ಬೆಂಗಳೂರು:(ಜು.20) ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ʻನನ್ನರಸಿ ರಾಧೆʼ ಮತ್ತು ʻಕರಿಮಣಿʼ ಸೀರಿಯಲ್ ನಿರ್ದೇಶಕ ವಿನೋದ್ ದೋಂಡಾಲೆ ಆತ್ಮಹತ್ಯೆಗೈದಿದ್ದಾರೆ ಎಂದು ವರದಿಗಳಾಗಿವೆ. ನಾಗರಭಾವಿಯ ತಮ್ಮ ನಿವಾಸದಲ್ಲೇ ವಿನೋದ್ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: https://uplustv.com/2024/07/20/bantwala-ವಿದ್ಯುತ್-ತಂತಿ-ತಗುಲಿ-ಓರ್ವ-ಮೃತ್ಯು-ನಾಲ್ವರಿಗೆ-ಗಾಯ/
ಶವ ಪೋಸ್ಟ್ ಮಾರ್ಟಮ್ ಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನೀನಾಸಂ ಸತೀಶ್ ನಟನೆಯ ಅಶೋಕ ಬ್ಲೇಡ್ ಚಿತ್ರವನ್ನು ವಿನೋದ್ ನಿರ್ದೇಶಿಸುತ್ತಿದ್ದರು. ಅಶೋಕ ಬ್ಲೇಡ್ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿತ್ತು ಎನ್ನಲಾಗಿದೆ. ವಿನೋದ್ ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ನನ್ನರಸಿ ರಾಧೆ ಪೂರ್ಣಗೊಂಡ ಬಳಿಕ ಕರಿಮಣಿ ಸೀರಿಯಲ್ ವಿನೋದ್ ಕೈಗೆತ್ತಿಕೊಂಡಿದ್ದರು. ಈ ಸೀರಿಯಲ್ ಯಶಸ್ಸಿನ ತುತ್ತತುದಿಯಲ್ಲಿತ್ತು. ಇತ್ತೀಚೆಗಷ್ಟೇ 100ನೇ ಸಂಚಿಕೆ ಪ್ರಸಾರ ಮಾಡಿದ ಸಂಭ್ರಮದಲ್ಲಿ ತಂಡವಿತ್ತು. ಟಿಆರ್‌ಪಿಯಲ್ಲೂ ಈ ಧಾರಾವಾಹಿ ಟಾಪ್‌ಲಿಸ್ಟ್‌ನಲ್ಲಿತ್ತು.
ಸ್ನೇಹಿತರ ಜೊತೆ ಸೇರಿ ಇತರ ಕೆಲವು ಧಾರಾವಾಹಿಗಳ ನಿರ್ಮಾಣವನ್ನೂ ವಿನೋದ್ ಮಾಡಿದ್ದರು. ಹೀಗಿರುವಾಗ ಏಕಾಏಕಿ ವಿನೋದ್ ಈ ನಿರ್ಧಾರ ಯಾಕೆ ಕೈಗೊಂಡರು ಎಂಬುದು ಕನ್ನಡ ಸೀರಿಯಲ್ ಮತ್ತು ಸಿನಿಮಾ ಮಂದಿಗೆ ಈಗ ಶಾಕ್ ಆಗಿದೆ.