ಮೂಡಿಗೆರೆ:(ಜು.10) ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ, ಘಾಟಿ ಪಕ್ಕದ ಜಲಪಾತಗಳು ಧುಮ್ಮುಕ್ಕಿ ಹರಿಯುತ್ತಿವೆ. ಈ ಜಲಪಾತಗಳು ಅಪಾಯಕಾರಿಯಾಗಿದ್ದು, ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ಈ ಅಪಾಯಕಾರಿ ಜಲಪಾತಗಳಲ್ಲಿ ಮೋಜಿನಲ್ಲಿ ನಿರತರಾಗಿದ್ದವರ ಬಟ್ಟೆಗಳನ್ನು ಕೊಂಡೊಯ್ದು ತಮ್ಮ ಗಸ್ತು ವಾಹನದಲ್ಲಿರಿಸಿಕೊಂಡ ಪೊಲೀಸರು, ಯುವಕರನ್ನು ಚಡ್ಡಿಯಲ್ಲೇ ಓಡುವಂತೆ ಮಾಡಿದ್ದಾರೆ. ಬಣಕಲ್ ಗಸ್ತು ಪೊಲೀಸರು ಈ ಕ್ರಮ ಗೈಗೊಂಡಿದ್ದಾರೆ.
ಇದನ್ನೂ ಓದಿ: https://uplustv.com/2024/07/10/udupi-ಮಂಗಳೂರಿನ-ಖಾಸಗಿ-ಕಾಲೇಜು-ವಿದ್ಯಾರ್ಥಿನಿ-ಆತ್ಮಹತ್ಯೆ/
ಪೊಲೀಸರು ತಮ್ಮ ಬಟ್ಟೆಗಳನ್ನು ಕೈಗೆತ್ತಿಕೊಂಡು ಬರುತ್ತಿದ್ದ ವೇಳೆ ಯುವಕರು ಜಲಪಾತದಿಂದ ಚಡ್ಡಿಯಲ್ಲೇ ಪೊಲೀಸರ ಹಿಂದೆ ಓಡೋಡಿ ಬಂದಿದ್ದಾರೆ. ಬಟ್ಟೆ ಕೊಡಿ ಎಂದು ಅಂಗಾಲಾಚಿದ್ದಾರೆ. ಆದರೆ ಬಟ್ಟೆ ಕೊಡಲು ನಿರಾಕರಿಸಿದಾಗ ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಕೊನೆಗೆ ಎಚ್ಚರಿಕೆ ಕೊಟ್ಟು ಪೊಲೀಸರು ಬಟ್ಟೆಗಳನ್ನು ಹಿಂದಿರುಗಿಸಿ, ಅಲ್ಲಿಂದ ಕಳುಹಿಸಿದ್ದಾರೆ. ಸತತ ಎಚ್ಚರಿಕೆ ನೀಡಿದ ಮೇಲೂ ನಿಷೇಧಿತ ಪ್ರದೇಶ ಎಂದು ಗುರುತಿಸಲಾದ ಪ್ರದೇಶದ ಜಲಪಾತಗಳಲ್ಲಿ ಬಂಡೆ ಹತ್ತಿ ಮೋಜು ಮಸ್ತಿಯಲ್ಲಿ ನಿರತರಾಗಿದ್ದ ಯುವಕರಿಗೆ ಪೊಲೀಸರು ಚೆನ್ನಾಗಿ ಪಾಠ ಕಲಿಸಿದ್ದಾರೆ.