ಉಜಿರೆ(ಜು.13): ಎಸ್.ಡಿ.ಎಮ್. ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯ ಸ್ಕೌಟ್/ಗೈಡ್, ಕಬ್-ಬುಲ್ ಬುಲ್ ವಿದ್ಯಾರ್ಥಿಗಳು ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಿ ಬದಲಿ ಬಟ್ಟೆ ಚೀಲ ಉಪಯೋಗಿಸಿ ಎಂಬ ಮಾಹಿತಿಯ ಕರಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರು ಬಿಡುಗಡೆಗೊಳಿಸಿ,
ವಿದ್ಯಾರ್ಥಿಗಳ ಸಮಾಜಮುಖಿ ಕಾರ್ಯಕ್ಕೆ ಶುಭಹಾರೈಸಿದರು.
ಕರಪತ್ರದ ಜೊತೆಗೆ ಮಕ್ಕಳೇ ತಯಾರಿಸಿದ ಕಾಗದದ ಕವರ್‌ಗಳನ್ನು ಉಜಿರೆ ಆಸುಪಾಸಿನ ಮೆಡಿಕಲ್ ಶಾಪ್‌ಗಳಿಗೆ ಹಂಚಿ,
ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವಲ್ಲಿ ಜಾಗೃತಿ ಮೂಡಿಸಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಸಹಕರಿಸಿದರು.