


ಕೊಡಗು:(ಜು.20) ತನ್ನ ಪತ್ನಿಯನ್ನೇ ಗುಂಡಿಕ್ಕಿ ಕೊಂದು , ಠಾಣೆಗೆ ಶರಣಾದ ಘಟನೆ ವಿರಾಜಪೇಟೆ ಹೊರವಲಯದ ಬೇಟೋಳಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: https://uplustv.com/2024/07/20/tarun-sudhir-ದರ್ಶನ್-ಅರೆಸ್ಟ್-ಆದ-ಬಳಿಕ-ಇದೇ-ಮೊದಲ-ಬಾರಿಗೆ-ಭೇಟಿಯಾದ-ತರುಣ್-ಸುಧೀರ್

ಶಿಲ್ಪ (36) ಮೃತಪಟ್ಟ ದುರ್ದೈವಿ.

ಕೊಲೈಗೈದ ಪತಿ ನಾಯಕಂಡ ಬೋಪಣ್ಣ (45) ಎಂದು ತಿಳಿದು ಬಂದಿದೆ.

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಬೋಪಣ್ಣ ಕೋವಿಯೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ವಿರಾಜಪೇಟೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಆರೋಪಿಯನ್ನು ವಶ ಪಡಿಸಿಕೊಂಡಿರುವ ಪೋಲಿಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.