ಚಾರ್ಮಾಡಿ :(ಜು.12)ಜುಲೈ 10 ರಂದು ರಾತ್ರಿ ಚಾರ್ಮಾಡಿ ಘಾಟಿ ಪ್ರದೇಶದಿಂದ ಬಂದು ಮೃತ್ಯುಂಜಯ ನದಿ ದಾಟಿ ಹೊಸಮಠದಿಂದ
ರಸ್ತೆಯಲ್ಲಿ ಬಂದು ಕೊಡೀತಿಲು ನಿವಾಸಿ ರಮೇಶ್ ಹಾಗೂ ಮೈಕನ್ ನಿವಾಸಿ ದೀವಿನ್ ಅವರ ತೋಟದಲ್ಲಿ ಬಾಳೆ ಗಿಡ ಹಾಗೂ ಕೃಷಿ ಗೆ ಹಾನಿ ಮಾಡಿ ಅಲ್ಲಿಂದ ಮತ್ತೆ ಕಾಡಿಗೆ ತೆರಳಿರುತ್ತದೆ.
ಕಳೆದ ಕೆಲವು ದಿನಗಳಿಂದ ಒಂಟಿ ಸಲಗ ಈ ಭಾಗದಲ್ಲೇ ಬೀಡು ಬಿಟ್ಟಿದ್ದು, ಆ ಭಾಗದ ಊರಿನ ನಾಗರಿಕರಿಗೆ, ಕೃಷಿಕರಿಗೆ, ಶಾಲಾ ಮಕ್ಕಳಿಗೆ ಸಂಚಾರ ಮಾಡಲು ಜೀವನ ಸಾಗಿಸಲು ಭಯಭೀತಿ ಉಂಟಾಗಿದ್ದು ಕಷ್ಟಕರವಾಗಿದೆ.
ಇದನ್ನೂ ಓದಿ: https://uplustv.com/2024/07/12/ಸುಬ್ರಹ್ಮಣ್ಯ-ಅರುಣ್-ಕುಮಾರ್-ಡಿ-ಸಿಎ-ಪರೀಕ್ಷೆಯಲ್ಲಿ-ತೇರ್ಗಡೆ/
ಅರಣ್ಯ ಇಲಾಖೆ ಈ ಬಗ್ಗೆ ಸ್ಥಳ ಭೇಟಿ ನೀಡಿ ಸೂಕ್ತ ಕ್ರಮ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹ ಮಾಡಿರುತ್ತಾರೆ ಎಂದು ವರದಿಯಾಗಿದೆ.