Sun. Jan 11th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Aries To Pisces: ಮೇಷದಿಂದ ಮೀನವರೆಗೆ- ಇಂದು ಈ ರಾಶಿಯವರಿಗೆ ಶುಭ ಸಮಾಚಾರ ಕೇಳಿಬರುವುದು!!

ಮೇಷ ರಾಶಿ : ಇಂದು ನೀವು ಪರರ ಇಂಗಿತವನ್ನು ಅರ್ಥಮಾಡಿಕೊಂಡು ಮಾತನಾಡುವಿರಿ ಆಧ್ಯಾತ್ಮದಲ್ಲಿ ಆಸಕ್ತಿಯು ಕಂಡುಬರುವುದು. ಸಂತೋಷದ ಅನಂತರ ದುಃಖ ಎಂಬ ಮೂಢನಂಬಿಕೆಯನ್ನು ಬಿಡಿ.‌ ಸಂತೋಷವಾಗಿ ದಿನವನ್ನು ಕಳೆಯಿರಿ.

ವೃಷಭ ರಾಶಿ : ಇಂದು ನಿಮಗೆ ಹೊಸ ಉತ್ಪನ್ನಗಳ ಅವಶ್ಯಕತೆ ಇದ್ದರೆ ಮಾತ್ರ ಖರೀದಿಸಿ. ಪ್ರೇಮಿಯ ಜಾಣತನದ ಮಾತಿಗೆ ಮಾರು ಹೋಗಿ ಮಾತು ಕೊಡುವಿರಿ. ಹೊರಗೆ ಓಡಾಡುವಾಗ ಜಾಗರೂಕತೆ ಮುಖ್ಯ.‌ ಮೈ ಮರೆವಿನಲ್ಲಿ ಅಪಾಯವನ್ನು ತಂದುಕೊಳ್ಳುವಿರಿ.

ಮಿಥುನ ರಾಶಿ : ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ಒತ್ತಡ ಇರುವುದು. ಅದನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾಗುವುದು. ಮತ್ತಾವುದೋ ಕಾರ್ಯಗಳಿಗೆ ಉಪಯೋಗಕ್ಕೆಂದು ಇಟ್ಟಿದ್ದ ಹಣವು ಖಾಲಿಯಾಗಲಿದೆ.

ಕರ್ಕಾಟಕ ರಾಶಿ :ಯಾರದೋ ಕೆಳಗೆ ಕೆಲಸ ಮಾಡುವ ಮನಸ್ಸು ಹೋಗುವುದು. ನಿಮ್ಮದಾದ ಉದ್ಯಮದ ಕಡೆ ಮನಸ್ಸು ಇರುವುದು. ಹಳೆಯ ಹೂಡಿಕೆಯಿಂದ ಉಪಯೋಗವಾಗಲಿದೆ. ವಾಹನದ ದುರಸ್ತಿಯನ್ನು ಮಾಡಬೇಕಾಗಿಬರಬಹುದು.

ಸಿಂಹ ರಾಶಿ :ನೀವು ಇಂದು ಆಪ್ತರಿಂದ ಅಲ್ಪ ಹಣವನ್ನು ಸಾಲವಾಗಿ ಪಡೆಯುವಿರಿ. ನಿಮಗೆ ಉನ್ನತ ಸ್ಥಾನವನ್ನು ನೀಡುವ ಕುರಿತು ಚರ್ಚೆಗಳು ನಡೆಯುವುದು. ಸಂತೋಷದಿಂದ ಇರಲು ನಿಮಗೆ ಅನೇಕ ಕಾರಣಗಳು ಸಿಗುವುದು.

ಕನ್ಯಾ ರಾಶಿ : ನಿಮ್ಮ ಉದ್ಯಮಕ್ಕೆ ಸಲಹೆಗಾರರನ್ನು ನಿಯಮಿಸಿಕೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ಸೋಲುವ ಸಂಭವವಿದೆ. ಉದ್ಯೋಗದಲ್ಲಿ ಇರುವವರಿಗೆ ಕೆಲವು ಆಯ್ಕೆಗಳನ್ನು ಯಾರಾದರೂ ಕೊಡಬಹುದು.

ತುಲಾ ರಾಶಿ : ಇಂದು ವ್ಯಾಪಾರದ ಪೈಪೋಟಿಯು ನಿಮ್ಮ ನೆಮ್ಮದಿಯನ್ನು ಕೆಣಕಬಹುದು. ಪರರ ಬಗ್ಗೆ ಇರುವ ಅಸಮಾಧಾನವನ್ನು ಹೇಳಿಕೊಂಡು ಕಳೆಯುವಿರಿ. ದ್ವಂದ್ವಗಳು ಬಹಳ ನಿಮ್ಮನ್ನು ಕಾಡಲಿದ್ದು ಆಯ್ಕೆಗೆ ಬಹಳ ಕಷ್ಟ ಪಡುವಿರಿ.

ವೃಶ್ಚಿಕ ರಾಶಿ : ನೀವು ಎಲ್ಲವೂ ದೈವಾನುಗ್ರಹದಂತೆ ಆಗುತ್ತದೆ ಎಂದು ಸುಮ್ಮನಿರದೇ ಪ್ರಯತ್ನವನ್ನೂ ಮಾಡಿ. ವೃತ್ತಿಯಲ್ಲಿ ಕೆಲವು ಅನಿರೀಕ್ಷಿತ ಜವಾಬ್ದಾರಿಯನ್ನು ನಿರ್ವಹಣೆ ಮಾಡಬೇಕಾಗುವುದು. ಮನಸ್ಸಿದ್ದರೆ ಮಾರ್ಗ ಎನ್ನುವಂತೆ ನಿಮಗೆ ಒಳ್ಳೆಯದನ್ನು ಮಾಡಬೇಕು ಎಂಬ ಆಸೆ ಶುರುವಾದರೆ ಸಾಕು, ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ.

ಧನು ರಾಶಿ : ಉದ್ಯಮಿಗಳು ಬಹಳ ಓಡಾಟದಿಂದ ಲಾಭವನ್ನು ಮಾಡಿಕೊಳ್ಳಬೇಕು. ಸರ್ಕಾರಿ ಉದ್ಯೋಗವು ಕಿರಿಕಿರಿ ಎನಿಸಿದರೂ ನೀವು ಅದನ್ನು ಬಿಡಲಾರಿರಿ. ಇಷ್ಟು ದಿನ ದ್ವೇಷಿಸುತ್ತಿದ್ದ ವ್ಯಕ್ತಿಯು ಇಂದು ನಿಮ್ಮ ಮಿತ್ರನಾಗಲು ಬಂದಾನು. ನಿಮಗೆ ಅದು ಆಪತ್ತಿಗೆ ಸೂಚನೆಯಂತೆ ಕಂಡೀತು. ಕಾರ್ಯದ ಸ್ಥಳದಲ್ಲಿ ನಿಮ್ಮ ಸಹಾಯವನ್ನು ಅನೇಕರು ಬಯಸಿಯಾರು.

ಮಕರ ರಾಶಿ : ಆರ್ಥಿಕ ಕ್ಷೇತ್ರದ ಜನರಿಗೆ ತೊಂದರೆ ಬಾರದೇ ಕಾರ್ಯಗಳು ಮುಗಿಯುವುದು. ಯಾರಿಂದಲಾದರೂ ಸಿಗುವ ಪ್ರಶ‌ಂಸೆಯು ನಿಮಗೆ ಉತ್ತೇಜನ ಕೊಡಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಗಮನವು ಅಧಿಕವಾಗಲಿದೆ. ಖುಷಿಯಲ್ಲಿ ಇದ್ದೇನೆಂದು ಏನನ್ನಾದರು ಮಾಡಲು ಹೋಗಿ ದುಃಖವನ್ನು ತಂದುಕೊಳ್ಳಬಹುದು.

ಕುಂಭ ರಾಶಿ :ಇಂದು ನಿಮ್ಮ ಪರಿಧಿಯನ್ನು ಮೀರಿ ವರ್ತಿಸುವಿರಿ. ಸುತ್ತಲಿನ ಪರಿಸ್ಥಿತಿಯನ್ನು ಸಂದರ್ಭವನ್ನೂ ಗಮನಿಸಿಕೊಂಡು ವ್ಯವಹರಿಸಿ. ಉತ್ತಮವಾದ ಆಯ್ಕೆ ಮಾಡಿಕೊಳ್ಳಬೇಕೆಂದು ಹೋಗಿ ವಿಪರೀತವಾದ ಆಯ್ಕೆ ಮಾಡಿಕೊಂಡು ಬರುವಿರಿ.

ಮೀನ ರಾಶಿ :ನಿಮ್ಮ ವ್ಯಾಪಾರದಲ್ಲಿ ಇಂದು ವೆಚ್ಚಗಳು ಕಡಿಮೆಯಾಗಿ ಆದಾಯವೂ ಎಣಿಕೆಗಿಂತ ಅಧಿಕವಾಗಲಿದೆ. ಸ್ವಂತ ಉದ್ಯಮಿಗಳಾಗಿದ್ದರೆ ಹೆಚ್ಚಿನ ಲಾಭವೂ ಇದೆ. ಅವಿವಾಹಿತರಿಗೆ ವಿವಾಹ ಸಂಬಂಧವು ಬರಬಹುದು. ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಕೋನವಿರಲಿ.

Leave a Reply

Your email address will not be published. Required fields are marked *