Wed. Nov 20th, 2024

ಮಂಗಳೂರು: Coastal Railway Demands- ಗರಿಗೆದರಿದ ಕರಾವಳಿ ರೈಲ್ವೇ ಬೇಡಿಕೆಗಳು: ಸಚಿವ ಸೋಮಣ್ಣ ನೇತೃತ್ವದಲ್ಲಿ ಮೊದಲ ಸಭೆ

ಮಂಗಳೂರು: (ಜು.18) ಮಂಗಳೂರು ರೈಲು ವಿಭಾಗದ ಬೇಡಿಕೆಗಳ ಉದ್ದ ಪಟ್ಟಿಯೇ ಇದ್ದು, ಈ ವರೆಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ರೈಲ್ವೇ ರಾಜ್ಯ ಖಾತೆ ಸಚಿವ ಇಂದು ಸಭೆ ನಡೆಸಿ ಮನವಿ ಸ್ವೀಕರಿಸಲಿದ್ದಾರೆ. ಮಂಗಳೂರು ರೈಲ್ವೆಯು ಪಾಲಕ್ಕಾಡ್, ನೈರುತ್ಯ ರೈಲ್ವೆ ಹಾಗೂ ಕೊಂಕಣ ರೈಲ್ವೆ ವಿಭಾಗದಲ್ಲಿ ಹಂಚಿ ಹೋಗಿದ್ದು ಅಭಿವೃದ್ಧಿ ಮರೀಚಿಕೆಯಾಗಿದೆ. ಪ್ರಮುಖ ರೈಲುಗಳ ನಿಲ್ದಾಣಗಳ ಪರಿಷ್ಕರಣೆ, ಹಳಿಗಳ ಅಭಿವೃದ್ಧಿ , ಘಟ್ಟ ಪ್ರದೇಶದಲ್ಲಿ ರೈಲಿನ ವೇಗ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಇಂದು ಸಲ್ಲಿಸಿದ್ದಾರೆ.

ದೇಶದ ಪ್ರಮುಖ ನಗರಗಳಿಗೆ ಹೋಲಿಸಿದಾಗ ರಾಜ್ಯದ ಕರಾವಳಿ ಭಾಗದ ರೈಲ್ವೆ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ. ಪ್ರಯಾಣಿಕರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಆಗದೆ ಇರುವುದು ಹಾಗೂ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಗದೇ ಇರುವುದರಿಂದ ಸೌಲಭ್ಯಗಳು ಮರೀಚಿಕೆ ಆಗಿವೆ.ಇದೀಗ ಕೇಂದ್ರದ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಜು.17ರಂದು ರೈಲ್ವೆ ಸಮಸ್ಯೆಗಳ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಸಿರುವುದು ಹಲವು ಭರವಸೆ ಈಡೇರಿಕೆಯ ಆಶಾ ಭಾವನೆ ಮೂಡಿದೆ. ರಾಜ್ಯದ ಬಂದರು ನಗರಿ ಮಂಗಳೂರಿನಲ್ಲಿ ಮೊದಲ ಬಾರಿಗೆ ರೈಲ್ವೆ ಇಲಾಖೆ ಸಚಿವರೊಬ್ಬರ ಸಭೆ ನಡೆದದ್ದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರ ಮುತುವರ್ಜಿಯಲ್ಲಿ ಹೋರಾಟಗಾರರ ಒತ್ತಾಸೆಯಂತೆ ಸಭೆ ನಿಗದಿಯಾಗಿರುವುದು ಕುತೂಹಲ ಮೂಡಿಸಿದೆ.

ಪಾಲಕ್ಕಾಡ್‌, ಕೊಂಕಣ, ನೈಋುತ್ಯ ರೈಲ್ವೆ ವಲಯಗಳಿಂದ ಕೂಡಿರುವ ಮಂಗಳೂರಿನ ರೈಲ್ವೆ ಪರಿಸ್ಥಿತಿ ಹೀನಾಯವಾಗಿದ್ದು, ಅಭಿವೃದ್ಧಿಗೆ ಕುಂಠಿತವಾಗಿದೆ. ಆದ್ದರಿಂದ ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗದ ರಚನೆ ಈ ಭಾಗದ ಅತ್ಯಂತ ಪ್ರಮುಖ ಬೇಡಿಕೆಯಾಗಿದೆ. ಸದ್ಯ ಜಿಲ್ಲೆಯ ರೈಲ್ವೆ ಬಳಕೆದಾರರು ಈ ಬಗ್ಗೆ ಸಹಿ ಅಭಿಯಾನ ನಡೆಸುತ್ತಿದ್ದು, ಈಗಾಗಲೇ 3,800ಕ್ಕೂ ಅಧಿಧಿಕ ಮಂದಿ ಸಹಿ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ:https://uplustv.com/2024/07/18/beltangadi-ಭಾರೀ-ಮಳೆಗೆ-ಲಾಯಿಲ-ಮನೆಯೊಂದರ-ಹಿಂಬದಿಯ-ಗೋಡೆ-ಕುಸಿತ/

ಹೋರಾಟಗಾರರು ಮತ್ತು ಜನಪ್ರತಿನಿಧಿಗಳು ಸಚಿವರ ಮುಂದೆ ಇಟ್ಟ ಬೇಡಿಕೆಗಳ ಪಟ್ಟಿ ಈ ಕೆಳಗಿನಂತಿದೆ:

ಮಂಗಳೂರು- ಬೆಂಗಳೂರು ನಡುವೆ ಹೊಸ ರೈಲ್ವೆ ಲೈನ್‌ ಅಗತ್ಯವಿದೆ.
-ಸಕಲೇಶಪುರ- ಸುಬ್ರಹ್ಮಣ್ಯ ಭಾಗದಲ್ಲಿ ಹಳಿ ಮೇಲ್ದರ್ಜೆಗೇರಿಸುವುದು.
-ಘಾಟ್‌ ಸೆಕ್ಷನ್‌ಗಳಲ್ಲಿ ವೇಗವನ್ನು ಗಂಟೆಗೆ 35 ಕಿ.ಮೀ.ಗೆ ಹೆಚ್ಚಿಸುವುದು.
-ಹೊಸ ರೈಲುಗಳನ್ನು ಪ್ರಾರಂಭಿಸಲು ಹೆಚ್ಚುವರಿ ಸ್ಟ್ಯಾಬ್ಲಿಂಗ್‌ ಮಾರ್ಗಗಳನ್ನು ಒದಗಿಸುವ ಮೂಲಕ ಸುಬ್ರಹ್ಮಣ್ಯ ರಸ್ತೆ ನಿಲ್ದಾಣವನ್ನು ಅಭಿವೃದ್ಧಿಪಡಿಸುವುದು.
-ಗಂಟೆಗೆ 100 ಕಿ.ಮೀ. ವೇಗದಲ್ಲಿ ರೈಲುಗಳ ಸಂಚಾರಕ್ಕೆ ಸುಬ್ರಹ್ಮಣ್ಯ ರಸ್ತೆ-ಪಡೀಲ್ ವಿಭಾಗ ಮತ್ತು ಸಕಲೇಶಪುರ-ಹಾಸನ ವಿಭಾಗದಲ್ಲಿ ಹಳಿಯನ್ನು ಮೇಲ್ದರ್ಜೆಗೇರಿಸುವುದು.
ಮಂಗಳೂರು- ಕಬಕ ಪುತ್ತೂರು ಪ್ಯಾಸೆಂಜರ್‌ ರೈಲಿನ ಬೆಳಗ್ಗೆ ಮತ್ತು ಸಂಜೆ ಸೇವೆಯನ್ನು ಸುಬ್ರಹ್ಮಣ್ಯ ರಸ್ತೆವರೆಗೆ ವಿಸ್ತರಿಸಬೇಕು
ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ಗೆ ಎಲ್‌ ಎಚ್‌ಬಿ ಬೋಗಿಗಳನ್ನು ಒದಗಿಸುವುದು.
-ಮಂಗಳೂರಿನಿಂದ- ಬೆಂಗಳೂರಿಗೆ ಪರ್ಯಾಯ ರೈಲು ಮಾರ್ಗವಾದ ಹೊನ್ನಾವರ- ತಾಳಗುಪ್ಪ, ಶಿವಮೊಗ್ಗ ಹೊಸ ರೈಲು ಮಾರ್ಗ ನಿರ್ಮಿಸುವುದು.
ಸುಬ್ರಹ್ಮಣ್ಯ, ಕಬಕ- ಪುತ್ತೂರು, ಕಾಣಿಯೂರು, ಎಡಮಂಗಲ, ಸುರತ್ಕಲ್‌ ರೈಲು ನಿಲ್ದಾಣಗಳನ್ನು ಅಧುನೀಕರಣಗೊಳಿಸುವುದು.

ದಕ್ಷಿಣ ರೈಲ್ವೆ

  • ಮಂಗಳೂರು ಸೆಂಟ್ರಲ್‌- ಮಂಗಳೂರು ಜಂಕ್ಷನ್‌ ರೈಲು ಮಾರ್ಗ ದ್ವಿಪಥಗೊಳಿಸುವುದು.
    *ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ವಿಶ್ವ ದರ್ಜೆಯ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸುವುದು.
  • ಮಂಗಳೂರಿನಿಂದ ದಕ್ಷಿಣಕ್ಕೆ ಹೋಗುವ ರೈಲುಗಳನ್ನು ಓಡಿಸಲು ಉಳ್ಳಾಲ ನಿಲ್ದಾಣವನ್ನು ಟರ್ಮಿನಲ್ ನಿಲ್ದಾಣವಾಗಿ ಅಭಿವೃದ್ಧಿಪಡಿಸುವುದು.
  • ಪಾಂಡೇಶ್ವರದಲ್ಲಿ ಲೆವೆಲ್ ಕ್ರಾಸಿಂಗ್‌ಗೆ ಬದಲಾಗಿ ರಸ್ತೆ ಓವರ್‌ ಬ್ರಿಡ್ಜ್‌ ಒದಗಿಸಿ, ಬಂದರ್‌ ಗೂಡ್ಸ್‌ಶೆಡ್‌ ಅನ್ನು ರೈಲು ನಿಲುಗಡೆ/ನಿರ್ವಹಣಾ ಯಾರ್ಡ್‌ನಂತೆ ಅಭಿವೃದ್ಧಿಪಡಿಸುವುದು.
  • ಬೆಳಗ್ಗೆ ಮತ್ತು ಸಂಜೆ ಮಂಗಳೂರು- ಕಬಕ ಪುತ್ತೂರು ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯ ರಸ್ತೆ ವರೆಗೆ ಮೆಮು ರೇಕ್‌ ಒದಗಿಸುವ ಮೂಲಕ ವಿಸ್ತರಿಸುವುದು.
  • ಹಿಂದಿನ ದಕ್ಷಿಣ ರೈಲ್ವೆಯ ಮಂಗಳೂರು- ವೈಷ್ಣೋದೇವಿ ಕತ್ರಾ ನವಯುಗ ಎಕ್ಸ್‌ಪ್ರೆಸ್‌ ಅನ್ನು ಮರುಪರಿಚಯಿಸುವುದು ಮತ್ತು ಸುಬ್ರಹ್ಮಣ್ಯ ರಸ್ತೆ- ಅರಸಿಕೆರೆ-ಪುಣೆ-ಹೊಸದಿಲ್ಲಿ ವಿಭಾಗದ ಮೂಲಕ ಮರುಮಾರ್ಗಗೊಳಿಸುವುದು.
  • ರೈಲು ಸಂಖ್ಯೆ 12133/34 ಮುಂಬಯಿ-ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ಅನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸುವುದು.
  • ರೈಲು ಸಂಖ್ಯೆ 12619/20 ಮುಂಬಯಿ- ಮಂಗಳೂರು ಮತ್ಸ್ಯಗಂಧ ಎಕ್ಸ್‌ಪ್ರೆಸ್‌ಗೆ ಎಲ್‌ಎಚ್‌ಬಿ ಕೋಚ್‌ಗಳನ್ನು ಒದಗಿಸುವುದು. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸವುದು.
    ಮಂಗಳೂರು ಮತ್ತು ಮಡಗಾಂವ್‌ ನಡುವಿನ ಪ್ರಯಾಣಿಕ ರೈಲನ್ನು ಬೆಳಗ್ಗೆ 9 ಗಂಟೆಗೆ ಮಂಗಳೂರು ತಲುಪಲು ಮತ್ತು ಮಂಗಳೂರು ಸೆಂಟ್ರಲ್‌ನಿಂದ 18.00 ಗಂಟೆಗೆ ಮಡಗಾಂವ್‌ ಕಡೆಗೆ ಹಿಂದಿರುಗಿಸಲು ವ್ಯವಸ್ಥೆ ಮಾಡುವುದು.
    ಮಂಗಳೂರು ಸೆಂಟ್ರಲ್ ಮತ್ತು ಮುಂಬಯಿ ಬಾಂದ್ರಾ ಟರ್ಮಿನಲ್‌ ನಡುವೆ ವಸಾಯಿ ರಸ್ತೆ ಮೂಲಕ ಹೊಸ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಆರಂಭಿಸುವುದು.
    ದಕ್ಷಿಣ ಭಾರತದಿಂದ ಉತ್ತರ ಭಾರತದ ಹೃಷಿಕೇಶಕ್ಕೆ ವಾರಕ್ಕೆ ಒಂದೇ ರೈಲು ಇದ್ದು, ಅದು ಕೂಡ ಕೇರಳದಿಂದ ಹೊರಡುತ್ತಿದ್ದು, ಮಂಗಳೂರಿನಿಂದ ಹೊಸ ರೈಲು ಆರಂಭಿಸಬೇಕು.
    ಕೊಂಕಣ ರೈಲ್ವೆ ಶೇ.40ರಷ್ಟು ಹೆಚ್ಚುವರಿ ವಿಸುವ ಪ್ರಯಾಣ ದರ ರದ್ದುಗೊಳಿಸಬೇಕು.
    ಎಕ್ಸ್‌ಪ್ರೆಸ್‌ ರೈಲುಗಳಾಗಿ ಓಡಾಟ ನಡೆಸುವ ಮಂಗಳೂರು -ಮಡಗಾಂವ್‌ ಪ್ಯಾಸೆಂಜರ್‌ ಹಾಗೂ ಮೆಮು ರೈಲುಗಳನ್ನು ಪ್ಯಾಸೆಂಜರ್‌ ರೈಲುಗಳನ್ನಾಗಿ ಪರಿವರ್ತಿಸುವುದು.

ಮಂಗಳೂರು ಜಂಕ್ಷನ್‌ ಮೂಲಕ ಸಂಚರಿಸುವ ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೂ ಆಗಮಿಸಬೇಕು.
2022ರಲ್ಲಿ ಬೆಂಗಳೂರಿನಲ್ಲಿ ನಡೆದ ಇಂಟರ್‌ ಝೋನ್‌ ರೈಲ್ವೆ ಟೈಮ್ ಟೇಬಲ ಕಾನ್ಫರೆನ್ಸ್‌ (ಐಆರ್‌ಟಿಟಿಸಿ) ನಲ್ಲಿ ದಕ್ಷಿಣ ರೈಲ್ವೆ ಪ್ರಸ್ತಾಪಿಸಿದ ಮಂಗಳೂರು ಮತ್ತು ಭಾವನಗರ ನಡುವೆ ಹೊಸ ಸಾಪ್ತಾಹಿಕ ರೈಲು ಪರಿಚಯಿಸುವ ಪ್ರಸ್ತಾವನೆಗೆ ರೈಲ್ವೆ ಮಂಡಳಿಯ ಅನುಮೋದನೆ ನೀಡಬೇಕಿದೆ. ಈ ಪ್ರಸ್ತಾವನೆಗೆ ಸಂಬಂಧಪಟ್ಟ ವಲಯ ರೈಲ್ವೆ ಕೆಆರ್‌ಸಿಎಲ್‌, ಸಿಆರ್‌., ಎಸ್‌ಆರ್‌., ಡಬ್ಲ್ಯೂಆರ್‌ ಒಪ್ಪಿಗೆ ನೀಡಿದೆ.\
ಮಂಗಳೂರು ಸೆಂಟ್ರಲ್- ಮಡಗಾಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಮುಂಬಯಿ ವರೆಗೆ ವಿಸ್ತರಿಸುವುದು.
ಮಂಗಳೂರು ಭಾಗದ ಪ್ರಯಾಣಿಕರಿಗೆ ಲಭ್ಯವಿರುವ ಸೀಟುಗಳು ಕಡಿಮೆಯಾಗುವುದರಿಂದ ಬೆಂಗಳೂರು- ಕಣ್ಣೂರು ಎಕ್ಸ್‌ಪ್ರೆಸ್‌ ಅನ್ನು ಕೋಝಿಕ್ಕೋಡ್‌ವರೆಗೆ ವಿಸ್ತರಿಸಲು ರೈಲ್ವೆ ಮಂಡಳಿ ನೀಡಿದ ಆದೇಶವನ್ನು ಹಿಂಪಡೆಯಬೇಕು.
ನೈಋುತ್ಯ ರೈಲ್ವೆಯ ಒಪ್ಪಿಗೆ ನೀಡಿರುವ ಪ್ರಸ್ತಾವನೆಯಾದ ಮಂಗಳೂರು- ವಿಜಯಪುರ ವಿಶೇಷ ರೈಲನ್ನು ಎಕ್ಸ್‌ಪ್ರೆಸ್‌ ರೈಲಾಗಿ ಮಾರ್ಪಡಿಸುವುದು.

ಮೀಟರ್‌ ಗೇಜ್‌ ಕಾಲದಲ್ಲಿ ಓಡಾಟ ನಡೆಸುತ್ತಿದ್ದ ಸುಬ್ರಹ್ಮಣ್ಯ- ಮಂಗಳೂರು ಪ್ಯಾಸೆಂಜರ್‌, ಮಂಗಳೂರು- ಮೀರಜ್‌ ರೈಲುಗಳ ಪುನರಾರಂಭ.
ಕೋವಿಡ್‌ ಮುನ್ನ ಪಾಲಕ್ಕಾಡ್‌- ಸೇಲಂ ಮೂಲಕ ಓಡಾಟ ನಡೆಸುತ್ತಿದ್ದ ಮಂಗಳೂರು- ಕಾತ್ರ ನವಯುಗ ಎಕ್ಸ್‌ಪ್ರೆಸ್‌ ರೈಲನ್ನು ಮಾರ್ಗ ಬದಲಾವಣೆ ಮಾಡಿ ಮಂಗಳೂರು ಅರಸೀಕೆರೆ- ಪುಣೆ ಮೂಲಕ ಪುನರಾರಂಭಿಸುಧಿವುಧಿದು.
ಪ್ರತಿ ಮೂರು ತಿಂಗಳಿಗೊಮ್ಮೆ ಸಂಸದರ ಅಧ್ಯಕ್ಷತೆಯಲ್ಲಿ ಮೈಸೂರು- ಪಾಲಕ್ಕಾಡ್‌- ಕೊಂಕಣ ರೈಲ್ವೆ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಭೆ ನಡೆಸುವುದು.
ಪ್ರಸ್ತಾವಿತ ಹೊನ್ನಾವರ- ತಾಳಗುಪ್ಪ ಹೊಸ ರೈಲು ಮಾರ್ಗವನ್ನು ನಿರ್ಮಿಸುವ ಮೂಲಕ ಮಂಗಳೂರು ಮತ್ತು ಶಿವಮೊಗ್ಗ ನಡುವೆ ರೈಲ್ವೆ ಸಂಪರ್ಕವನ್ನು ಒದಗಿಸುವುದು, ಈ ಪ್ರಸ್ತಾವನೆಯ ಡಿಪಿಆರ್‌ ಅನ್ನು ಈಗಾಗಲೇ ರೈಲ್ವೆ ಸಚಿವಾಲಯದ ಪರಿಗಣನೆಗೆ ನೈಋತ್ಯ ರೈಲ್ವೆ ಸಲ್ಲಿಸಿದೆ.

Leave a Reply

Your email address will not be published. Required fields are marked *