Sat. Apr 12th, 2025

Sulia: Police viral video- ಎಣ್ಣೆ ಹೊಡೆದು ಡ್ಯೂಟಿಗೆ ಬಂದ ಪೊಲೀಸರು!!!

Sulia(ಜು.12): ಕುಡುಕರ ಹಾವಳಿ ತಡೆಯಲು ಪೊಲೀಸರೇ ಎಣ್ಣೆ ಹೊಡೆದು ಡ್ಯೂಟಿಗೆ ಬಂದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿ ಎಂಬಲ್ಲಿ ನಡೆದಿದೆ. ಹೊಯ್ಸಳ ವಾಹನದಲ್ಲಿ ಕುಡಿದು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಶಂಕೆ ಮೇಲೆ ಅನುಮಾನ ಬಂದ ಸ್ಥಳೀಯರು ಪ್ರಶ್ನಿಸಿದ್ದಾರೆ. ಜೊತೆಗೆ ಪೊಲೀಸರಿಗೆ ಬುದ್ದಿವಾದ ಹೇಳುವ ವೀಡಿಯೋ ವೈರಲ್​ ಆಗಿದೆ.

ಕುಡಿದು ಬಸ್ ಸ್ಟ್ಯಾಂಡ್​ನಲ್ಲಿ ಬಾಟಲಿ ಒಡೆದು ಮಲಗಿದ್ದ ಕುಡುಕರ ಹಾವಳಿ ತಡೆಯಲು ಮಹಿಳೆಯೋರ್ವಳು ರಕ್ಷಣೆ ಕೋರಿ 112 ಗೆ ಕರೆ ಮಾಡಿದ್ದರು. ಈ ವೇಳೆ ಓರ್ವ ಎ.ಎಸ್.ಐ ಮತ್ತು ಡ್ರೈವರ್ ಆಗಮಿಸಿದ್ದರು. ಆದರೆ, ಕುಡುಕರ ಮೇಲೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ. ಈ ವೇಳೆ ಅನುಮಾನ ಬಂದು ಸ್ಥಳೀಯರು ಪ್ರಶ್ನಿಸಿದಾಗ ಪೊಲೀಸರೇ ಕುಡಿದು ಬಂದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:https://uplustv.com/2024/07/12/mangaluru-ಲವ್-ಜಿಹಾದ್-ಗೆ-ಬಲಿಯಾದ-ನನ್ನ-ಮಗಳನ್ನು

ಕುಡಿದು ವಾಹನ ಚಾಲನೆ ಮಾಡಬೇಡಿ‌ ಎಂದ ಸ್ಥಳೀಯರು:
ಇನ್ನು ಕುಡಿದು ವಾಹನ ಚಾಲನೆ ಮಾಡಬೇಡಿ‌. ಪೊಲೀಸ್ ಜೀಪ್ ಇಲ್ಲೇ ಬಿಟ್ಟು ಹೋಗಿ ಎಂದು ಸ್ಥಳೀಯರು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪೊಲೀಸರು, ‘ ನಾವು ಸುಳ್ಯ ಪೊಲೀಸ್ ಠಾಣೆಯಿಂದ ಬಂದಿದ್ದು, ಡೈಲಿ ಕುಡಿಯುತ್ತೇವೆ. ಆದ್ರೆ, ಈಗ ಕುಡಿದಿಲ್ಲ, ಪಾರ್ಸೆಲ್ ತಗೊಂಡಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ ‘ನನಗೆ ಆರೋಗ್ಯ ಸರಿ ಇಲ್ಲ ಎಂದು ಪೊಲೀಸ್ ವಾಹನ ಚಾಲಕ ಹೇಳಿದ್ದಾನೆ.

Leave a Reply

Your email address will not be published. Required fields are marked *