Wed. Nov 20th, 2024

Ankola hill collapse: ಶಿರೂರು ಗುಡ್ಡ ಕುಸಿತ ಪ್ರಕರಣ – ದಿನೇ ದಿನೇ ಹೆಚ್ಚಾಗುತ್ತಿದೆ ನಾಪತ್ತೆಯಾದವರ ಸಂಖ್ಯೆ

ಅಂಕೋಲಾ(ಜು.21) : ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಗುಡ್ಡ ಕುಸಿತದ ನಂತರ ದಿನದಿಂದ ದಿನಕ್ಕೆ ನಾಪತ್ತೆಯಾದವರ ಹೆಸರು ಹೊರಬರುತ್ತಿದೆ. ಈಗಾಗಲೇ 7 ಮೃತದೇಹಗಳನ್ನು ಹೊರ ತೆಗೆಯಲಾಗಿದೆ.

ನಾಲ್ವರಿಗಾಗಿ ಶೋಧ ನಡೆಯುತ್ತಿದೆ. ಇದೀಗ ಗೋಕರ್ಣ ಬಳಿಯ ಗಂಗೆಕೊಳ್ಳದ ಯುವಕ ಲೋಕೇಶ್​ ಎಂಬುವವರು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ನಾಪತ್ತೆ ಆದ ಮಗನನ್ನು ಹುಡುಕಿಕೊಡುವಂತೆ ಲೋಕೇಶ್ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕಳೆದ ಐದು ದಿನಗಳಿಂದ ಮಗ ಮನೆಗೆ ಬಂದಿಲ್ಲ ಎಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಲೋಕೇಶ್ ತಾಯಿ ಮಾದೇವಿ ಅವರು ದೂರು ದಾಖಲಿಸಿದ್ದಾರೆ. ಗುಡ್ಡ ಕುಸಿತದ ದಿನ ಆ ಹೋಟೆಲ್​​ನಲ್ಲೇ ಲೋಕೆಶ್ ಇದ್ದ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: https://uplustv.com/2024/07/21/kuwait-fire-accident-ರಜೆ-ಮುಗಿಸಿ-ವಾಪಾಸ್-ಆಗಿದ್ದ-ಕೇರಳ-ಮೂಲದ-ಒಂದೇ-ಕುಟುಂಬದ-

ಅದೇ ಹೋಟೆಲ್​ನಲ್ಲಿ ಇದ್ದಿದ್ದನ್ನು ಕೆ.ಎಸ್.ಆರ್.ಟಿ.ಸಿ ಚಾಲಕ ಕೂಡ ನೋಡಿದ್ದ. ಬಸ್ ಪಾಸ್ ಆಗಿ ಕೆಲವೇ ನಿಮಿಷಗಳಲ್ಲಿ ಗುಡ್ಡ ಕುಸಿತ ದುರಂತ ಸಂಭವಿಸಿದೆ. ಲೋಕೇಶ್ ನಾಯ್ಕ್ ನಾಪತ್ತೆ ಇನ್ನಷ್ಟು ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ.

ಗೋವಾದಲ್ಲಿ ಬೋಟ್ ರಿಪೇರಿ ಕೆಲಸ ಮಾಡುತ್ತಿದ್ದ ಲೋಕೇಶ್, ಜ್ವರ ಬಂದಿದ್ದಕ್ಕೆ ರಜೆ ಪಡೆದು ಮನೆ ಕಡೆ ಬಂದಿದ್ದ. ಗುಡ್ಡ ಕುಸಿತದ ದಿನ ಶೃಂಗೇರಿಗೆ ಹೋಗಿ ಬರುವುದಾಗಿ ತೆರಳಿದ್ದ. ಅತ್ತ ಶೃಂಗೇರಿಗೂ ಹೋಗಿಲ್ಲ, ಗೋವಾ ಕೆಲಸಕ್ಕೂ ಹೋಗಿಲ್ಲ. ಕಳೆದ ಐದು ದಿನಗಳಿಂದ ಮನೆಗೆ ಬರದ ಹಿನ್ನೆಲೆ ದೂರು ದಾಖಲಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲ ದಲ್ಲಿನ ಶಿರೂರು ಗುಡ್ಡ ಕುಸಿತದ ಭೀಕರತೆಯ ಬಗ್ಗೆ ತಿಳಿದ ಮಾನ್ಯ ಮಿಲಿಟರಿ ಪಡೆ ಪ್ರಧಾನ ಮಂತ್ರಿಗಳ ಕಾರ್ಯಾಲಯವು , ಈ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲು ಮಿಲಿಟರಿ ಪಡೆಯನ್ನು ಕಳುಹಿಸಿದ್ದು ಈ ಪಡೆಯು ಕೆಲವೇ ನಿಮಿಷಗಳಲ್ಲಿ ಶಿರೂರಿಗೆ ತಲುಪಲಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *