ಶಿಶಿಲ :(ಜು.10) ಶಿಶಿಲ ಗ್ರಾಮದ ಪೆರಿಕೆ ಎಂಬಲ್ಲಿ ಅನಾರೋಗ್ಯದಿಂದ ಸುಪ್ರೀತಾ ಎಂಬ ಬಾಲಕಿ ನಿಧನವಾದ ಘಟನೆ ನಡೆದಿದೆ.
ಕೃಷ್ಣಪ್ಪ ಮಲೆಕುಡಿಯ ಹಾಗೂ ಸುನಂದಾ ದಂಪತಿಯ ಪುತ್ರಿ ಸುಪ್ರೀತಾ (16) ಮೃತ ಬಾಲಕಿ.
ಸುಪ್ರೀತಾ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು. ಮಂಗಳವಾರ (ಜುಲೈ 9) ರಂದು ಆಕೆಯ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ತಕ್ಷಣವೇ ಆಕೆಯನ್ನು ಚಿಕಿತ್ಸೆಗಾಗಿ ಉಪ್ಪಿನಂಗಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮನೆಗೆ ಹಿಂದಿರುಗುವ ಮಾರ್ಗ ಮಧ್ಯೆ ಆಕೆ ಪ್ರಜ್ಞಾಹೀನಳಾಗಿದ್ದಳು. ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತರು ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.