ಬೆಳ್ತಂಗಡಿ :(ಜು.11) ಪಶ್ಚಿಮ ವಲಯ ಐಜಿಪಿ ಪೊಲೀಸ್ ಇಲಾಖೆಯ 24 ಸಬ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಜುಲೈ 10 ರಂದು ಆದೇಶ ಹೊರಡಿಸಲಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಳೆದ 1 ವರ್ಷ 11 ತಿಂಗಳು ಕರ್ತವ್ಯ ನಿರ್ವಹಿಸಿದ್ದ ದಕ್ಷ ಅಧಿಕಾರಿ ಸಬ್ ಇನ್ಸ್ಪೆಕ್ಟರ್ -1 ಅನಿಲ್ ಕುಮಾರ್ ಡಿ ಅವರನ್ನು ಮಂಗಳೂರು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದ್ದು. ಅವರ ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ -1 ಕಿಶೋರ್ ಪಿ ಅವರನ್ನು ನೇಮಕ ಮಾಡಲಾಗಿದೆ.