Fri. Apr 11th, 2025

Uttarpradesh: Viral video- ಆ ಒಂದು ಫೋನ್​​ ಕಾಲ್, ಮದುವೆನೇ ಬೇಡ ಎಂದು ಮಂಟಪದಿಂದ ಓಡಿಹೋದ ವರ!!!

ಉತ್ತರ ಪ್ರದೇಶ:(ಜು.13) ಮದುವೆನೇ ಬೇಡ ಎಂದು ಮಂಟಪದಿಂದ ವರ ಓಡಿಹೋದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ.

ಇದನ್ನೂ ಓದಿ: https://uplustv.com/2024/07/13/ಫೋಟೋ-ಗ್ಯಾಲರಿ

ತಾಳಿ ಕಟ್ಟುವ ಶುಭ ವೇಳೆಯಲ್ಲಿ ವರನ ಫೋನಿಗೊಂದು ಕರೆ ಬಂದಿದೆ. ವಧುವಿನ ಪ್ರಿಯಕರ ಕರೆ ಮಾಡಿದ್ದು, ತಮ್ಮಿಬ್ಬರ ಹಲವು ವರ್ಷಗಳ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ಇದಕ್ಕೆ ವರ ನಿಮ್ಮಿಬ್ಬರ ನಡುವಿನ ಪ್ರೀತಿಗೆ ಸಾಕ್ಷಿಯೇನಿದೆ? ಎಂದು ಕೇಳಿದ್ದಾನೆ.

ವಧುವಿನ ಜೊತೆಗಿದ್ದ ಸಾಕಷ್ಟು ಫೋಟೋ, ವಿಡಿಯೋಗಳನ್ನು ಯುವಕ ವರನ ಫೋನ್​​ಗೆ ಕಳುಹಿಸಿದ್ದು, ಇವರಿಬ್ಬರ ನಡುವಿನ ಆತ್ಮೀಯತೆಯನ್ನು ಕಂಡು ವರ ಶಾಕ್​​ ಆಗಿದ್ದು, ತಾಳಿ ಕಟ್ಟುವ ಬದಲು ಮದುವೆ ಮಂಟಪದಿಂದ ಓಡಿ ಹೋಗಿದ್ದಾನೆ.

ಯುವಕ ವಧುವಿನೊಂದಿಗೆ ಒಂದೇ ಕೊಠಡಿಯಲ್ಲಿದ್ದ ಖಾಸಗಿ ಫೋಟೋ ವಿಡಿಯೋಗಳನ್ನು ಕಳುಹಿಸಿದ್ದಾನೆ. ಆತ್ಮೀಯ ಕ್ಷಣಗಳ ವೀಡಿಯೋ ನೋಡಿದ ವರ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ.

ವಧುವಿನ ಪ್ರಿಯಕರ ಎಂದು ಹೇಳಲಾಗಿರುವ ವ್ಯಕ್ತಿಯನ್ನು ಕಮಲ್ ಸಿಂಗ್ ಗುರುತಿಸಲಾಗಿದ್ದು, ವಧುವಿನ ಕುಟುಂಬಸ್ಥರ ದೂರಿನ ಆಧಾರದ ಮೇರೆಗೆ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು