ಬೆಂಗಳೂರು :(ಜು.15) ಕರ್ನಾಟಕ ವಿಧಾನಮಂಡಲದ 16ನೇ ಅಧಿವೇಶನ ಆರಂಭವಾಗಿದೆ. ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಬೆಳ್ತಂಗಡಿ ಮಾಜಿ ಶಾಸಕ ದಿವಂಗತ ಕೆ. ವಸಂತ ಬಂಗೇರರಿಗೆ ಸಂತಾಪ ಸೂಚಿಸಲಾಯಿತು.
ಅಧಿವೇಶನದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೂಡಾ ಸಂತಾಪಕ್ಕೆ ಬೆಂಬಲವನ್ನ ಸೂಚಿಸಿದ್ರು. ಈ ವೇಳೆ ಮಾತನಾಡಿದ ಅವರು, ವಸಂತ ಬಂಗೇರರು ದಕ್ಷಿಣ ಕನ್ನಡ ಜಿಲ್ಲೆಗೆ ಒಬ್ಬ ಆದರ್ಶ ನಾಯಕತ್ವ ಕೊಟ್ಟ ಹಿರಿಯ ರಾಜಕಾರಣಿ.
ಇದನ್ನೂ ಓದಿ: https://uplustv.com/2024/07/15/beltangadi-federation-of-barya-pragati-bandhu
ಮೂರೂ ಪಕ್ಷದಿಂದಲೂ ಶಾಸಕರಾಗಿರುವ ಕೀರ್ತಿ ವಸಂತ ಬಂಗೇರರಿಗೆ ಸಲ್ಲುತ್ತದೆ. ಮಂಗನ ಖಾಯಿಲೆಯ ನಿರ್ಮೂಲನೆ ದೃಷ್ಠಿಯಿಂದ ಉಜಿರೆಯಲ್ಲಿ ಪ್ರತ್ಯೇಕ ಆಸ್ಪತ್ರೆಗೆ ಪಟ್ಟು ಹಿಡಿದು ಅದರಲ್ಲಿ ಸಫಲತೆ ಕಂಡವರು ವಸಂತ ಬಂಗೇರ. ತುಳುವಿನ ಬಗ್ಗೆ ಪ್ರೀತಿ ಹಾಗೂ ಪ್ರೋತ್ಸಾಹದ ನಿಟ್ಟಿನಲ್ಲಿ ತುಳುವಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ನೇರಾ, ನಿಷ್ಠುರತೆಯ ನಡತೆ ಮೂಲಕ ಅಧಿಕಾರಿಗಳಿಗೆ , ಸ್ವಪಕ್ಷೀಯ ರಾಜಕಾರಣಿಗಳಿಗೆ ಸಮಾಜದ ಸಮಸ್ಯೆಗೆ ಸ್ಪಂದನೆ ಕೊಡುವ ವ್ಯಕ್ತಿತ್ವ ಅವರದು. ವಸಂತ ಬಂಗೇರ ಕೇವಲ ರಾಜಕಾರಣ ಮಾತ್ರವಲ್ಲ, ತುಳು ಚಲನಚಿತ್ರ ರಂಗದಲ್ಲೂ ನಿರ್ಮಾಪಕರಾಗಿ ಜಿಲ್ಲೆಯ ತುಳುವಿಗೆ ಶಕ್ತಿಯನ್ನ ತುಂಬುವ ಕೆಲಸ ಮಾಡಿದ್ದಾರೆ.
ಬಡ ಮಕ್ಕಳಿಗೆ ಶೈಕ್ಷಣಿಕವಾಗಿ ಶಕ್ತಿ ತುಂಬುವ ಕಾರಣಕ್ಕೋಸ್ಕರ ಶಿಕ್ಷಣ ಸಂಸ್ಥೆ ಪ್ರಾರಂಭ ಮಾಡಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿದ್ದಾರೆ. ಆರ್ಥಿಕ ಕ್ಷೇತ್ರಕ್ಕೆ ಶಕ್ತಿಯಾಗಬೇಕು.
ಬೆಳ್ತಂಗಡಿಯ ಯುವಕರಿಗೆ ಉದ್ಯೋಗ ಅವಕಾಶ ಸೃಷ್ಠಿಯಾಗಬೇಕು ಎಂಬ ನಿಟ್ಟಿನಲ್ಲಿ ಗುರುದೇವ ವಿವಿದ್ದೋದ್ದೇಶ ಸಹಕಾರಿ ಸಂಘವನ್ನ ಪ್ರಾರಂಭ ಮಾಡಿ ನೂರಾರು ವಿದ್ಯಾರ್ಥಿಗಳಿಗೆ ಉದ್ಯೋಗ ಸೃಷ್ಠಿ ಮಾಡಿ ಆರ್ಥಿಕವಾಗಿ ಸಂಸ್ಥೆಯ ಮೂಲಕ ನೆರವಾಗಿದ್ದಾರೆ.
ಅವರು ನಮ್ಮನ್ನು ಅಗಲಿರುವುದು ಇಡೀ ತಾಲೂಕಿನ, ಜಿಲ್ಲೆಯ ಜನರಿಗೆ ಅತೀವ ದುಃಖವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದರು