
ಉಜಿರೆ :(ಜು.16) “ಹೃದಯದಲ್ಲಿ ಗಮನಹರಿಸುವ ಮೂಲಕ ಮನಸ್ಸನ್ನು ಕೇಂದ್ರೀಕರಿಸಬೇಕು” ಎಂದು ಹಾರ್ಟ್ಫುಲ್ನೆಸ್ ರಾಮಚಂದ್ರ ಮಿಷನ್ ನ ಧ್ಯಾನ ತರಬೇತುದಾರರಾಗಿರುವ ಶ್ರೀಮತಿ ಬಿ.ವತ್ಸಲಾ ಹೇಳಿದರು.
ಇದನ್ನೂ ಓದಿ: https://uplustv.com/2024/07/16/subhash-dandekar-camlin-founder-

ಇವರು ಶ್ರೀ.ಧ.ಮಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಜು.16 ರಂದು ಶಿಕ್ಷಕ ವೃಂದಕ್ಕೆ ಆಯೋಜಿಸಲಾಗಿದ್ದ “ಧ್ಯಾನದ ಮಹತ್ವ”

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶಿಕ್ಷಕರಿಗೆ ಧ್ಯಾನದ ಮಹತ್ವ ಹಾಗೂ ಧ್ಯಾನ ಮಾಡುವ ಕುರಿತು ಹಂತ ಹಂತಗಳಾಗಿ ತಿಳಿಸಿ ತರಬೇತಿ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಶಿಕ್ಷಕಿ ಚೇತನ ಕಾರ್ಯಕ್ರಮ ನಿರೂಪಿಸಿದರು.
