Tue. Jan 13th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

Daily Horoscope : Today this Rashi will get angry even for a small matter!!!

ಮೇಷ ರಾಶಿ : ನಿಮ್ಮ ಸಹೋದ್ಯೋಗಿಗಳು ನಿಮಗೆ ಅನಿವಾರ್ಯವಾಗಿ ಬಂದ ಸಂಕಟಕ್ಕೆ ಧನಸಹಾಯ ಮಾಡುವರು. ಇಂದು ನಿಮ್ಮ ಅನೇಕ ದಿನಗಳ ಕಾಲ ಬಾಕಿ ಇರುವ ಕೆಲಸಗಳು ಒಂದೊಂದಾಗಿಯೇ ಸಮಾಪ್ತಿಯಾಗಲಿದೆ‌. ಬಂಧುಗಳ ಜೊತೆ ವಿವಾದವು ಆಗಬಹುದು.

ವೃಷಭ ರಾಶಿ : ಇಂದು ನೀವು ವಹಿಸಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವುದು. ಇಂದು ನಿಮಗೆ ಅಪರೂಪದ ವ್ಯಕ್ತಿಗಳ ಭೇಟಿಯಾಗಬಹುದು. ಘಟನೆಗಳು ನಿಮ್ಮ ಅಲೋಚನಾ ಕ್ರಮಗಳು ಬದಲಿಸಬಹುದು.‌

ಮಿಥುನ ರಾಶಿ : ನಿಮ್ಮ ಜೀವನದಲ್ಲಿ ತಪ್ಪು ತಿಳುವಳಿಕೆಗಳೇ ಹೆಚ್ಚು ತೋರುವುದು. ನಿಮ್ಮ ಮಾತಿನ ಮೇಲೆ ಗಮನವಿರಲಿ. ನೀವು ಶಾಂತವಾಗಿ ಇದ್ದಷ್ಟೂ ನಿಮ್ಮ ಸಂಬಂಧವು ಗಟ್ಟಿಯಾಗುವುದು. ಯಾರ ಮೇಲೂ ಗೊತ್ತಿಲ್ಲದೇ ಏನನ್ನಾದರೂ ಹೇಳಿಬಿಡಬೇಡಿ.

ಕರ್ಕಾಟಕ ರಾಶಿ : ಇಂದು ಪ್ರತಿ ಸಣ್ಣ ವಿಚಾರಕ್ಕೂ ಕೋಪ‌ ಮಾಡಿಕೊಳ್ಳುವಿರಿ. ಇಂದು ನೀವು ಬಹಳ ಮುಖ್ಯವಾದ ಮತ್ತು ನಿಮಗೆ ಪ್ರಿಯವಾದ ವಸ್ತುವೊಂದನ್ನು ಪಡೆಯಬಹುದು. ಹೆಚ್ಚು ಉತ್ಸಾಹದಾಯಕವಾದ ದಿನ‌ ನಿಮ್ಮದಾಗಲಿದೆ.

ಸಿಂಹ ರಾಶಿ : ಇಂದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳ ಶ್ರಮ ಸಫಲವಾಗದು. ಭೂಮಿಯ ವ್ಯವಹಾರದಲ್ಲಿ ಉತ್ತಮ‌ ನಡೆ ಇರಲಿದೆ.

ಕನ್ಯಾ ರಾಶಿ : ಇಂದು ಅಪರಿಚಿತರು ಮಾರಾಟದ ವಿಚಾರದಲ್ಲಿ ಮೋಸ ಮಾಡುವರು. ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ನೀವು ಶ್ರಮಿಸಬೇಕಾಗುತ್ತದೆ. ಹಳೆಯ ಖಾಯಿಲೆಗಳು ಪುನಃ ಬರುವ ಸಾಧ್ಯತೆ ಇದೆ. ಕಳೆದುಕೊಂಡಿದ್ದನ್ನು ಪಡೆದುಕೊಳ್ಳಲು ಯತ್ನಿಸಬಹುದು.

ತುಲಾ ರಾಶಿ : ಸಾಂಸಾರಿಕ ಬದುಕಿನಲ್ಲಿ ಇಂದು ಸಣ್ಣಪುಟ್ಟ ಕಲಹಗಳಿದ್ದರೂ ತೂಗಿಸಿಕೊಂಡು ಹೋಗುವ ಸಾಮರ್ಥ್ಯ ಇರುವುದು. ಮರ್ಯಾದಿಗೆ ಅಂಜಿ ಮಾಡಬೇಕಾದ ಕೆಲಸಗಳನ್ನು ಮುಂದೂಡುವಿರಿ. ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧೆಯು ಕಡಿಮೆ ಆದೀತು.

ವೃಶ್ಚಿಕ ರಾಶಿ : ಎಂತಹ ಆಪ್ತರಾದರೂ ಸಹಕಾರವನ್ನು ಕೇಳುವಾಗ ಹಿಂದೇಟು ಹಾಕುವಿರಿ. ನೀವು ಏನನ್ನಾದರೂ ಸಾಧಿಸುವ ನಿಮ್ಮ ಹೋರಾಟದಲ್ಲಿ ಸ್ವಲ್ಪ ನಿರ್ದಯತ್ವದಿಂದ ಇರಬೇಕಾಗುತ್ತದೆ. ನಿಮ್ಮ ಅಹಂಕಾರವೇ ನಿಮಗೆ ಪೆಟ್ಟುಕೊಡಬಹುದು.

ಧನು ರಾಶಿ : ಇಂದು ನಿಮಗೆ ಹಳೆಯ ಘಟನೆಗಳಿಂದ ಪಾಪಪ್ರಜ್ಞೆ ಕಾಡಬಹುದು. ನಿಮ್ಮ ಕೆಲಸವನ್ನು ಬದಿಗಿರಿಸಿ ನಿಮಗೆ ಸಿಕ್ಕ ಯಶಸ್ಸನ್ನು ಅನುಭವಿಸಿ. ಹತ್ತಾರು ಅವಕಾಶಗಳು ತೆರೆದಿದ್ದರೂ ಯಾವುದೂ ನಿಮಗೆ ಸೂಕ್ತವಾಗಿ ಇರಲಾರದು. ಯೋಗ್ಯವಾದುದು ಸಿಕ್ಕರೂ ಇನ್ನೊಬ್ಬರ ಪಾಲಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:https://uplustv.com/2024/07/16/mumbai-administrators-of-sringeri-sri-sharada-peetha-guruseva

ಮಕರ ರಾಶಿ : ಇಂದು ನಿಮ್ಮ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದಂತೆ ಅಂತಿಮ‌ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಮಾನಸಿಕ ಒತ್ತಡದಿಂದ ಹೊರಬರಲು ಪ್ರಯತ್ನಿಸಿ. ಎಲ್ಲದಕ್ಕೂ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡುವರು. ನಿಮಗೆ ಅದು ಇಷ್ಟವಾಗದೇ ಕಿರಿಕಿರಿ ಆದೀತು.

ಕುಂಭ ರಾಶಿ : ಇಂದು ನಿಮ್ಮ ಮನಸ್ಸು ಅನೇಕರ ಸಲಹೆಗಳ ಕಾರಣದಿಂದ ಬಹಳ ಚಂಚಲವಾಗಿರಲಿದೆ. ಸಿಕ್ಕ ಸೌಕರ್ಯಗಳಿಂದ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗಬಹುದು. ಸಜ್ಜನರ ಸಹವಾಸ ನಿಮಗೆ ಸಿಗಲಿದೆ. ನಿಮ್ಮ ಉತ್ತಮ‌ ಆಲೋಚನೆಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳುವಿರಿ.

ಮೀನ ರಾಶಿ : ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಸಹಕಾರ ಸಿಗಲಿದೆ. ನಿಮ್ಮ ಪ್ರಯತ್ನಕ್ಕೆ ಅದೃಷ್ಟವೂ ಜೊತೆಯಾಗುವುದು. ಅಲ್ಪ ಪ್ರಯತ್ನದಿಂದ ಇಂದು ಕೆಲಸವನ್ನು ಸಾಧಿಸಿಕೊಳ್ಳಬಹುದು. ನಿಮ್ಮನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡರೂ ಇನ್ನೊಬ್ಬರು ಅದನ್ನು ಬೇರೇ ರೀತಿಯಲ್ಲಿ ಅರ್ಥೈಸುವರು. ಸ್ನೇಹಿತರಿಂದ ಸಹಾಯಗಳು ಸಿಗಬಹುದು.

Leave a Reply

Your email address will not be published. Required fields are marked *