Sat. Apr 12th, 2025

Oman: 16 missing including 13 Indians as oil tanker capsizes at sea

ಒಮನ್ :(ಜು.17) ಒಮನ್ ಕರಾವಳಿಯಲ್ಲಿ 117 ಮೀಟರ್ ಉದ್ದದ ತೈಲ ಟ್ಯಾಂಕರ್ ಹಡಗು ಮುಳುಗಿದ್ದು, ಅದರಲ್ಲಿದ್ದ 13 ಮಂದಿ ಭಾರತೀಯರು ಸೇರಿ 16 ಮಂದಿ ಸಿಬ್ಬಂದಿ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ:https://uplustv.com/2024/07/17/mangalore-the-website-of-ecolade-tech-solutions-pvt-

ನಾಪತ್ತೆಯಾಗಿರುವವರಲ್ಲಿ 13 ಭಾರತೀಯ ಪ್ರಜೆಗಳು ಹಾಗೂ ಮೂವರು ಶ್ರೀಲಂಕಾ ನಾಗರೀಕರು ಎಂದು ಕಡಲ ಭದ್ರತಾ ಕೇಂದ್ರ (MSC) ಮಾಹಿತಿ ನೀಡಿದೆ.

ಕಾಣೆಯಾದವರ ಪತ್ತೆಹಚ್ಚಲು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿವೆ. ಆದರೆ ಇಲ್ಲಿಯವರೆಗೆ ಅವರಲ್ಲಿ ಯಾರೊಬ್ಬರ ಕುರುಹು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಕೊಮೊರೊಸ್ ಧ್ವಜದ ತೈಲ ಟ್ಯಾಂಕರ್ ‘ಪ್ರೆಸ್ಟೀಜ್ ಫಾಲ್ಕನ್’ ನಲ್ಲಿ 13 ಭಾರತೀಯರು ಮತ್ತು ಮೂವರು ಶ್ರೀಲಂಕಾದವರು ಇದ್ದರು ಎಂದು ಕಡಲ ಭದ್ರತಾ ಕೇಂದ್ರವು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು