ್ಟರ್ ಬೆಳಕಾಗಿದ್ದಾರೆ. ಲಕ್ಷ್ಮಮ್ಮ ಹೆಸರಲ್ಲಿ ಬ್ಯಾಂಕ್ ಅಕೌಂಟ್ ಮಾಡಿಸಿ, ಅವರ ಬಳಿ ಇದ್ದ ಲಕ್ಷ ರೂ.ಗಳನ್ನು ಬ್ಯಾಂಕ್ ಅಕೌಂಟ್ ಗೆ ಹಾಕಿಸಿದ್ದಾರೆ. ನಂತರ ಲಕ್ಷ್ಮಮ್ಮ ರನ್ನು ಶ್ರೀನಿವಾಸಪುರದ ಆಶ್ರಮಕ್ಕೆ ಕಳಿಸಿಕೊಟ್ಟಿದ್ದಾರೆ. ಸಬ್ಇನ್ಸ್ಪೆಕ್ಟರ್ ನಂಜುಂಡಯ್ಯ ಅವರ ಮಾನವೀಯತೆಗೆ ಜನರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.