ಪಡುಬಿದ್ರಿ: (ಜು.13) ಹಣ್ಣು ಹಂಪಲು ಅಂಗಡಿಯೊಂದರಲ್ಲಿ ಖರೀದಿ ಮಾಡಿದ್ದ ಕಾಲಿಫ್ಲವರ್ ನಲ್ಲಿ ಹೆಬ್ಬಾವಿನ ಮರಿಯೊಂದು ಪತ್ತೆಯಾದ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.

ಪಡುಬಿದ್ರಿ ಬೇಂಗ್ರೆ ನಿವಾಸಿಯ ಮಹಿಳೆಯೊರ್ವರು ಪಡುಬಿದ್ರಿ ಮುಖ್ಯ ಪೇಟೆಯ ಹಣ್ಣು ಹಂಪಲು ಅಂಗಡಿಯಲ್ಲಿ ಕಾಲಿಫ್ಲವರ್ ಖರೀದಿಸಿ ಮನೆಗೆ ಹೋದವರೇ ನೇರವಾಗಿ ಅದನ್ನು ಫ್ರಿಡ್ಜ್ ನಲ್ಲಿ ಇರಿಸಿದ್ದರು.

ಮರುದಿನ ಅದನ್ನು ಉಪಯೋಗಿಸುವುದಕ್ಕಾಗಿ ಫ್ರಿಡ್ಜ್ ನಿಂದ ಹೊರ ತೆಗೆದು ಕತ್ತರಿಸಲು ಮುಂದಾದಾಗ ಆ ಮಹಿಳೆಗೆ ಆತಂಕ ಕಾದಿತ್ತು, ಕಾಲಿಫ್ಲವರ್ ಒಳಭಾಗದಿಂದ ಹೆಬ್ಬಾವಿನ ಮರಿಯೊಂದು ಹೊರ ಪ್ರಪಂಚಕ್ಕೆ ಎಂಟ್ರಿ ಕೊಡುತ್ತಿದ್ದನ್ನು ಕಂಡ ಮಹಿಳೆ ಗಾಬರಿಗೊಂಡು ಮನೆಮಂದಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: https://uplustv.com/2024/07/13/yash-ಯಶ್-ಹೊಸ-ಹೇರ್ಸ್ಟೈಲ್-ಸೀಕ್ರೆಟ್-ಏನು/

ಹೆಬ್ಬಾವಿನಂತೆ ಇದರಲ್ಲಿ ವಿಷಜಂತುಗಳು ಆಶ್ರಯ ಪಡೆದು, ಖರೀದಿ ಮಾಡಿದ ಮಂದಿ ಮನೆಯ ಕೋಣೆಯೊಳಗಿಟ್ಟು, ಬಳಿಕ ಅದರಿಂದ ಹೊರ ಬರುವ ವಿಷಜಂತುಗಳು ಮಂದಿಯ ಮೇಲೆ ದಾಳಿ ನಡೆಸಿದರೂ ಆಶ್ಚರ್ಯ ವಿಲ್ಲ,

ಈ ಬಗ್ಗೆ ಸಾರ್ವಜನಿಕರು ಖರೀದಿ ಮಾಡುವ ಮುನ್ನ ಎಚ್ಚರಿಕೆ ವಹಿಸ ಬೇಕು ಎಂದು ಮನೆಮಂದಿ ತಿಳಿಸಿದ್ದಾರೆ.