Wed. Nov 20th, 2024

Moodabidre : ಉಪನ್ಯಾಸಕನ ಕಿರುಕುಳಕ್ಕೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ? ಡೆತ್‍ನೋಟ್ ಮಿಸ್ಸಿಂಗ್..!

ಮೂಡಬಿದ್ರೆ :(ಜು.11) ಇಲ್ಲಿನ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಿಎ ವಿದ್ಯಾರ್ಥಿನಿ ಮೂಲತ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ಮಹೇಶ್ ಎಂಬವರ ಪುತ್ರಿ ಶ್ರೀನಿಧಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಇತ್ತೀಚೆಗೆ ಮಣಿಪಾಲದ ಮಣಿಪಾಲ ಸಮೀಪದ ಹೆರ್ಗದಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಶ್ರೀನಿಧಿ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಳ್ವಾಸ್ ವಿದ್ಯಾ ಸಂಸ್ಥೆಯ ಸಿಎ ವಿದ್ಯಾರ್ಥಿನಿ. ಈ ಪ್ರಕರಣದಿಂದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮತ್ತೊಬ್ಬಳು ವಿದ್ಯಾರ್ಥಿನಿ ಬಲಿಯಾದಂತಾಗಿದೆ.

ಆತ್ಮಹತ್ಯೆ ಹಿಂದೆ ಉಪನ್ಯಾಸಕನ ಕಿರುಕುಳ?:
ಸಿ.ಎ. ವ್ಯಾಸಂಗ ಮಾಡುತ್ತಿದ್ದ ಶ್ರೀನಿಧಿ ಶೆಟ್ಟಿಗೆ ಇದೇ ವಿಭಾಗದ ಉಪನ್ಯಾಸಕ ಅನಂತಶಯನ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ, ಇದೇ ಕಾರಣಕ್ಕೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪವಿದೆ.

ಇದನ್ನೂ ಓದಿ: https://uplustv.com/2024/07/10/udupi-ಮಂಗಳೂರಿನ-ಖಾಸಗಿ-ಕಾಲೇಜು-ವಿದ್ಯಾರ್ಥಿನಿ-ಆತ್ಮಹತ್ಯೆ/

ವಿದ್ಯಾ ಸಂಸ್ಥೆಗೆ ತಲೆನೋವಾದ ಪ್ರಕರಣ:
ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಈ ಹಿಂದೆಯೂ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದು ಇದೀಗ ಮತ್ತೊಬ್ಬಳು ಇದೇ ಸಂಸ್ಥೆಯ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ಆಡಳಿತ ಮಂಡಳಿಗೆ ತಲೆ ನೋವಾಗಿ ಪರಿಣಮಿಸಿದೆ. ಶ್ರೀನಿಧಿ ಶೆಟ್ಟಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶ್ರೀನಿಧಿ ಶೆಟ್ಟಿ ಆತ್ಮಹತ್ಯೆಗೆ ಸಂಬಂಧಿಸಿ ಎನ್‍ಎಸ್‍ಯುಐ ನಿಯೋಗದಿಂದ ಮೂಡಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದಾರೆ.

ಡೆತ್‍ನೋಟ್ ಮಿಸ್ಸಿಂಗ್?:
ಆಳ್ವಾಸ್ ವಿದ್ಯಾರ್ಥಿನಿ ಶ್ರೀನಿಧಿ ಶೆಟ್ಟಿ ಆತ್ಮಹತ್ಯೆ ಪ್ರಕರಣದ ಗಮನಾರ್ಹ ಸಂಗತಿ ಎಂದರೆ ; ಮೃತದೇಹದ ಜೊತೆ ಡೆತ್‍ನೋಟ್ ಪತ್ತೆಯಾಗಿತ್ತು ಎಂಬ ಮಾಹಿತಿ ಇದ್ದು ಇದೀಗ ಡೆತ್‍ನೋಟ್ ಕಾಣೆಯಾಗಿದೆ ಎಂದು ಹೇಳಲಾಗುತ್ತಿದ್ದು ಸಂಶಯಕ್ಕೆ ಕಾರಣವಾಗಿದೆ.
ಈ ಮಧ್ಯೆ ಈಕೆಯ ಡೆತ್‍ನೋಟ್ ಮೊದಲಿಗೆ ಓದಿದವರು ಯಾರು ಎಂಬ ಬಗ್ಗೆಯೂ ಕುತೂಹಲಗಳಿದ್ದು ಇದೀಗ ಡೆತ್‍ನೋಟ್ ಯಾರಲ್ಲಿದೆ ಎನ್ನುವುದೇ ಗೊತ್ತಿಲ್ಲ.
ಡೆತ್‍ನೋಟ್ ಇದ್ದಿದ್ದು ನಿಜವೇ? ಇದ್ದಿದ್ದೇ ನಿಜವಾದಲ್ಲಿ ಆ ಡೆತ್‍ನೋಟ್ ಶ್ರೀನಿಧಿ ಶೆಟ್ಟಿಯೇ ಬರೆದಿದ್ದೇ? ಡೆತ್‍ನೋಟ್‍ನಲ್ಲಿ ಆಕೆಯನ್ನು ಆತ್ಮಹತ್ಯೆಗೆ ಪ್ರಚೋದಿಸಿದಂಥ ಸಂಗತಿಗಳು ಏನೇನಿದೆ, ಯಾರ ಯಾರ ಹೆಸರುಗಳಿವೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಪೊಲೀಸರು ಉತ್ತರಗಳನ್ನು ಹುಡುಕಬೇಕಿದೆ.

ಎಫ್‍ಐಆರ್ ಯಾಕೆ ದಾಖಲಾಗಿಲ್ಲ?
ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ನೆರೆಯ ಜಿಲ್ಲೆಯ ವಿದ್ಯಾರ್ಥಿನಿ ಆತ್ಮಹತ್ಯೆಗೈದಿರುವುದು ಗಂಭೀರ ಪ್ರಕರಣವಾಗಿದ್ದರೂ ಪೊಲೀಸರು ಈ ಬಗ್ಗೆ ಇನ್ನೂ ಎಫ್‍ಐಆರ್ ದಾಖಲಿಸಿಲ್ಲ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

Leave a Reply

Your email address will not be published. Required fields are marked *