Wed. Nov 20th, 2024

Microsoft Outage : ಜಾಗತಿಕವಾಗಿ ಮೈಕ್ರೋಸಾಫ್ಟ್ ಸ್ಥಗಿತ – ಜಗತ್ತಿನಾದ್ಯಂತ ವಿಮಾನಯಾನ, ಸಾಫ್ಟ್ ವೇರ್, ಬ್ಯಾಕಿಂಗ್ ಸೇವೆ ಸ್ಥಗಿತ

Microsoft Windows :(ಜು.19) ಜಾಗತಿಕವಾಗಿ ಮೈಕ್ರೋಸಾಫ್ಟ್ ವಿಂಡೋಸ್ ಸ್ಥಗಿತಗೊಂಡಿದೆ. ವಿಮಾನಯಾನ ಮತ್ತು ಷೇರು ಮಾರುಕಟ್ಟೆ, ಬ್ಯಾಂಕಿಂಗ್ ಕಾರ್ಯಾಚರಣೆಗಳು ಸೇರಿದಂತೆ ವಿವಿಧ ವಲಯಗಳಲ್ಲಿ ವ್ಯಾಪಕ ತಾಂತ್ರಿಕ ತೊಂದರೆ ಉಂಟು ಮಾಡುತ್ತಿದೆ.

ಪಾವತಿ ವ್ಯವಸ್ಥೆಯ ವೈಫಲ್ಯಗಳು ಮತ್ತು ನ್ಯಾಷನಲ್ ಆಸ್ಟ್ರೇಲಿಯ ಬ್ಯಾಂಕ್‌ನಂತಹ ಹಣಕಾಸು ಸಂಸ್ಥೆಗಳನ್ನು ಪ್ರವೇಶ ಮಾಡಲು ಸಾಧ್ಯವಾಗುತ್ತಿಲ್ಲ.

ಮೈಕ್ರೋಸಾಫ್ಟ್ ಸ್ಥಗಿತದಿಂದಾಗಿ ಜಾಗತಿಕ ವಿಮಾನಯಾನ ಸಂಸ್ಥೆಗಳು ಮೇಲೆ ಪರಿಣಾಮ ಬೀರಿವೆ. ಇದು ವಿಮಾನಯಾನಕ್ಕೆ ದೊಡ್ಡ ತೊಂದರೆಯನ್ನು ಉಂಟು ಮಾಡಿದೆ.

ಭಾರತದ ಇಂಡಿಗೋ, ಏರ್ ಇಂಡಿಯಾ, ವಿಸ್ತಾರಾ ಮತ್ತು ಸ್ಪೈಸ್‌ಜೆಟ್‌ನಂತಹ ಪ್ರಮುಖ ವಿಮಾನಯಾನ ಸಂಸ್ಥೆಗಳು ಈ ಸಮಸ್ಯೆಯನ್ನು ಎದುರಿಸುತ್ತಿದೆ.

ಇದರ ಜತೆಗೆ ಸಣ್ಣಪುಟ್ಟ ವಿಮಾನಯಾನಕ್ಕೂ ಪರಿಣಾಮ ಉಂಟು ಮಾಡಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: https://uplustv.com/2024/07/19/mangalore-ca-student-died-ನಾಯಿಯನ್ನು-ರಕ್ಷಿಸಲು-ಹೋಗಿ-

ದೆಹಲಿ ವಿಮಾನ ನಿಲ್ದಾಣದಲ್ಲೂ ಈ ಸಮಸ್ಯೆ ಎದುರಾಗಿದೆ. ಜಾಗತಿಕ ಐಟಿ ಸಮಸ್ಯೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಕೆಲವು ಸೇವೆಗಳು ತಾತ್ಕಾಲಿಕವಾಗಿ ನಿಂತು ಹೋಗಿದೆ.

ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ವಿಂಡೋಸ್ ಬಳಕೆದಾರರು ನೀಲಿ ಪರದೆಯನ್ನು (blue screen) ಎದುರಿಸುತ್ತಿದ್ದಾರೆ , ಇದು ಕಂಪ್ಯೂಟರ್ ಶಟ್‌ಡೌನ್‌ ಅಥವಾ ಮರುಪ್ರಾರಂಭಗಳಿಗೆ ಕಾರಣವಾಗುತ್ತದೆ.

ಇನ್ನು ಕೆಲವು ಕಂಪ್ಯೂಟರ್‌ಗಳು ಪುನರಾರಂಭಗೊಳ್ಳುತ್ತವೆ, ಇದರಿಂದಾಗಿ ಬಳಕೆದಾರರ ಡೇಟಾ ಮತ್ತು ಅಮೂಲ್ಯ ವಿಚಾರಗಳು ಡಿಲೀಟ್​​ ಆಗುತ್ತದೆ. ಪ್ರಪಂಚದಾದ್ಯಂತ ಪ್ರಮುಖ ಐಟಿ ಕಂಪನಿಗಳಿಗೆ ಹೊಡೆತ ಉಂಟಾಗಿದೆ.

ಬರ್ಲಿನ್ ವಿಮಾನ ನಿಲ್ದಾಣವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ಮೈಕ್ರೋಸಾಫ್ಟ್‌ನ ಕ್ಲೌಡ್ ಸೇವೆಗಳು ಗುರುವಾರ ಸಂಜೆಯಿಂದ ಈ ಸಮಸ್ಯೆ ಕಾಣಲು ಶುರುವಾಗಿದೆ.

Leave a Reply

Your email address will not be published. Required fields are marked *