Wed. Nov 20th, 2024

Karkala: ಸಹಾಯದ ನಿರೀಕ್ಷೆಯಲ್ಲಿ ಕಾರ್ಕಳದ ಕ್ರಿಸ್ತ ಸೇವಕಿ ಆಶ್ರಮ

ಕಾರ್ಕಳ:(ಜು.10) 1950 ರಲ್ಲಿ ಶುರುವಾದ ಆಶ್ರಮ ಕಾರ್ಕಳ ಹಾಗೂ ಇತರ ಕಡೆಗಳಲ್ಲಿ ತುಂಬಾ ಜನರಿಗೆ ಚಿರಪರಿಚಿತವಾಗಿದೆ. ಸಿಸ್ಟೆರ್ ಹನ್ನ ಅಚಿಮನ್ನ್ – ಸ್ವಿಸ್ ಮಿಷನರಿ 1950 ರಲ್ಲಿ ಶುರು ಮಾಡಿದ್ದೂ. ಆಶ್ರಮಕ್ಕೆ ಇನ್ನಷ್ಟು ದಾನಿಗಳು ಮುಂದೆ ಬಂದು ಧನಸಹಾಯ ನೀಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.

ಈ ಆಶ್ರಮಕ್ಕೆ ಯಾರು ಧನ ಸಹಾಯ ಕೂಡ ಮಾಡ್ತಾ ಇಲ್ಲ ಹಾಗೂ ಸರ್ಕಾರದಿಂದನೂ ಕೂಡ ಏನು ಸಿಕ್ತಾ ಇಲ್ಲ. ಈ ಆಶ್ರಮದಲ್ಲಿ ಭೇದಭಾವ ಇಲ್ಲದೆ ಎಲ್ಲಾ ವರ್ಗದ ಜನರಿದ್ದಾರೆ.

ಆಶ್ರಮದಲ್ಲಿ ಇದ್ದವರಿಗೆ ಮೆಡಿಸಿನ್ ನ ಅವಶ್ಯಕತೆ ತುಂಬಾ ಇದೆ. ಮೂರು ಹೊತ್ತು ಊಟೋಪಚಾರದ ವ್ಯವಸ್ಥೆಗೂ ಕೂಡ ಹಣದ ಅವಶ್ಯಕತೆ ಇದೆ. ಏನೋ ಹೀಗೋ ಹಾಗೋ ಬರ್ತಡೇ ಆಚರಿಸುವಂತಹ ಕೆಲವೊಂದು ಜನಪ್ರತಿನಿಧಿಗಳು ಬಂದು ಅಷ್ಟು ಇಷ್ಟು ಕೊಡ್ತಾ ಇದ್ದಾರೆ.

ಇನ್ನಷ್ಟು ಉದ್ಯಮಿಗಳು ಈ ಆಶ್ರಮದ ನೆರವಿಗೆ ಬರಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ಅದಲ್ಲದೆ ಈ ಆಶ್ರಮದ ವಿಶೇಷತೆ ಏನೆಂದರೆ ತುಂಬಾ ಹಳೆಯ ಕಾಲದ ವಸ್ತುಗಳು ನಾಣ್ಯಗಳು ಕಾಣ ಸಿಗುತ್ತದೆ. ತುಂಬಾ ಸುರಕ್ಷಿತವಾಗಿ ಜೋಪಾನವಾಗಿ ರಕ್ಷಿಸಿ ಇಟ್ಟಿದ್ದಾರೆ. ಬನ್ನಿ ನಾವೆಲ್ಲರೂ ಈ ಆಶ್ರಮಕ್ಕೆ ಕೈಜೋಡಿಸೋಣ.

ಈ ಸಂದರ್ಭದಲ್ಲಿ ನಮ್ಮ ತುಳುನಾಡು ಟ್ರಸ್ಟ್ (ರಿ.) ರಾಜ್ಯ ಸಂಚಾಲಕರಾದಂತಹ ತುಳುನಾಡ ತುಡರ್ ಕೀರ್ತಿ ಕಾರ್ಕಳ ಹಾಗೂ ಕಾರ್ಕಳ ಘಟಕದ ನಮ್ಮ ತುಳುನಾಡು ಟ್ರಸ್ಟಿನ ಮುಖ್ಯಸ್ಥರಾದಂತಹ ರವಿಚಂದ್ರ ಆರ್‌.ಸಿ. ಆಶ್ರಮದ ಮುಖ್ಯಸ್ಥರಾದಂತಹ ಫಾದರ್ ಬಿ. ಬೆರ್ಟಿ. ಅಮನ್ನಾ, ಹಾಗೂ ಮೆಲೋರಿ,ಮೋನಿಕಾ, ಕಿಶೋರ್ ಒಸ್ವಾಲ್ಡ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *