Wed. Nov 20th, 2024

ಮಂಗಳೂರು:(ಜು.18) ಸರ್ಕಾರಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬ ಆಚರಣೆಗಳಿಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.

ಇದನ್ನೂ ಓದಿ: https://uplustv.com/2024/07/18/udupi-dead-body-of-a-young-man-found-near-railway-tracks-suspect-suicide/

ಅಲ್ಲದೆ, ಸರ್ಕಾರಿ ಶಾಲಾ ಮೈದಾನಗಳಲ್ಲಿ ಶಿಕ್ಷಣೇತರ ಚಟುವಟಿಕೆಗಳಿಗೆ ಅವಕಾಶ ನಿರಾಕರಿಸಿ ಸುತ್ತೋಲೆ ಪ್ರಕಟಿಸಿ ದಕ್ಷಿಣ ಕನ್ನಡ ಶಿಕ್ಷಣ ಇಲಾಖೆ ಆದೇಶ ನೀಡಿದೆ.

ಇದು ಇದೀಗ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರ್ಕಾರದ ಈ ಆದೇಶದಿಂದ ಮತ್ತೆ ದಕ್ಷಿಣ ಕನ್ನಡದಲ್ಲಿ ಧರ್ಮ ದಂಗಲ್ ಶುರುವಾಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ಗಣೇಶೋತ್ಸವ, ಕೃಷ್ಣ ಜನ್ಮಾಷ್ಠಮಿ ಆಚರಣೆಗೂ ಬ್ರೇಕ್ ಬೀಳುತ್ತಾ ಎಂಬ ಅನುಮಾನ ಮೂಡಿದೆ. ಸರ್ಕಾರದ ಈ ನಿರ್ಧಾರ ದಕ್ಷಿಣ ಕನ್ನಡದಲ್ಲಿ ಮತ್ತೆ ಧರ್ಮ ವಿವಾದಕ್ಕೆ ಕಾರಣವಾಗುವ ಎಲ್ಲಾ ಮುನ್ಸೂಚನೆ ನೀಡಿದೆ.

ಇದೀಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಈ ಆದೇಶದ ವಿರುದ್ಧ ಕಿಡಿ ಕಾರಿದ್ದಾರೆ. ಇದು ಸರ್ಕಾರದ ಹಿಂದೂ ವಿರೋಧಿ ಧೋರಣೆ ಎಂದಿದ್ದಾರೆ. ಸರಕಾರಿ ಶಾಲೆಗಳಲ್ಲಿ ಹಿಂದೂಗಳ ಹಬ್ಬವನ್ನು ತಡೆಯಲೆಂದೇ ಸರಕಾರ ಈ ಆದೇಶ ಹೊರಡಿಸಿದೆ.

ಗಣೇಶೋತ್ಸವ, ಕೃಷ್ಣ ಜನ್ಮಾಷ್ಠಮಿ ಹಬ್ಬಗಳು ಸಮೀಪಿಸುತ್ತಿರುವಾಗಲೇ ಸರಕಾರ ಈ ಆದೇಶ ಹೊರಡಿಸಿದೆ. ಹಿಂದೂಗಳ ಹಬ್ಬಕ್ಕೆ ತಡೆ ಮಾಡಿ ಮುಸ್ಲಿಂ ರ ಓಲೈಕೆಗೆ ಸರಕಾರ ಮುಂದಾಗಿದೆ.

ಕೂಡಲೇ ಆದೇಶ ಹಿಂಪಡೆಯದೇ ಇದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *