Wed. Nov 20th, 2024

Beltangady : ಜು.13 ರಂದು ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಶ್ರೀ ಗುರು ಸಾನಿಧ್ಯ ಸಂಕೀರ್ಣದ ಲೋಕಾರ್ಪಣೆ

ಬೆಳ್ತಂಗಡಿ:(ಜು.9) ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.) ಬೆಳ್ತಂಗಡಿಯು 2007-08 ರಲ್ಲಿ ಪ್ರಾರಂಭಗೊಂಡು ಕಳೆದ ಸುದೀರ್ಘ 16 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಅದ್ಭುತ ಸಾಧನೆಯನ್ನು ಮಾಡಿಕೊಂಡು ಸಂಸ್ಥೆಯ ಧೈಯೋದ್ದೇಶಗಳನ್ನು ಈಡೇರಿಸುವ ಮುಖೇನ ಒಂದೊಂದು ಹೆಜ್ಜೆ ಮೇಲೆರುತ್ತ ಮುಂದಡಿ ಇಡುತ್ತಿದೆ ಎಂದು ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ಅವರು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ನೂತನ ಕೇಂದ್ರ ಕಛೇರಿಯು ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಒಟ್ಟು 11100 ಚದರ ಅಡಿ ವಿಸ್ತೀರ್ಣವುಳ್ಳ 3 ಮಹಡಿಗಳನ್ನು ಹೊಂದಿರುವ ಗುರುಸಾನಿಧ್ಯ ಎಂಬ ನಾಮಾಂಕಿತವುಳ್ಳ ಕೇಂದ್ರ ಕಛೇರಿಯು ಜು.13 ರಂದು ಲೋಕರ್ಪಣೆಯಾಗಲಿದೆ. ಇದರಲ್ಲಿ ನೆಲ ಮಹಡಿಯಲ್ಲಿ ಸಂಘಕ್ಕೆ ಬರುವ ಗ್ರಾಹಕರಿಗೆ ಸುಸಜ್ಜಿತವಾದ ಪಾರ್ಕಿಂಗ್ ಹೊಂದಿದ್ದು, ಕೆಳಮಹಡಿ ಮತ್ತು ಪ್ರಥಮ ಮಹಡಿಯು ವಾಣಿಜ್ಯ ಉದ್ದೇಶಕ್ಕೆ ಅನುಗುಣವಾದ ಸ್ಥಳವಾಗಿರುತ್ತದೆ. 2 ನೇ ಮಹಡಿಯಲ್ಲಿ ಸುಸಜ್ಜಿತವಾದ ಆಡಳಿತ ಕಚೇರಿಯನ್ನು ಹೊಂದಿದ್ದು, 3ನೇ ಮಹಡಿಯು ಸುಮಾರು 300 ರಷ್ಟು ಸಂಖ್ಯೆಯ ಸಾಮರ್ಥ್ಯ ಹೊಂದಿರುವ ಸಭಾಂಗಣವನ್ನು ಹೊಂದಿರುತ್ತದೆ. ಗ್ರಾಹಕರ ಅನುಕೂಲಕ್ಕಾಗಿ ಲಿಪ್ಟ್ ಸೌಲಭ್ಯ 60 ಕಿಲೋವ್ಯಾಟ್ ಸಾಮರ್ಥ್ಯದ ಸೋಲಾ‌ರ್ ಅಳವಡಿಕೆ ಮಾಡಲಾಗಿರುತ್ತದೆ ಎಂದರು.

ಇದನ್ನೂ ಓದಿ: ಮಂಗಳೂರು: ವೃದ್ಧ ದಂಪತಿಗಳಿದ್ದ ಮನೆಗೆ ಕನ್ನ ಹಾಕಿದ ಕಳ್ಳರು: ಕಿಟಕಿ ಸರಳು‌ ಮುರಿದು ಕಳ್ಳತನ ಮಾಡಿದ‌ ಖದೀಮರುhttps://uplustv.com/2024/07/09/ಮಂಗಳೂರು-ವೃದ್ಧ-ದಂಪತಿಗಳಿದ್ದ-ಮನೆಗೆ-ಕನ್ನ-ಹಾಕಿದ-ಕಳ್ಳರು-ಕಿಟಕಿ-ಸರಳು-ಮುರಿದು-ಕಳ್ಳತನ-ಮಾಡಿದ-ಖದೀಮರು

ಕೇಂದ್ರ ಕಚೇರಿ ಕಟ್ಟಡ ಮತ್ತು ಆಡಳಿತ ಕಚೇರಿಯು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಲೋಕಾರ್ಪಣೆಗೊಳಿಸಲಿದ್ದಾರೆ. ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠ ಬೆಂಗಳೂರು ಪೀಠಾಧಿಪತಿಗಳಾದ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜರವರು ವಹಿಸಲಿದ್ದು, ಆಡಳಿತ ಕಚೇರಿ ಉದ್ಘಾಟನೆಯನ್ನು ಕೆ.ಎನ್. ರಾಜಣ್ಣ ಮಾನ್ಯ ಸಹಕಾರ ಸಚಿವರು ನಡೆಸಲಿದ್ದು, ಭದ್ರತಾ ಕೊಠಡಿ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಭಾಭವನದ ಉದ್ಘಾಟನೆಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಹಕಾರಿ ಆಪ್ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ಹಾಗೂ ಮೂಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಮುಖ್ಯ ಅತಿಥಿಗಳಾಗಿ, ವಿಶೇಷ ಆಹ್ವಾನಿತರಾಗಿ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಭಗೀರಥ ಜಿ, ನಿರ್ದೇಶಕರಾದ ಸುಜಿತಾ ವಿ ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ,
ಕೆ.ಪಿ.ದಿವಾಕರ, ಜಗದೀಶ್ಚಂದ್ರ ಡಿ.ಕೆ, ಚಂದ್ರಶೇಖರ, ಧರ್ಣಪ್ಪ ಪೂಜಾರಿ, ಧರಣೇಂದ್ರ ಕುಮಾರ್ ಪಿ, ಗಂಗಾಧರ ಮಿತ್ತಮಾರು,
ಆನಂದ ಪೂಜಾರಿ, ಡಾ.ರಾಜಾರಾಮ ಕೆ.ಬಿ, ಜಯವಿಕ್ರಮ ಪಿ, ಸಂಘದ ವಿಶೇಷಾಧಿಕಾರಿಗಳಾದ ಎಂ. ಮೋನಪ್ಪ ಪೂಜಾರಿ,
ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್‌ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *