Sat. Apr 19th, 2025

ಸುಬ್ರಹ್ಮಣ್ಯ: ಅರುಣ್ ಕುಮಾರ್ ಡಿ. ಸಿಎ ಪರೀಕ್ಷೆಯಲ್ಲಿ ತೇರ್ಗಡೆ

ಸುಬ್ರಹ್ಮಣ್ಯ:(ಜು.12) ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಹಾಳೆಮಜಲು ಪೊನ್ವಲ್ಲಿಯ ಅರುಣ್ ಕುಮಾರ್ ಡಿ. ಅವರು ಅಖಿಲ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆ 2024ರ ಮೇ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅರುಣ್ ಕುಮಾರ್ ಬೆಂಗಳೂರಿನ ಜಿ.ಪಿ.ಎಸ್.ವಿ. ಮತ್ತು ಕೋ. ಮಲ್ಲೇಶ್ವರಂ ಇಲ್ಲಿ ತರಬೇತಿ ಪಡೆದಿದ್ದಾರೆ.

ಇದನ್ನೂ ಓದಿ:https://uplustv.com/2024/07/12/ujire-ಅನುಗ್ರಹ-ಕಾಲೇಜಿನಲ್ಲಿ-ನಾಯಕತ್ವ-ತರಬೇತಿ-ಕಾರ್ಯಾಗಾರ

ದೇವದಾಸ್ ಪೊನ್ವಲ್ಲಿ ಹಾಗೂ ಸರಸ್ವತಿ ದೇವಿ ದಂಪತಿ ಪುತ್ರರಾಗಿರುವ ಅರುಣ್ ಕುಮಾರ್ ಯೇನೆಕಲ್ಲು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು. ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ, ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜಿನಲ್ಲಿ ಪದವಿ ಶಿಕ್ಷಣ ವ್ಯಾಸಂಗ ಮಾಡಿದ್ದಾರೆ.

Leave a Reply

Your email address will not be published. Required fields are marked *