Wed. Nov 20th, 2024

MEMU Train: ಇಂದಿನಿಂದ 3 ದಿನ ಮಂಗಳೂರು ಜಂಕ್ಷನ್ – ಮಡಗಾಂವ್ ನಡುವೆ ಮೆಮು ರೈಲು ಸಂಚಾರ

ಉಡುಪಿ :(ಜು.20) ಇಂದಿನಿಂದ ಮೂರು ದಿನಗಳ ಕಾಲ ಮಡಗಾಂವ್ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಮೀಸಲು ರಹಿತ ವಿಶೇಷ ಮೇಮು ರೈಲನ್ನು ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.

ಇದನ್ನೂ ಓದಿ:https://uplustv.com/2024/07/20/naravi-bjp-yuva-morcha-ಮಹಾಶಕ್ತಿ-ಕೇಂದ್ರದ-ಬಿಜೆಪಿ-ಯುವ-ಮೋರ್ಚಾದ-ನೂತನ-ಸಂಚಾಲಕರಾಗಿ-ಮೇಘರಾಜ್-ಪುತ್ರಬೈಲ್-ನೇಮಕ/

ಈ ರೈಲು ಜು.20, 21, 22ರಂದು -ಶನಿವಾರ, ರವಿವಾರ, ಸೋಮವಾರ – ಎರಡು ಕೇಂದ್ರಗಳ ನಡುವೆ ಸಂಚರಿಸಲಿದೆ. ಇಂದು ಬೆಳಗ್ಗೆ 6:00 ಮಡಗಾಂವ್ ಜಂಕ್ಷನ್ ನಿಂದ ಹೊರಟಿರುವ ಮೆಮು ರೈಲು ಅಪರಾಹ್ನ 12:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ಮರು ಪ್ರಯಾಣದಲ್ಲಿ ಅಪರಾಹ್ನ 12:40ಕ್ಕೆ ಮಂಗಳೂರು ಜಂಕ್ಷನ್ ನಿಂದ ಹೊರಡುವ ರೈಲು ಸಂಜೆ 7:00 ಗಂಟೆಗೆ ಮಡಗಾಂವ್ ಜಂಕ್ಷನ್ ತಲುಪಲಿದೆ. ಉಳಿದ ಎರಡು ದಿನಗಳಲ್ಲಿ ರೈಲು ಇದೇ ಸಮಯದಲ್ಲಿ ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ರೈಲಿಗೆ ಕಾರವಾರ, ಹರ್ವಾಡ, ಅಂಕೋಲ, ಗೋರ್ಕಣ ರೋಡ್, ಮಿರ್ಜಾನ, ಕುಮಟ, ಹೊನ್ನಾವರ, ಮಂಕಿ, ಮುರ್ಡೇಶ್ವರ, ಭಟ್ಕಳ, ಶಿರೂರು, ಮೂಕಾಂಬಿಕಾ ರೋಡ್ ಬೈಂದೂರು, ಬಿಜೂರು, ಸೇನಾಪುರ, ಕುಂದಾಪುರ, ಬಾರಕೂರು, ಉಡುಪಿ, ಮುಲ್ಕಿ, ಸುರತ್ಕಲ್, ತೋಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *