Sat. Dec 14th, 2024

ಕಲ್ಲೇರಿ :(ಜು.16) ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಕಲ್ಲೇರಿಯಲ್ಲಿ ನೂತನವಾಗಿ ಪ್ರಾರಂಭಗೊಂಡ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಶ್ರೀದೇವಿ ಅಣವು ಕಾಂಪ್ಲೆಕ್ಸ್ ಕಲ್ಲೇರಿಯಲ್ಲಿ ಜುಲೈ 14 ರಂದು ಶುಭಾರಂಭಗೊಂಡಿತು.

ಈ ಸಮಾರಂಭದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಪಾಲ್ಗೊಂಡು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.

ಇದನ್ನೂ ಓದಿ: https://uplustv.com/2024/07/16/belthangadi-formation-of-dakshina-kannada-

ಈ ಸಂದರ್ಭದಲ್ಲಿ ತಣ್ಣೀರುಪoತ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾವತಿ ಎಂ, ಬೆಳ್ತಂಗಡಿ ತಾಲೂಕು ಆರೋಗ್ಯಧಿಕಾರಿ ಡಾ.ಸೌಜನ್ಯ, ಉಪ್ಪಿನಂಗಡಿ ಸಮುದಾಯ ಅರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ಕೃಷ್ಣಾನoದ ಕೆ,

ತಣ್ಣೀರುಪoತ ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ಜಗದೀಶ್ ಶೆಟ್ಟಿ, ಪದ್ಮುಂಜ ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ತಣ್ಣೀರುಪoತ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯವಿಕ್ರಂ,

ತಣ್ಣೀರುಪoತ ಗ್ರಾಮ ಪಂಚಾಯತ್ ಸದಸ್ಯರಾದ ಸಾಮ್ರಾಟ್, ಪ್ರಧಾನ ಮಂತ್ರಿ ಜನೌಷಧಿ ಪರಿಯೋಜನೆಯ ಮಾಜಿ ನೋಡಲ್ ಅಧಿಕಾರಿ ಡಾ. ಅನಿಲ್ ದೀಪಕ್ ಶೆಟ್ಟಿ, ತಣ್ಣೀರುಪoತ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜಯರಾಜ್ ಹೆಗ್ಡೆ ಪುತ್ತಿಲ ಗುತ್ತು,

ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಗೌಡ ಮುಗೆರೋಡಿ, ಉಪ್ಪಿನಂಗಡಿ ವೇದಶಂಕರ ನಗರ ಶ್ರೀರಾಮ ಶಾಲೆಯ ಅಧ್ಯಕ್ಷರಾದ ಸುನಿಲ್ ಗೌಡ ಅಣವು ಉಪಸ್ಥಿತರಿದ್ದರು.

ಮಾಲಕರಾದ ವಿದ್ಯಾಧರ ಜೈನ್ ಪದ್ಮವಿದ್ಯಾ ಉಪ್ಪಿನಂಗಡಿ ಮತ್ತು ಮನೆಯವರು ಬಂದಂತಹ ಅತಿಥಿ ಅಭ್ಯಾಗತರನ್ನು ಉಪಚರಿಸಿ, ಸತ್ಕರಿಸಿದರು.

ಕಡಿಮೆ ಬೆಲೆಯಲ್ಲಿ ಎಲ್ಲಾ ಔಷಧಿಗಳು ಲಭ್ಯವಿದೆ ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಮಾಲಕರು ತಿಳಿಸಿದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು