ಮಂಗಳೂರು: (ಜು.13) ಮಂಗಳೂರು ಭವಿಷ್ಯ ನಿಧಿ ಕಚೇರಿಗೆ ಪಿ.ಎಫ್. ಸೆಂಟ್ರಲ್ ಬೋರ್ಡ್ ನ ಸದಸ್ಯರು ಹಾಗೂ ಬಿಎಂಎಸ್ ನ ಅಖಿಲ ಭಾರತೀಯ ಅಧ್ಯಕ್ಷರಾದ ಹಿರಣ್ಮಯಿ ಪಾಂಡ್ಯ ಅವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರು ರಿಜಿನಲ್ ಪಿಎಫ್ ಕಮಿಷನರ್ ರೀನಾ ಮೆನನ್ ಅವರು ಹಿರಣ್ಮಯಿ ಪಾಂಡ್ಯ ಅವರನ್ನು ಸ್ವಾಗತಿಸಿದರು.
ಇದನ್ನೂ ಓದಿ: https://uplustv.com/2024/07/13/padubidre-video-viral
ಈ ಸಂದರ್ಭದಲ್ಲಿ ಅಖಿಲ ಭಾರತ ಭವಿಷ್ಯ ನಿಧಿ ನೌಕರರ ಸಂಘದ ಕಾರ್ಯದರ್ಶಿ ಶಶಿಧರ , ಉಪಾಧ್ಯಕ್ಷ ಸುಬ್ರಹ್ಮಣ್ಯ ಕೋಶಾಧಿಕಾರಿ ಉದಯಶಂಕರ್ ಹಾಗೂ ಬಿಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಎಚ್ ಎಲ್ ಮಂಗಳೂರು,
ಭವಿಷ್ಯ ನಿಧಿ ಮಂಡಳಿಯ ಸದಸ್ಯರಾದ ಬಿಎಂಎಸ್ ನ ಹಿರಿಯ ಮುಖಂಡರಾದ ವಿಶ್ವನಾಥ ಶೆಟ್ಟಿ, ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ, ಕುಮಾರ ನಾಥ್, ಉಮೇಶ್ ನಾಳ ಉಪಸ್ಥಿತರಿದ್ದರು.