Wed. Nov 20th, 2024

Mangalore: A huge fire accident in Mangalore MSEZ economic zone, loss of crores of rupees..!!

ಮಂಗಳೂರು :(ಜು.15) ಮಂಗಳೂರು MSEZ ಆರ್ಥಿಕ ವಲಯದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಾಂತರ ರೂಪಾಯಿಗಳ ನಷ್ಟ ಉಂಟಾಗಿದೆ.

ಇಲ್ಲಿನ ಅಥೆಂಟಿಕ್ ಓಷನ್ ಟ್ರೆಷರ್ ನಲ್ಲಿ ಭಾನುವಾರ ಅಪರಾಹ್ನಈ ದುರಂತ ಸಂಭವಿಸಿದ್ದು, 10 ಕೋಟಿ ರೂ. ಮೌಲ್ಯದ ಮತ್ಸ್ಯ ಉತ್ಪನ್ನಗಳು ಬೆಂಕಿಗಾಹುತಿಯಾಗಿದೆ.

ಇದನ್ನೂ ಓದಿ:https://uplustv.com/2024/07/15/udupi-fire-accident-at-home-bar-owner-ramanand-shetty-dies-wife-serious/

ಕಂಪೆನಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಭಾನುವಾರ ರಜಾದಿನವಾದ ಕಾರಣ ನೌಕರರು ಯಾರು ಇರಲಿಲ್ಲ ಎನ್ನಲಾಗಿದೆ.

ಹಾಗಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಥೆಂಟಿಕ್ ಓಷನ್ ಟ್ರೆಷರ್ ಕಂಪೆನಿಯು ಮೀನುಗಳನ್ನು ಸ್ವಚ್ಛಗೊಳಿಸಿ ಮಾಂಸದ ರೂಪಕ್ಕೆ ತಂದು ಅದನ್ನು 10 ಕೆ.ಜಿ. ಯ ಪ್ಯಾಕೆಟ್ ಗಳನ್ನಾಗಿ ಮಾಡಿ ವಿದೇಶಗಳಿಗೆ ರಫ್ತು ಮಾಡುವ ಕಂಪೆನಿಯಾಗಿದೆ.

ಕಂಪೆನಿಯ ಕೋಲ್ಡ್ ಸ್ಟೋರ್ ಸೆಕ್ಷನ್ ಮತ್ತು ಕಟ್ಟಿಂಗ್ ಸೆಕ್ಷನ್ ಗಳಲ್ಲಿ ದುರಸ್ತಿ ಕಾರ್ಯನಡೆಯುತ್ತಿತ್ತು, ಈ ವೇಳೆ ಕೋಲ್ಡ್ ಸ್ಟೋರೆಜ್ ಸೆಕ್ಷನ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಸುಮಾರು 10 ಕೋಟಿ ರೂ. ಮೌಲ್ಯದ ಮತ್ಸ್ಯ ಉತ್ಪನ್ನಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ.

ಸದ್ಯ ಕೈಗಾರಿಕಾ ವಲಯ ಎಂಆರ್ ಪಿಎಲ್, ಗೇಲ್ ಇಂಡಿಯಾ ಕಂಪೆನಿಗಳ ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದವು.

Leave a Reply

Your email address will not be published. Required fields are marked *