Gold Purchase Bill Goes Viral: ಪ್ರಸ್ತುತ ಚಿನ್ನದ ಬೆಲೆ ಭಾರಿ ಏರಿಕೆ ಆಗಿರುವ ಈ ಸಮಯದಲ್ಲಿ, 50ರ ದಶಕದಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಎನ್ನುವ ವಿಚಾರ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ.
ಅವುಗಳ ಪೈಕಿ ಈಗ 1959ರಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಎನ್ನುವ ಮಾಹಿತಿ ಈಗ ವೈರಲ್ ಆಗಿದೆ. ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಆದಾಗ ನಮ್ಮ ದೇಶದ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಆಗಲಿದೆ.
ಈಗ ಚಿನ್ನದ ಬೆಲೆಯಲ್ಲಿ ಇಷ್ಟೆಲ್ಲಾ ಏರಿಕೆ ಆಗುತ್ತಿರುವಾಗ, 1959ರಲ್ಲಿ ಚಿನ್ನದ ಬೆಲೆ ಎಷ್ಟಿತ್ತು ಎಂದರೆ, ಕೇವಲ 113 ರೂಪಾಯಿಗಳಾಗಿತ್ತು ಎಂದರೆ ನಂಬಲು ಅಸಾಧ್ಯ ಎಂದರೆ ತಪ್ಪಲ್ಲ.
50ರ ದಶಕದಲ್ಲಿ ಅಷ್ಟು ವರ್ಷಗಳ ಹಿಂದೆ ಒಂದು ಗ್ರಾಮ್ ಚಿನ್ನದ ಬೆಲೆ ಕೇವಲ 10 ರೂಪಾಯಿ ಆಗಿತ್ತು. ಇದನ್ನು ಈಗಿನ ಬೆಲೆಗೆ ಹೋಲಿಸಿ ನೋಡುವುದಾದರೆ, ಈಗ 10 ರೂಪಾಯಿಗೆ ಯಾವುದೇ ಒಂದು ಸ್ನ್ಯಾಕ್ಸ್ ಕೂಡ ಬರುವುದಿಲ್ಲ.
ಇದೀಗ 1959ರ ಈ ಬಿಲ್ ವೈರಲ್ ಆಗಿದೆ, ಆಗಿನ ಬೆಲೆ ಭಾರಿ ಸಂಚಲನ ಸೃಷ್ಟಿ ಆಗಿದೆ. 1959ರ ಮಾರ್ಚ್ 3ರಂದು ಈ ಒಂದು ಬಿಲ್ ಬರೆಯಲಾಗಿದೆ, ಆ ಬಿಲ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಎರಡನ್ನು ಸಹ ಖರೀದಿ ಮಾಡಲಾಗಿದ್ದು, ಇದರ ಬೆಲೆ ₹909 ರೂಪಾಯಿ ಮಾತ್ರ ಆಗಿದೆ.
ಇದು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಅಂಗಡಿಯ ಬಿಲ್ ಆಗಿದ್ದು, ಶಿವಲಿಂಗ ಎನ್ನುವ ವ್ಯಕ್ತಿ ಖರೀದಿ ಮಾಡಿದ್ದು, ಈ ಬಿಲ್ ನ ಫೋಟೋ ಈಗ ಭಾರಿ ವೈರಲ್ ಆಗಿದೆ.