ಉಜಿರೆ:(ಜು.18) ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಬೈಕ್ ಸವಾರನೊಬ್ಬ ಹಿಂದೆಯಿಂದ ಬಂದು ಗುದ್ದಿದ ಘಟನೆ ನೆನ್ನೆ ಉಜಿರೆಯ ರೆಬೆಲ್ಲೋ ಲಾಡ್ಜ್‌ನ ಬಳಿ ನಡೆದಿದೆ.


ತಕ್ಷಣ ಸ್ಥಳಕ್ಕೆ ಆಗಮಿಸಿದ ಹಳ್ಳಿಮನೆ ಪ್ರವೀಣ್ ಹಾಗೂ ಸ್ಥಳೀಯರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪಾದಚಾರಿ ಎರ್ನೋಡಿ ಮೂಲದ ಯೋಗಿಶ್ ಪ್ರಭು ಕಾಮತ್ (77 ವ) ಎಂದು ತಿಳಿದು ಬಂದಿದೆ.

ಯೋಗಿಶ್ ಪ್ರಭು ರವರಿಗೆ ಸಣ್ಣ- ಪುಟ್ಟ ಗಾಯಗಳಾಗಿದ್ದು, ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ರವಾನಿಸಲಾಯಿತು.

ಬೈಕ್ ಸವಾರ ಗೋಳಿಯಂಗಡಿಯ ಚಿತ್ತರಂಜನ್ (32 ವ) ಎಂದು ತಿಳಿದು ಬಂದಿದೆ.