ಬೆಂಗಳೂರು:(ಜು.9) ಸೈಬರ್ ವಂಚಕರು ರಿಜಿಸ್ಟರ್ ಪೋಸ್ಟ್ ಮೂಲಕ ಜನರನ್ನು ವಂಚಿಸಲು ಮುಂದಾಗಿದ್ದಾರೆ. ಭಾರತೀಯ ಅಂಚೆಯ ಕೆಂಪು ಬಣ್ಣದ ರಿಜಿಸ್ಟರ್ ಲಕೋಟೆ ನಿಮ್ಮ ಮನೆಗೆ ಬರುತ್ತೆ. ಈ ಲಕೋಟೆ ತೆರೆದರೆ ಒಳಗೆ ಭಾರತ ಸರ್ಕಾರದ ಲಾಂಛನ ಇರುವ ರಿಜಿಸ್ಟರ್ ಕೂಪನ್ ಇರುತ್ತದೆ ಮತ್ತು ಅಪ್ಲಿಕೇಶನ್ ಫಾರ್ಮ್ ಇರುತ್ತದೆ. ಕೂಪನ್ ಮೇಲೆ ಸ್ಕ್ರ್ಯಾಚ್ ಮಾಡಿ ವಾಹನ ಗೆಲ್ಲಿ ಎಂದು ಇಂಗ್ಲಿಷ್ ಅಕ್ಷರಗಳಲ್ಲಿ ಬರೆದಿರುತ್ತದೆ. ನಂತರ ಸ್ಕ್ರ್ಯಾಚ್ ಮಾಡಿದರೆ, ನೀವು 12 ಲಕ್ಷದ 80 ಸಾವಿರ ಹಣ ಗೆದ್ದಿದ್ದೀರಿ. ಮತ್ತು ಅದರ ಕೆಳಗೆ ಒಂದು ಎಸ್ಎಂಎಸ್ ಕೋಡ್ ಕೂಡ ಇರುತ್ತದೆ.
ವಂಚಕರು ಅದೇ ಕಾರ್ಡಲ್ಲಿ ಸ್ಕ್ಯಾನರ್ ಅಳವಡಿಸಿದ್ದಾರೆ. ಅದನ್ನು ಸ್ಕ್ಯಾನ್ ಮಾಡಿದರೆ ಅಥವಾ ಹೆಲ್ಪ್ ಲೈನ್ ನಂಬರ್‌ಗೆ ಕರೆ ಮಾಡಿದರೂ ಕೂಡ ನಿಮ್ಮ ಖಾತೆಯಲ್ಲಿನ ಹಣ ವಂಚಕರ ಪಾಲಾಗುತ್ತದೆ. ಹೀಗೆ ಸೈಬರ್ ವಂಚಕರು ಹೊಸ ವಂಚನೆಯ ವಿಧಾನವನ್ನು ಕಂಡುಕೊಂಡಿದ್ದಾರೆ.