Wed. Nov 20th, 2024

Daily Horoscope: ಸ್ನೇಹಿತರ ಸಹವಾಸದಿಂದ‌ ಇಂದು ಈ ರಾಶಿಯವರಿಗೆ ಅಪವಾದ ಬರಬಹುದು!!

ಮೇಷ ರಾಶಿ : ಉಚಿತ ಚಿಕಿತ್ಸೆಯಿಂದ ಆರಂಭದಲ್ಲಿಯೇ ಪರಿಹಾರ ಮಾಡಿಕೊಳ್ಳಿ. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ವಿರೋಧಿಗಳು ತಡೆಯಬಹುದು. ಬಂಧುಗಳ ಸಹಕಾರದಿಂದ ನಿಮ್ಮ‌ ಋಣ ಬಾಧೆ ಸದ್ಯ ತೀರುವುದು. ಹದಗೆಟ್ಟ ಆರೋಗ್ಯವು ಸರಿಯಾಗುವುದು.

ವೃಷಭ ರಾಶಿ : ಇಂದಿನ ನಿಮ್ಮ ವ್ಯವಹಾರವನ್ನು ಸರಿಯಾಗಿ ನಿರ್ವಹಿಸಿ. ವಾಹನದ ಉದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಲಾಭವಾಗುವ ಸಾಧ್ಯತೆ ಹೆಚ್ಚು. ಆಕಸ್ಮಿಕ ಧನಲಾಭವು ನಿಮ್ಮನ್ನು ಖುಷಿಯಾಗಿಡಲಿದೆ. ರಾಜಕೀಯವಾಗಿ ಪ್ರೇರಿತವಾದ ಮಾತುಗಳು ನಿಮ್ಮಿಂದ ಬರಬಹುದು.

ಮಿಥುನ ರಾಶಿ : ಸಂಗಾತಿಯನ್ನು ನಿಂದಿಸುವುದು ಕಲಹಕ್ಕೆ ಕಾರಣವಾಗುವುದು. ವ್ಯಕ್ತಿತ್ವದಿಂದ ನೀವು ಸಮಾಜದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತೀರಿ. ಆರೋಗ್ಯವು ಸದೃಢವಾಗಿ ಇರಲಿದೆ. ಸಂಬಂಧಗಳನ್ನು ಕೂಡಿಸಿಕೊಳ್ಳುವ ಪ್ರಯತ್ನ ಮಾಡಿ. ಉತ್ಸಾಹದ ರಹಸ್ಯವನ್ನು ಹೇಳುವುದು ಬೇಡ.

ಕರ್ಕಾಟಕ ರಾಶಿ : ಇಂದು ಯಾರ ಜೊತೆಗೂ ವಿವಾದಕ್ಕೆ ಸಿಲುಕುವುದು ಬೇಡ. ಅನ್ಯರ ತಪ್ಪಿದ್ದರೂ ಅದನ್ನು ಸರಿಮಾಡಿಕೊಳ್ಳುವ ಪ್ರಯತ್ನ ಮಾಡಿ. ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಪ್ರಯತ್ನವನ್ನು ಮಾಡಬೇಕಾದೀತು. ಹಣವನ್ನು ಸಂಪಾದಿಸಬೇಕು ಎನ್ನುವ ಅತಿಯಾದ ಆಸೆ ನಿಮ್ಮ ಮನಸ್ಸಿನಲ್ಲಿ ಬೇರೂರುವುದು.

ಸಿಂಹ ರಾಶಿ : ಇಂದು ನೀವು ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ಮಾತನಾಡುವಿರಿ. ಹಲವು ದಿನಗಳಿಂದ ಮಾಡಿದ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವಿದೆ. ಮಾನಸಿಕ ಸ್ವಾಸ್ಥ್ಯವನ್ನು ಸರಿ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಕುಟುಂಬದ ವಾರ್ತೆಗಳು ನಿಮಗೆ ಸಂತೋಷವನ್ನು ತರುವುದು.

ಕನ್ಯಾ ರಾಶಿ : ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾಗುವುದು. ಸಮಯ ಸಿಕ್ಕಾಗ ನೀವು ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿರಿ. ಇಂದು ಸಮಯವನ್ನು ವ್ಯರ್ಥ ಮಾಡಬೇಡಿ. ಇಂದು ಸಂಬಂಧಗಳಿಗೆ ಬೆಲೆ ಕೊಡದೇ ಹಣದ ಹಿಂದೆ ಹೋಗಿ ಸಂಬಂಧಗಳನ್ನು ಹಾಳುಮಾಡಿಕೊಳ್ಳುವಿರಿ.

ತುಲಾ ರಾಶಿ : ಪಡೆದ ಸಾಲವನ್ನು ಬೇರೆ ರೀತಿಯಲ್ಲಿ ಹಿಂದಿರುಗಿಸುವಿರಿ. ಮತ್ತೊಂದು ಕಡೆ ಸಾಲವನ್ನು ಮಾಡಬೇಕಾಗಬಹುದು. ಈ ಸಮಯದಲ್ಲಿ ಅಹಿತಕರ ಸುದ್ದಿಗಳ ಸೂಚನೆಗಳೂ ಇವೆ. ಇಂದು ಮನಸ್ಸಿನಲ್ಲಿ ಭಯ ಮತ್ತು ಖಿನ್ನತೆಯಂತಹ ವಿಷಯಗಳಿಗೆ ಕಾರಣವಾಗಬಹುದು.

ವೃಶ್ಚಿಕ ರಾಶಿ : ನೀವು ಭೇಟಿಯಾಗುವ ವ್ಯಕ್ತಿಗಳಿಂದ ನಿಮ್ಮೊಳಗೆ ಧನಾತ್ಮಕತೆ ತುಂಬುವುದು. ಕೆಲವು ವೈಫಲ್ಯಗಳಿಂದ ನೀವು ಪಾಠವನ್ನು ಕಲಿಯಬೇಕಾಗಬಹುದು. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ನಿಮ್ಮವರ ಮಾತುಗಳಿಂದ ಗಾಬರಿಯಾಗಲಿದ್ದೀರಿ. ಊಹಿಸದೇ ಇರುವ ಮಾತುಗಳನ್ನು ಕೇಳಬೇಕಾದೀತು.

ಧನು ರಾಶಿ : ಇಂದು ನೀವು ಕುಟುಂಬದ ಜೊತೆ ಕುಳಿತು ಕುಶಲೋಪರಿಗಳನ್ನು ಹಂಚಿಕೊಳ್ಳುವಿರಿ. ಮನಸ್ಸು ಸಮಾಧಾನದಿಂದ ಇರುವುದು. ಕೆಲವು ದುಃಖದ ಸುದ್ದಿಗಳು ಮನಸ್ಸನ್ನು ಹತಾಶೆಗೊಳಿಸಬಹುದು. ಆರಂಭದ ಉತ್ಸಾಹವು ಅಂತ್ಯದವರೆಗೆ ಇರಲಾರದು. ಆಹಾರವು ನಿಮ್ಮನ್ನು ಉತ್ಸಾಹದಿಂದ ಇಡುವುದು.

ಮಕರ ರಾಶಿ : ಇಂದು ಸಂಬಂಧವನ್ನು ಖುಷಿಪಡಿಸಲು ನಿಮಗೆ ಅವಕಾಶ ಸಿಗುವುದು. ಮೋಜಿಗಾಗಿ ಹೂಡಿಕೆ ಮಾಡಿ ಹಣವನ್ನು ಕಳೆದುಕೊಳ್ಳುವ ಉದ್ಯಮಿಗಳಿಗೆ ಕಳೆದ ಆರಂಭದ ದಿನಗಳನ್ನು ನೆನೆದು ಸಂತೋಷವಾಗಲಿದೆ. ಬಹಳಷ್ಟು ಖರ್ಚಿದ್ದು ಹಣದ ಹೊಂದಾಣಿಕೆ ಕಷ್ಟವಾದೀತು.

ಕುಂಭ ರಾಶಿ : ಇಂದು ನಿಮ್ಮ ಮಾತು ಆಕರ್ಷಣೀಯವಾಗಿ ಇರುವುದು. ಸಂಬಂಧದ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವ ಪ್ರಯತ್ನ ಮಾಡುವಿರಿ. ಹೊಸತನವನ್ನು ತಂದುಕೊಳ್ಳುವಲ್ಲಿ ನೀವು ಸದಾ ಪ್ರಯತ್ನಶೀಲರಾಗಿರುತ್ತೀರಿ. ಆದರೆ ಆಲಸ್ಯವನ್ನು ಬಿಡಬೇಕಾದೀತು. ಪ್ರೀತಿಗೋಸ್ಕರ ಹಣವನ್ನು ಖರ್ಚುಮಾಡುವಿರಿ.

ಮೀನ ರಾಶಿ : ನಿಮ್ಮ ಆಶಾವಾದಕ್ಕೆ ಸರಿಯಾದ ಉತ್ತರ ಸಿಗಲಿದೆ. ಯಾವುದಾದರೂ ಒಂದನ್ನು ಕಳೆದುಕೊಳ್ಳಬೇಕಾಬಹುದು. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಉತ್ಸಾಹವು ನಿಮ್ಮಲ್ಲಿ ಇರುವುದು. ಅಪ್ರಯೋಜಕ ಕೆಲಸಗಳನ್ನು ಮಾಡಲು ನೀವು ಹಿಂದೇಟು ಹಾಕಬಹುದು. ಸ್ನೇಹಿತರ ಸಹವಾಸದಿಂದ‌ ನಿಮಗೆ ಅಪವಾದ ಬರಬಹುದು.

Leave a Reply

Your email address will not be published. Required fields are marked *