Wed. Nov 20th, 2024

Bengaluru: The government has given good news to the people of Karnataka- 75% reservation for Kannadigas in private sector

ಬೆಂಗಳೂರು:(ಜು.17) ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳು ನಿರ್ವಹಣಾ ಸ್ಥಾನಗಳಲ್ಲಿ ಶೇಕಡಾ 50 ರಷ್ಟು ಮತ್ತು ನಿರ್ವಹಣೇತರ ಹುದ್ದೆಗಳಲ್ಲಿ ಶೇಕಡಾ 75 ರಷ್ಟು ಹುದ್ದೆಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಕಾಯ್ದಿರಿಸಬೇಕೆಂಬ ಕಡ್ಡಾಯಗೊಳಿಸುವ ಮಸೂದೆಯನ್ನು ಕರ್ನಾಟಕ ಕ್ಯಾಬಿನೆಟ್ ಅನುಮೋದಿಸಿದೆ.

ಇದನ್ನೂ ಓದಿ: https://uplustv.com/2024/07/17/uttar-pradesh-mother-set-on-fire-

ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಕಲ್ಪಿಸುವ ಐತಿಹಾಸಿಕ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಮುಂದೆ ಬರಲಿರುವ ಸರ್ಕಾರದ ಹೊಸ ನಿಯಮ ಐಟಿ ಕಂಪನಿಗಳಿಗೂ ಅನ್ವಯ ಆಗಲಿದೆ. ಆಡಳಿತ (ಮ್ಯಾನೇಜ್ ಮೆಂಟ್) ಕೋಟಾದಡಿ ಶೇಕಡಾ ಮೀಸಲು ಇಡಲಾಗುತ್ತದೆ.

ಆಡಳಿತಾತ್ಮಕ ಕೋಟಾದಡಿ ಸೂಪರ್ ವೈಸರ್, ಮ್ಯಾನೇಜರ್, ತಾಂತ್ರಿಕ ತಜ್ಞರು ಸೇರಿದಂತೆ ಹಲವು ಹುದ್ದೆಗಳು ಬರಲಿದೆ. ವಿಶೇಷ ಅಂದರೆ ಗುತ್ತಿಗೆ ಆಧಾರದ ನೇಮಕಾತಿಗೂ ಅನ್ವಯ ಆಗಲಿದೆ.

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಸಿಗಬೇಕು ಅನ್ನೋ ಕನ್ನಡಿಗರ ಕನಸು ನನಸಾಗುವ ಸಮಯ ಬಂದಿದೆ. ಖಾಸಗಿ ವಲಯದಲ್ಲಿ ಇನ್ಮುಂದೆ ಕನ್ನಡಿಗರಿಗೆ ಉದ್ಯೋಗ ಸಿಗೋದು ಗ್ಯಾರಂಟಿ ಆಗಿದೆ. ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿದೆ.

ಇದೇ ವಿಚಾರವಾಗಿ ವಿಧಾನಸಭೆ ಕಲಾಪದಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಕನ್ನಡಿಗರ ಸ್ವಾಭಿಮಾನ ಎತ್ತಿಹಿಡಿಯಬೇಕು ಅಂತ ಬಂದಿದೆ.

ಕನ್ನಡ ಬೋರ್ಡ್, ಭಾಷೆ, ಧ್ವಜ ಬಳಕೆ, ನಮ್ಮ ಸಂಸ್ಕೃತಿ, ಕಡತಗಳಲ್ಲಿ ಕನ್ನಡ ಬಳಕೆ ಆಗಲಿದೆ. ಮುಂದೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಇರಬಹುದು. ಕಡ್ಡಾಯವಾಗಿ ಕನ್ನಡಿಗರಿಗೆ ಇಷ್ಟು ಪರ್ಸೆಂಟ್ ಇರಬೇಕು ಎಂಬ ತೀರ್ಮಾನವನ್ನು ಮಾಡಿದ್ದೇವೆ. ಈ ಸಂಬಂಧ ಬಿಲ್ ತರುತ್ತಿದ್ದೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *