Fri. Apr 18th, 2025

Beltangadi: ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಕಂದಾಯ ಸಚಿವರಿಗೆ ರಕ್ಷಿತ್ ಶಿವರಾಂ ಮನವಿ

ಬೆಳ್ತಂಗಡಿ:(ಜು.11) ತಾಲೂಕಿನ ವಿವಿಧ ಗ್ರಾಮಗಳಿಂದ ದಿನನಿತ್ಯ ಕಂದಾಯ ಇಲಾಖೆಗೆ ಒಂದಲ್ಲ ಒಂದು ಕೆಲಸಗಳಿಗೆ ಬರುವ ಸಾರ್ವಜನಿಕರಿಗೆ ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಸಮಸ್ಯೆಯಾಗುತ್ತಿದೆ.

ತಾಲೂಕು ಆಡಳಿತ ಕಚೇರಿಗೆ ಖಾಲಿಯಿರುವ ಹುದ್ದೆಗಳನ್ನು ತುಂಬಿದರೆ ಸಾಕಷ್ಟು ಅನುಕೂಲವಾಗುತ್ತದೆ.ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಇಂದು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ರವರಿಗೆ ಮನವಿ ಸಲ್ಲಿಸಿದರು. ಮನವಿಗೆ ಕಂದಾಯ ಸಚಿವರು ಪೂರಕವಾಗಿ ಸ್ಪಂದಿಸಿದರು.

ಬೆಳ್ತಂಗಡಿ ತಾಲೂಕು ಕಚೇರಿಗೆ 97 ಹುದ್ದೆ ಗಳು ಮಂಜೂರಾತಿ ಗಿದ್ದು 55 ಹುದ್ದೆಗಳು ಭರ್ತಿಯಾಗಿದೆ. 42 ಹುದ್ದೆಗಳು ಖಾಲಿ ಇದೆ.

ಎಂಟು ಜನ ನಿಯೋಜನೆ ಮೇರೆಗೆ ಬೇರೆ ತಾಲೂಕು, ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *