Wed. Nov 20th, 2024

Bengaluru: Jai Gadakesari Movie: ಗದೆಯ ಮಹತ್ವ ಎತ್ತಿ ಹಿಡಿಯುವ ಸಂದೇಶ ಸಾರುವ ಚಿತ್ರ ಒಡ್ಡೋಲಗಕ್ಕೆ ಸಿದ್ಧ

ಬೆಂಗಳೂರು :(ಜು.12) ಬಿ.ಬಿ. ಮೂವೀಸ್ ಕ್ರಿಯೆಷನ್ಸ್ ನಿರ್ಮಾಣದಲ್ಲಿ, ಮಂಜು ಹೊಸಪೇಟೆ ಅವರ ನಿರ್ದೇಶನದಲ್ಲಿ ಯತೀಶ್‌ಕುಮಾರ್‌ರವರ ಸಹಯೋಗದಲ್ಲಿ ಚಿತ್ರೀಕರಣಗೊಂಡಿರುವ ಬಹುನಿರೀಕ್ಷೆಯ `ಜೈ ಗದಾಕೇಸರಿ’ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಜುಲೈ ಮೊದಲ ವಾರದಲ್ಲಿ ಹಂಪಿ ವಿಜಯನಗರ ಹೆಬ್ಬಾಗಿಲಲ್ಲಿ ಅದ್ಧೂರಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಬಸವರಾಜ್ ಭಜಂತ್ರಿ, ನಿರ್ದೇಶಕ ಮಂಜು ಹೊಸಪೇಟೆ ಮತ್ತಿತರ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
ಪೋಸ್ಟರ್‌ನಲ್ಲಿ ನಾಯಕ ನಟ ರಾಜ್‌ಚರಣ್ ಬ್ರಹ್ಮಾವರ್ ಕೇಸರಿಧಾರಿಯಾಗಿ ಗದಾ ಕೇಸರಿಯಾಗಿ ಗದೆಯೊಂದಿಗೆ ಕೇಸರಿನಂದನನ ಭಕ್ತನಾಗಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೂ ನಂಬಿಕೆಯ ಪ್ರಧಾನ ಭಾಗವಾಗಿರುವ ಆಂಜನೇಯನ ಪೌರುಷದ ಸಂಕೇತವಾಗಿರುವ ಗದೆಯ ಮಹತ್ವವನ್ನು ಎತ್ತಿ ಹಿಡಿದು ನ್ಯಾಯ, ಸತ್ಯ,ಧರ್ಮವನ್ನು ಸಾರುವ ಶ್ರೇಷ್ಠ ಸಂದೇಶವುಳ್ಳ ರೋಚಕ ಕಥಾ ಹಂದರವಿರುವ `ಜೈ ಗದಾಕೇಸರಿ’ ಚಲನಚಿತ್ರ ಶೀಘ್ರದಲ್ಲೇ ಬೆಳ್ಳಿ ತೆರೆಯ ಒಡ್ಡೋಲಗದಲ್ಲಿ ವಿಜೃಂಭಿಸಲು ಅಣಿಯಾಗಿದೆ.

ಇದನ್ನೂ ಓದಿ:https://uplustv.com/2024/07/12/ಕಾರವಾರ-ಅನಾರೋಗ್ಯದಿಂದ-ಮೃತಪಟ್ಟ

ಚಿತ್ರದಲ್ಲಿ ರಾಜ್‌ಚರಣ್ ಬ್ರಹ್ಮಾವರ್‌ರವರಿಗೆ ಇಬ್ಬರು ನಾಯಕಿಯರಿದ್ದಾರೆ.

ಜೀವಿತ ವಸಿಷ್ಠ ಹಾಗೂ ಕೋಮಲ್ ನಟಿಸಿದ್ದಾರೆ. ಚಿತ್ರದ ಬಹುಭಾಗ ಚಿತ್ರೀಕರಣವು ಹೊಸಪೇಟೆ, ಸಂಡೂರು, ರಾಮನಗರ, ನೆಲಮಂಗಲ, ಬೆಂಗಳೂರು ಸುತ್ತಮುತ್ತ ನಡೆದಿದೆ. ಕಂಠೀರವ, ಪುಟ್ಟಣ್ಣ ಸ್ಟುಡಿಯೋ ಮತ್ತಿತರ ಕಡೆಗಳಲ್ಲಿ ಸಾಗಿದ ಚಿತ್ರೀಕರಣ ಪಯಣವು ಇದೀಗ ಪೂರ್ಣಗೊಂಡಿದ್ದು, ಕಥೆ, ತಾರಾಗಣ, ಅಭಿನಯ, ಸಂಭಾಷಣೆ, ಹಾಡುಗಳ ಜೊತೆಗೆ ಪ್ರಕೃತಿ ರಮಣೀಯ ಪರಿಸರವೂ ಚಿತ್ರದ ಯಶಸ್ವಿಗೆ ಸಾಥ್ ನೀಡಲಿದೆ ಹಾಗೂ ಕೆ.ಎಸ್.ಚಿತ್ರಾ, ಇಂದು ನಾಗರಾಜ್, ಚಂದನ್ ಗುಪ್ತಾ, ಈಶಾ ಸುಚಿ ಕಂಠ ಸಿರಿಯಿಂದ ಹಾಡುಗಳು ಅಮೋಘವಾಗಿ ಮೂಡಿ ಬಂದಿದೆ.

ನಾಯಕನ ಜೊತೆಗೆ ಸಿದ್ಧಿ ಪ್ರಶಾಂತ್, ಹಿರಿಯ ನಟರಾದ ಹೊನ್ನವಳ್ಳಿ ಕೃಷ್ಣ, ಅವಿನಾಶ್, ಅರವಿಂದ ರಾವ್, ಧರ್ಮಜಯರಾಂ, ಲಕ್ಷ್ಮಣ್‌ದಾಸ್‌ರಂಥ ಪೂರ್ಣ ತಾರಾಗಣವೇ ತೆರೆ ಮೇಲೆ ತಮ್ಮ ಅದ್ಭುತ ನಟನಾ ಪ್ರತಿಭೆಯೊಂದಿಗೆ ಮಿಂಚಲಿದ್ದಾರೆ.

ಚಿತ್ರಕ್ಕೆ ಶಾಂ ಸಿಂಧನೂರು ಛಾಯಾಗ್ರಹಣ, ಪ್ರಸನ್ನ ಭೂಜ ಶೆಟ್ಟರ್, ಆರೋನ್ ಕಾರ್ತಿಕ್ ಸಂಗೀತ, ಕಂಬಿ ರಾಜು ನೃತ್ಯ ನಿರ್ದೇಶನ ರಾಮ್‌ದೇವ್, ವೈಲೆಂಟ್ ವೇಲು, ಅಲ್ಟಿಮೇಟ್ ಶಿವು ಸಾಹಸ ಸಂಯೋಜನೆಯಲ್ಲಿದ್ದಾರೆ. ಪೋಸ್ಟರ್ ವೀಕ್ಷಣೆಯ ಬಳಿಕ `ಜೈ ಗದಾಕೇಸರಿ’ ಚಿತ್ರದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಸಿನಿಮಾ ಪ್ರಿಯರಲ್ಲಿ ನಿರೀಕ್ಷೆ ಮೂಡಿದೆ. ನಾಯಕ ರಾಜ್‌ಚರಣ್ ಶೆಟ್ಟಿ ಅಭಿಮಾನಿಗಳು, ಪ್ರೇಕ್ಷಕರು ಚಲನಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *