Wed. Nov 20th, 2024

Aries To Pisces: ಮೇಷದಿಂದ ಮೀನವರೆಗೆ- ಶನಿವಾರದ ರಾಶಿ ಭವಿಷ್ಯದಲ್ಲಿ 12 ರಾಶಿಗಳ ಫಲವೇನು?

ಮೇಷ ರಾಶಿ : ಇಂದು ನಿಮ್ಮ ಮಕ್ಕಳಿಗೆ ಬೇಕಾದ ಸಹಕಾರವು ನಿಮ್ಮಿಂದ ಸಿಗಲಿದೆ. ಕೃಷಿಯಲ್ಲಿ ಆಸಕ್ತಿ ಇರುವವರು ಹೊಸ ಕೃಷಿಯ ಅನ್ವೇಷಣೆಯಲ್ಲಿ ನಿರತರಾಗುವಿರಿ.

ವೃಷಭ ರಾಶಿ : ನೀವು ಬದಲಾಗುವ ಅನಿವಾರ್ಯತೆ ಎದುರಾಗಬಹುದು. ಇಂದು ನಾನಾ ಕಡೆಗಳಿಂದ ಅಧಿಕ ಖರ್ಚುಗಳು ಹುಡುಕಿಕೊಂಡು ಬರಬಹುದು, ಜಾಗರೂಕರಾಗಿರಿ. ನಿತ್ಯಕರ್ಮವನ್ನು ಮಾಡಲು ಆಲಸ್ಯವು ಬರಬಹುದು.

ಮಿಥುನ ರಾಶಿ : ಸಾಲ ಬಾಧೆಯೇ ಇಂದು ನಿಮ್ಮನ್ನು ಕಾಡುವುದು. ಅನಿರೀಕ್ಷಿತವಾಗಿ ಅಮೂಲ್ಯವಾದ ವಸ್ತುವೊಂದು ಸಿಗಲಿದೆ. ಕೃಷಿಕರಿಗೆ ಉತ್ತಮ ಧನಾಗಮನದಿಂದ ನೆಮ್ಮದಿ ಎನಿಸಿಬಹುದು. ಸಜ್ಜನರ ಸಹವಾಸವನ್ನು ಮಾಡುವ ಅವಕಾಶ ಸಿಗಲಿದೆ.

ಕರ್ಕಾಟಕ ರಾಶಿ : ಅನ್ಯರ ಅಧೀನರಾಗಿಯೇ ಇರುವುದು ನಿಮಗೆ ಸರಿಕಾಣದು. ನಿಮ್ಮ ಮೇಲೆ ಉಂಟಾದ ಅಪನಂಬಿಕೆಯನ್ನು ದೂರಮಾಡಿಕೊಳ್ಳಲು ಪ್ರಯತ್ನಿಸುವಿರಿ. ಇಂದು ಧಾರ್ಮಿಕ ಆಚಾರವಂತರಿಗೆ ಆಚರಣೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗಲಿದೆ.

ಸಿಂಹ ರಾಶಿ : ಇಂದು ಸಾಹಸ ಪ್ರವೃತ್ತಿಯುಳ್ಳವರಿಗೆ ದೂರದ ಊರಿನಲ್ಲಿ ಸುತ್ತಾಡುವ ಮನಸ್ಸಾಗುವುದು. ಇಂದು ನೀವು ಮಂಗಲ ಕಾರ್ಯಗಳಿಂದ ಉತ್ಸಾಹವನ್ನು ಪಡೆದುಕೊಳ್ಳುವಿರಿ. ಅವಿವಾಹಿತರಿಗೆ ಯೋಗ್ಯ ಸಂಬಂಧವು ಆಕಸ್ಮಿಕವಾಗಿ ಬಂದು ಶೀಘ್ರವಾಗಿ ವಿವಾಹವು ಆಗುವುದು.

ಕನ್ಯಾ ರಾಶಿ : ಇಂದು ನಿಮ್ಮ ಅಂತಸ್ಸತ್ವದ ಮೇಲೆ ನಂಬಿಕೆ ಹೋಗಬಹುದು. ವಿದ್ಯಾರ್ಥಿಗಳಿಗೆ ಗೊಂದಲವಿರಲಿದೆ. ಹೊಸ ಉದ್ಯೋಗಕ್ಕೆ ಸೇರುವವರಿಗೆ ಅವಕಾಶಗಳು ಸಿಗಲಿವೆ.

ತುಲಾ ರಾಶಿ : ಕೋಪದಿಂದ ಏನನ್ನಾದರೂ ಹೇಳಿ ಕಷ್ಟದಲ್ಲಿ ಸಿಕ್ಕಿಬೀಳುವಿರಿ. ಇಂದು ನಿಮ್ಮ ಶತ್ರುಗಳು ಜಯಗಳಿಸಿ ನಿಮ್ಮನ್ನು ಛೇಡಿಸಬಹುದು. ಸರ್ಕಾರಿ ಕಚೇರಿಯಲ್ಲಿ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು.

ವೃಶ್ಚಿಕ ರಾಶಿ : ನಿಮಗೆ ಆದ ಅವಮಾನದಿಂದ ಹೊರಬರಲು ಅಸಾಧ್ಯವಾಗಬಹುದು. ನೂತನ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ಆದಾಯ ಚೆನ್ನಾಗಿದ್ದು, ಖರ್ಚುಗಳು ಆತಂಕಕ್ಕೆ ತಳ್ಳಬಹುದು. ಪರಿಚಿತರ ಪ್ರಭಾವದಿಂದ ವೃತ್ತಿಯಲ್ಲಿ ಮುನ್ನಡೆಯುವಿರಿ.

ಧನು ರಾಶಿ : ನಿಮ್ಮ ಅಜ್ಞಾ‌ನದ ಪ್ರದರ್ಶನದಿಂದ ಇರುವ ಗೌರವವನ್ನು ಕಳೆದುಕೊಳ್ಳುವಿರಿ. ಅದನ್ನು ಮರೆಯುವುದು ಮುಂದುವರಿಸುವುದು ನಿಮಗೆ ಬಿಟ್ಟಿದ್ದು. ಇಂದು ಪ್ರಮುಖ ವಿಚಾರಗಳಲ್ಲಿ ಹೆಚ್ಚು ವಿವೇಕಪೂರ್ವಕವಾಗಿ ಮುನ್ನಡೆಯುವುದು ಉತ್ತಮ.

ಮಕರ ರಾಶಿ : ನಿಮ್ಮ ದಾಂಪತ್ಯ ಜೀವನವು ಕಲಹದಿಂದ ಕೂಡಿದ್ದರೂ ಕೊನೆಯಲ್ಲಿ ಸುಖಾಂತವಾಗಲಿದೆ. ದಾಂಪತ್ಯದಲ್ಲಿ ಪ್ರೇಮಸಲ್ಲಾಪವು ಎಂದಿಗಿಂತ ಜೋರಾಗಿ ಇರಲಿದೆ. ಇಂದು ಕಚೇರಿಯಲ್ಲಿ ನಿಮ್ಮ ಕೆಲಸಗಳನ್ನು ನಿಮ್ಮ ಅನುಪಸ್ಥಿತಿಯಲ್ಲಿ ಮಾಡಿ ಮುಗಿಸುವರು.

ಕುಂಭ ರಾಶಿ : ನಿಮ್ಮನ್ನು ನೀವೇ ಪ್ರಸ್ತುತಿ ಪಡಿಸಿಕೊಳ್ಳಬೇಕು. ಇಂದು ನಿಮ್ಮ ವ್ಯಾಪಾರಗಳು ಸುಲಲಿತವಾಗಿ ನಡೆದರೂ ಲಾಭದಲ್ಲಿ ಸ್ವಲ್ಪ ಕೊರತೆ ಎದ್ದು ಕಾಣುವುದು.

ಮೀನ ರಾಶಿ : ಅನ್ಯಥಾ ಶರಣಂ ನಾಸ್ತಿ ಎಂದು ನೀವು ಮತ್ತೆ ಬಿಟ್ಟ ಕಾರ್ಯವನ್ನೇ ಮಾಡಬೇಕಾಗುವುದು. ಅಂದುಕೊಂಡ ಕೆಲಸಗಳು ಸುಗಮವಾಗಿ ಸಾಗಲಿದೆ‌. ಇಂದು ನೀವು ಅಚ್ಚರಿಯ ಕಾರ್ಯ ಸಾಧನೆ ಮಾಡಲಿದ್ದೀರಿ. ಇದರಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಕಾಣಲಿದೆ.

Leave a Reply

Your email address will not be published. Required fields are marked *