Wed. Nov 20th, 2024

ಬೆಂಗಳೂರು:(ಜು.15)ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ ವಿರುದ್ಧ ಮತ್ತೊಮ್ಮೆ ಕಾಪಿ ರೈಟ್ಸ್ ಆರೋಪ ಕೇಳಿಬಂದಿದೆ. ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು.

ಈ ಚಿತ್ರದಲ್ಲಿ ‘ಗಾಳಿಮಾತು’ ಹಾಗೂ ‘ನ್ಯಾಯ ಎಲ್ಲಿದೆ’ ಎಂಬ ಹಾಡುಗಳನ್ನು ಅನುಮತಿ ಇಲ್ಲದೇ ಬಳಸಿರುವ ಆರೋಪದ ಮೇಲೆ ರಕ್ಷಿತ್ ಶೆಟ್ಟಿ ಒಡೆತನದ ಪರಂವಾಃ ಸ್ಟುಡಿಯೋಸ್ ಹಾಗೂ ನಟನ ವಿರುದ್ಧ ಎಫ್‌ಐಆ‌ರ್ ದಾಖಲಾಗಿದೆ.

ಇದನ್ನೂ ಓದಿ: https://uplustv.com/2024/07/15/mangalore-continued-rain-in-dk-district-fishermen-advised

ಅಭಿಜಿತ್ ಮಹೇಶ್ ನಿರ್ದೇಶನದ ಕಾಮಿಡಿ ಎಂಟರ್‌ಟೈನ‌ರ್ ‘ಬ್ಯಾಚುಲರ್ ಪಾರ್ಟಿ’ ಇದೇ ವರ್ಷ ಜನವರಿ 26ಕ್ಕೆ ತೆರಕಂಡಿತ್ತು. ಈ ಚಿತ್ರದ ಹಾಡಿಗಾಗಿ ಈ ಹಿಂದೆ ನವೀನ್ ಕುಮಾರ್ ಎಂಬುವವರ ಜೊತೆ ಹಾಡುಗಳ ಬಗ್ಗೆ ಮಾತುಕತೆ ನಡೆದಿತ್ತು. ನವೀನ್ ಕುಮಾ‌ರ್ ಹಾಡುಗಳ ಕಾಪಿರೈಟ್ ಪಡೆದು ಮಾರಾಟ ಮಾಡುತ್ತಿದ್ದರು.

ರಕ್ಷಿತ್ ಶೆಟ್ಟಿ ಹಾಗೂ ತಂಡ ಇವರ ಜೊತೆ ಹಾಡಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿತ್ತು. ಆದರೆ ನಾನಾ ಕಾರಣಕ್ಕೆ ಈ ಒಪ್ಪಂದ ಮುರಿದು ಬಿದ್ದಿತ್ತು. ಆದರೂ ಚಿತ್ರದಲ್ಲಿ ಎರಡೂ ಹಾಡುಗಳನ್ನು ಬಳಕೆ ಮಾಡಿದ್ದಾರೆ ಎಂದು ನವೀನ್ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಈ ಕೇಸಿನ ಸಂಕ್ಷಿಪ್ತ ಸಾರಾಂಶವೇನೆಂದರೆ ಪಿರ್ಯಾದುದಾರರಾದ ನವೀನ್ ಕುಮಾರ್ ಎಂ ರವರು ಪಾಲುದಾರರು ಹಾಗೂ ಆಥೋಜಡ್ ಸಿಗ್ನೆಟರಿ ಆಗಿದ್ದು, ಪಿರ್ಯಾದುದಾರರ ಕಂಪನಿಯು ಸಿನಿಮಾದ ಹಾಡು, ಆಲ್ಬಮ್ ಹಾಡು ಹಾಗೂ ಇತ್ಯಾದಿ ಹಾಡುಗಳ ಹಕ್ಕುಸ್ವಾಮ್ಯ ಹಾಗೂ ಪ್ರಸಾರಣದ ಹಕ್ಕನ್ನು ಖರೀದಿ ಮಾಡಿ ಪ್ರಸಾರ ಮಾಡುವ ಕಂಪನಿಯಾಗಿದೆ.

ಪಿರ್ಯಾದಿ ರವರ ಕಂಪನಿಯವರಿಗೆ ಎ1 ಆರೋಪಿಯಾದ ಪ್ರೈವೆಟ್ ಲಿಮಿಟೆಡ್ ರವರು ಹಾಗೂ ಎ1 ಆರೋಪಿ ಕಂಪನಿಯ ಮುಖ್ಯಸ್ಥರಾದ ಎ2 ಆರೋಪಿಯಾದ ರಕ್ಷಿತ್‌ ಶೆಟ್ಟಿ ರವರುಗಳು ನಿರ್ಮಾಣ ಮಾಡುತ್ತಿರುವ ಬ್ಯಾಚುಲ‌ರ್ ಪಾರ್ಟಿ ಚಲನಚಿತ್ರಕ್ಕೆ ಪಿರ್ಯಾದಿ ರವರ ಕಂಪನಿಯು ಹಕ್ಕುಸ್ವಾಮ್ಯ ಹಾಗೂ ಪ್ರಸಾರಣದ ಹಕ್ಕನ್ನು ಪಡೆದುಕೊಂಡಿರುವ “ನ್ಯಾಯ ಎಲ್ಲಿದೆ” ಚಲನಚಿತ್ರದ ಹಾಗೂ “ಗಾಳಿ ಮಾತು” ಚಲನಚಿತ್ರದ ಹಾಡನ್ನು ಬಳಕೆ ಮಾಡಲು ರಾಜೇಶ್ ಎಂಬುವರ ಮೂಲಕವಾಗಿ 2024ನೇ ಸಾಲಿನ ಜನವರಿ ತಿಂಗಳಿನಲ್ಲಿ ಮಾತುಕತೆ ನಡೆಸಿದ್ದರು.

ಆರೋಪಿತರು ಹಾಗೂ ಪಿರ್ಯಾದುದಾರರ ನಡುವೆ ಮಾತುಕತೆಯು ಸರಿಹೊಂದದೆ ಇದ್ದು, ಇದಾದ ನಂತರದಲ್ಲಿ ಪಿರ್ಯಾದಿ ರವರು ಆಮೇಜಾನ್ ಪ್ರೈಮ್ ನಲ್ಲಿ ನೋಡಲಾಗಿ ಬ್ಯಾಚುಲರ್ ಪಾರ್ಟಿ ಚಲನಚಿತ್ರ 2024ನೇ ಸಾಲಿನ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಗೊಂಡಿದ್ದು, ಇದನ್ನು ಪಿರ್ಯಾದಿರವರು ನೋಡಲಾಗಿ ಪಿರ್ಯಾದಿರವರ ಗಮನಕ್ಕೆ ಬಾರದಂತೆ ಎ1 ಹಾಗೂ ಎ2 ಆರೋಪಿತರುಗಳು ಪಿರ್ಯಾದುದಾರರಿಂದ ಯಾವುದೇ ಹಕ್ಕುಸ್ವಾಮ್ಮ ಹಾಗೂ ಪ್ರಸಾರಣದ ಹಕ್ಕನ್ನು ಖರೀದಿ ಮಾಡದೇ ಕಾನೂನು ಉಲ್ಲಂಘಿಸಿ ಹಾಡುಗಳನ್ನು ಪಿರ್ಯಾದುದಾರರು ಹಕ್ಕುಸ್ವಾಮ್ಯವನ್ನು ಹೊಂದಿರುವ “ನ್ಯಾಯ ಎಲ್ಲಿದೆ” ಚಲನಚಿತ್ರದ “ನ್ಯಾಯಾ ಎಲ್ಲಿದೆ” ಹಾಡನ್ನು ಹಾಗೂ “ಗಾಳಿ ಮಾತು” ಚಲನಚಿತ್ರದ “ಒಮ್ಮೆ ನಿನ್ನನ್ನು” ಎಂಬ ಹಾಡುಗಳನ್ನು ಬ್ಯಾಚುಲರ್ ಪಾರ್ಟಿ ಚಲನಚಿತ್ರದಲ್ಲಿ ಅನಧಿಕೃತವಾಗಿ ಬಳಕೆ ಮಾಡಿ ಪಿರ್ಯಾದಿರವರ ಕಂಪನಿಗೆ ಮೋಸ ಮಾಡಿರುತ್ತಾರೆಂದು ಆರೋಪಿತರ ವಿರುದ್ಧ ಕಾನೂನು ಕ್ರಮಕ್ಕಾಗಿ ದೂರು ನೀಡಲಾಗಿದೆ ಎಂದು ಉಲ್ಲಂಘಿಸಲಾಗಿದೆ.

Leave a Reply

Your email address will not be published. Required fields are marked *