Wed. Nov 20th, 2024

Beltangadi: ರಾಹುಲ್ ಗಾಂಧಿಗೆ ಅವಹೇಳನಕಾರಿ ಹೇಳಿಕೆ- ಭರತ್ ಶೆಟ್ಟಿ ಮೇಲೆ ಸುಮೊಟೋ ಕೇಸ್ ದಾಖಲಿಸುವಂತೆ ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದಿಂದ ಬೆಳ್ತಂಗಡಿ ಠಾಣಾಧಿಕಾರಿಗಳಿಗೆ ಮನವಿ

ಬೆಳ್ತಂಗಡಿ:(ಜು.11) ಮಂಗಳೂರು ಪ್ರತಿಭಟನೆಯ ಸಂದರ್ಭ ಶಾಸಕ ಭರತ್ ಶೆಟ್ಟಿ, ರಾಹುಲ್ ಗಾಂಧಿಗೆ ಕಪಾಳ ಮೋಕ್ಷ ಮಾಡುತ್ತೇನೆ ಎಂಬುದಾಗಿ ಹೇಳಿರುವ ಬಗ್ಗೆ ಎಸ್.ಸಿ ಘಟಕದಿಂದ ಬೆಳ್ತಂಗಡಿ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಎಸ್.ಸಿ ಘಟಕ ಬೆಳ್ತಂಗಡಿ ದಿನಾಂಕ 08-07-2024 ರಂದು ಮಂಗಳೂರಿನಲ್ಲಿ ಶಾಸಕರಾದ ಭರತ್ ಶೆಟ್ಟಿ ಎಂಬುವವರು ಭಾಷಣ ಮಾಡುವ ಸಂದರ್ಭದಲ್ಲಿ ರಾಹುಲ್ ಗಾಂಧಿಗೆ ಕಪಾಳಕ್ಕೆ ಹೊಡೆಯಬೇಕು ಎಂಬುದಾಗಿ ಹೇಳಿರುತ್ತಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಬೆಳ್ತಂಗಡಿ ಕಾಂಗ್ರೇಸ್ ಎಸ್.ಸಿ ಘಟಕ ವತಿಯಿಂದ ವಿರುದ್ಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರನ್ನು ಅವಮಾನವನ್ನು ಖಂಡಿಸುತ್ತೇವೆ. ಅದಲ್ಲದೆ ಈ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಶಾಸಕರಾದ ಭರತ್ ಶೆಟ್ಟಿ ಯವರ ಮೇಲೆ ಸುಮೊಟೋ ಕೇಸ್ ಕೂಡಾ ದಾಖಲು ಮಾಡಬೇಕಾಗಿದೆ. ಒಂದು ವೇಳೆ ಸೂಕ್ತವಾದ ಕ್ರಮ ಕೈಗೊಳ್ಳದಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳುವುದಾಗಿ ಎಂದು ಎಸ್.ಸಿ ಘಟಕದವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅವಿನಾಶ್ ಕುರ್ತ್ತೋಡಿ ಪ್ರಧಾನ ಕಾರ್ಯದರ್ಶಿ ಪರಿಶಿಷ್ಟ ಜಾತಿ ಘಟಕ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್, ಶ್ರೀನಿವಾಸ್. ಕೆ ಉಜಿರೆ ಡಿಸಿಸಿ ಸದಸ್ಯರು, ವೆಂಕಣ್ಣ ಕೊಯ್ಯುರ್, ಕೂಸ ಅಳದಂಗಡಿ ,ಹರೀಶ್ ಎಲ್ ನಿನ್ನಿಕಲ್ಲು, ಲಾಯಿಲ ಪ್ರಕಾಶ್, ಲಾಯಿಲ ಚಂದ್ರಶೇಖರ ,ಕನ್ನಜೆ ಶೇಖರ್, ಲಾಯಿಲ ಗುರುಕಿರಣ್ ಮೇಲಂತಾಬೇಟ್ಟು ನೇಮಿರಾಜ್ ಕಿಲ್ಲೂರ್ ಅಧ್ಯಕ್ಷರು ಪರಿಶಿಷ್ಟ ಜಾತಿ ಘಟಕ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ಗ್ರಾಮೀಣ )ಅಣ್ಣು ಶಿರ್ಲಾಲು ಹಾಜರಿದ್ದರು.

Leave a Reply

Your email address will not be published. Required fields are marked *