Fri. Apr 4th, 2025

HD Kumaraswamy: ಕೇಂದ್ರ ಸಚಿವರಾಗಿರೋ ಹೆಚ್.ಡಿ.ಕೆ ಹೆಗಲ ಮೇಲೆ ಮತ್ತೊಂದು ಜವಾಬ್ದಾರಿ ಇಟ್ಟ ಮೋದಿ

ಹೊಸದಿಲ್ಲಿ :(ಜು.19) 2024ರ ಲೋಕಸಭಾ ಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದ ಹೆಚ್. ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾದರು.

ಇದನ್ನೂ ಓದಿ: https://uplustv.com/2024/07/19/reverse-moving-waterfall-ಭಾರತದಲ್ಲಿದೆ-ಹಿಮ್ಮುಖವಾಗಿ

ಬಯಸಿದ್ದ ಕೃಷಿ ಖಾತೆ ಸಿಗದಿದ್ದರೂ, ಪ್ರಧಾನಿ ಮೋದಿಯವರ ಕ್ಯಾಬಿನೆಟ್ ನಲ್ಲಿ ಪ್ರಭಾವೀ ಒಂಬತ್ತನೇ ಕೈಗಾರಿಕೆ ಹಾಗೂ ಉಕ್ಕು ಖಾತೆಯನ್ನು ಪಡೆದುಕೊಂಡಿರುವ

ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮೋದಿ, ಮತ್ತೊಂದು ಜವಾಬ್ದಾರಿಯನ್ನು ನೀಡಿದ್ದಾರೆ.

ಜೆಡಿಎಸ್‌ ಎರಡು ಸ್ಥಾನ ಗೆದ್ದಿದ್ದರೂ ಈ ಬಾರಿ ಬಿಜೆಪಿ ಮಿತ್ರ ಪಕ್ಷಗಳ ಜೊತೆಗೂಡಿ ಸರ್ಕಾರ ರಚನೆಯಾಗಿರುವುದರಿಂದ ಮೈತ್ರಿಕೂಟದ ಪಕ್ಷಗಳನ್ನು ಯಾವುದೇ ಕಾರಣಕ್ಕೂ ಅಲ್ಲೆಗೆಳೆಯುವಂತಿಲ್ಲ. ಹಾಗಾಗಿ ಎಚ್‌ಡಿ ಕುಮಾರಸ್ವಾಮಿಗೆ ಮೋದಿಯವರು ಮತ್ತೊಂದು ಜವಬ್ದಾರಿಯನ್ನು ನೀಡಿದ್ದಾರೆ.

ಸಂಪುಟ ಆರ್ಥಿಕ ವ್ಯವಹಾರ ಸಮಿತಿಯಲ್ಲಿ ಸದಸ್ಯರನ್ನಾಗಿ ನೇಮಕ ನೇಮಕ ಮಾಡಿಕೊಳ್ಳಲಾಗಿದ್ದು, ದೇಶದ ವಿವಿಧ ಆರ್ಥಿಕ ವಿಷಯಗಳ ನಿರ್ಧಾರವನ್ನು ತೆಗೆದುಕೊಳ್ಳುವ ಸಮಿತಿ ಇದಾಗಿದೆ.

Leave a Reply

Your email address will not be published. Required fields are marked *