Wed. Nov 20th, 2024

Beltangadi : ಬೆಳೆ ವಿಮೆ ನೋಂದಾವಣೆ ಬಗ್ಗೆ ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ :(ಜು.14) ನೈಸರ್ಗಿಕ ವಿಕೋಪಗಳು ,ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಬೆಳೆ ನಷ್ಟ ,ಹಾನಿ ಅನುಭವಿಸುತ್ತಿರುವ ರೈತರಿಗೆ ಆರ್ಥಿಕ ನೆರವನ್ನು ನೀಡಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಸರಕಾರ ಪರಿಚಯಿಸಿದೆ,

ಪ್ರತಿಯೊಬ್ಬ ರೈತರು ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶ್ರೀ,ಕ್ಷೇತ್ರ ಧರ್ಮಸ್ಥಳ ಗ್ರಾಮ ಯೋಜನೆ ಕೃಷಿ ಮೇಲ್ವಿಚಾರಕರಾದ ಕೃಷ್ಣ ಹೇಳಿದರು.

ಇದನ್ನೂ ಓದಿ: https://uplustv.com/2024/07/14/ranebennur-son-hangs

ತಾಲೂಕಿನ ಸಿಎಸ್‌ಸಿ ನೋಡಲ್ ಅಧಿಕಾರಿ ಸುರೇಶ್ ಮಾತನಾಡಿ, ತಾಲೂಕಿನಲ್ಲಿ 48 ಸಿಎಸ್‌ಸಿ ಕೇಂದ್ರಗಳಿದ್ದು, ಬೆಳೆ ವಿಮೆಯನ್ನು ಸರ್ಕಾರ ನಿಗದಿಪಡಿಸಿದ ಮೊತ್ತದಲ್ಲಿ ವಿಮೆಯನ್ನು ಮಾಡಿಸಿಕೊಳ್ಳಬಹುದು.

ಅಡಿಕೆ ಹಾಗೂ ಕಾಳು ಮೆಣಸು ಕೃಷಿಗೆ ದಿನಾಂಕ 31/7/24 ಕೊನೆಯ ದಿನವಾಗಿದ್ದು, ನೋಂದಾವಣೆಗೆ ಬೇಕಾಗುವ ದಾಖಲಾತಿಗಳು ಆಧಾರ್ ಕಾರ್ಡ್ ಪ್ರತಿ, ಆರ್ ಟಿ ಸಿ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ, ದಾಖಲಾತಿ ಬೇಕಾಗಿದ್ದು ಹೆಚ್ಚಿನ ರೈತರು ವಿಮೆ ನೋಂದಾವಣೆ ಮಾಡುವ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಾಲೂಕಿನ ಜನಜಾಗೃತಿ ವೇದಿಕೆಯ ಸದಸ್ಯರು ವಿಶ್ವನಾಥ್, ಒಕ್ಕೂಟದ ಅಧ್ಯಕ್ಷರು ಲಲಿತಾ, ಸುನಿತಾ, ಜಯ್ ಶೆಟ್ಟಿ, ಹರೀಶ್, ಚೆನ್ನಪ್ಪ, ಉಮೇಶ್, ರಮೇಶ್, ರೋಹಿತ್, ಸೇವಾ ಪ್ರತಿನಿಧಿ ಸರಸ್ವತಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *