ಬೆಂಗಳೂರು: (ಜು.12) ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ ನಿಧನ ಪ್ರತಿಯೊಬ್ಬರಿಗೂ ಆಘಾತ ನೀಡಿದೆ. ತಮ್ಮ ಸ್ಪಚ್ಚ ಕನ್ನಡದ ನಿರೂಪಣೆಯಲ್ಲಿ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದ್ದ ನಟಿಯನ್ನು ಕ್ಯಾನ್ಸರ್ ಎಂಬ ಮಾಹಾ ಮಾರಿ ಬಲಿ ತೆಗೆದುಕೊಂಡು ಬಿಟ್ಟಿದೆ. ಪತ್ನಿ ಅಪರ್ಣಾ ನಿಧನ ಕುರಿತು ಪತಿ ನಾಗರಾಜ್ ರಾಮಸ್ವಾಮಿ ವತ್ಸರೆ ಸಂದೇಶ ನೀಡಿದ್ದಾರೆ.
ವೈಯಕ್ತಿಕವಾಗಿ ನಾನು ಅಪರ್ಣಾ ತುಂಬಾ ಖಾಸಗಿಯಾಗಿ ಬದುಕಿದವರು. ಅಷ್ಟೇ ಖಾಸಗಿಯಾಗಿ ನಾನು ಅವಳನ್ನ ಬಿಳ್ಕೊಡುತ್ತಿದೀನಿ ಎಂದು ಹೇಳಿದ್ದಾರೆ.
ಎರಡು ವರ್ಷದ ಹಿಂದೆ ಜುಲೈನಲ್ಲಿ ಶಾಸ್ವಕೋಶ ಕ್ಯಾನ್ಸರ್ ಅಂತಾ ಗೊತ್ತಾಯ್ತು. ಮೊದಲು ನೋಡಿದಾಗ ಅಪರ್ಣಾ ಆರು ತಿಂಗಳು ಬದುಕೋದೆ ಡೌಟ್ ಅಂತಾ ವೈದ್ಯರು ಹೇಳಿದ್ದರು. ಆದರೆ ಅಪರ್ಣಾ ಛಲಗಾತಿ. ಆಕೆ ಪ್ರತಿ ಬಾರಿ ನಾನು ಬದುಕ್ತೀನಿ ಅಂತಾ ಹೇಳುತ್ತಿದ್ದಳು. ಅಲ್ಲಿಂದ ಫೆಬ್ರವರಿ ವರೆಗೆ ಅವಳು ಸೋತಿದ್ಳು. ಕಳೆದ ಒಂದೂವರೇ ವರ್ಷದಿಂದ ಛಲದಿಂದ ಬದುಕಿದ್ದಳು. ಅವಳು ಧೀರೆ…. ಇಷ್ಟು ದಿನಾ ಬದುಕಿದ್ದಾಳೆ ಎಂದು ನಾಗರಾಜ್ ಹೇಳಿದ್ದಾರೆ.
ವೈದ್ಯರ ವರದಿ, ಕ್ಯಾನ್ಸರ್ ಸ್ಟೇಜ್ ಎಲ್ಲವೂ ವಿರುದ್ಧವಾಗಿತ್ತು. ಆದರೆ ಛಲಗಾತಿ ಅಪರ್ಣಾ ಪ್ರತಿ ದಿನ ಹೋರಾಡುತ್ತಿದ್ದಳು. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಇದೀಗ ನಾವಿಬ್ಬರು ಜಂಟಿಯಾಗಿ ಸೋತಿದ್ದೇವೆ. ಮುಂಬರುವ ಅಕ್ಟೋಬರ್ ತಿಂಗಳಿಗೆ ಅಪರ್ಣಾಗೆ 58 ವರ್ಷ ತುಂಬುತಿತ್ತು. ಅವಳ ನಿಜವಾದ ವಯಸ್ಸು ಯಾವತ್ತೂ ತೋರಿಸಲಿಲ್ಲ ಎಂದು ಪತಿ ಹೇಳಿದ್ದಾರೆ.
ಇವತ್ತು ಒಂದು ದಿನ ನಾನು ನನ್ನ ಕುಟುಂಬದ ಜೊತೆ ಇರುತ್ತೇನೆ ಎಂದು ಮಾಧ್ಯಮಕ್ಕೆ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಕುಟುಂಬದ ಖಾಸಗೀತನಕ್ಕೆ ಗೌರವ ನೀಡಲು ಪತಿ ನಾಗರಾಜ್ ಮನವಿ ಮಾಡಿದ್ದಾರೆ. ಈ ಶಿಥಿಲ ಸಂದರ್ಭದಲ್ಲಿ ಕುಟುಂಬ ಖಾಸಗಿ ದುಃಖ ಅನ್ನೋದು ಇರುತ್ತೆ ಎಂದು ನಾಗರಾಜ್ ಹೇಳಿದ್ದಾರೆ.