Wed. Nov 20th, 2024

Madhya Pradesh: ಪ್ರತಿಭಟನೆ ನಡೆಸುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಮಣ್ಣು ಸುರಿದು ಜೀವಂತ ಸಮಾಧಿಗೆ ಯತ್ನ!!

ಮಧ್ಯಪ್ರದೇಶ: (ಜು.22) ತಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದವರ ವಿರುದ್ಧ ಜಮೀನಿನಲ್ಲೇ ಕುಳಿತು ಪ್ರತಿಭಟಿಸಿದ ಇಬ್ಬರು ಮಹಿಳೆಯರ ಮೇಲೆ ಟಿಪ್ಪರ್ ಮೂಲಕ ಮಣ್ಣು ಸುರಿದು ಜೀವಂತ ಸಮಾಧಿಗೆ ಯತ್ನಿಸಿದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ; https://uplustv.com/2024/07/22/excel-education-institute-ಸುಮಂತ್-ಜೈನ್-ರವರಿಗೆ-ಆಮಂತ್ರಣ

ಮಧ್ಯಪ್ರದೇಶದ ರೇವಾ ಜಿಲ್ಲೆಯ ಹಿನೌಟಾದಲ್ಲಿ ಎರಡು ಕುಟುಂಬಗಳ ನಡುವೆ ಜಮೀನು ಜಗಳ ನಡೆಯುತ್ತಿತ್ತು. ಒಂದು ಕಡೆಯ ಗುಂಪು ಜಮೀನಿನ ಮೂಲಕ ರಸ್ತೆ ನಿರ್ಮಾಣ ಕಾಮಗಾರಿ ಮಾಡುತ್ತಿದ್ದರು. ಅದನ್ನು ಇನ್ನೊಂದು ಕಡೆಯ ಗುಂಪು ವಿರೋಧಿಸುತ್ತಿತ್ತು ಎಂದು ತಿಳಿದು ಬಂದಿದೆ.

ಆದರೂ ಕಾಮಗಾರಿ ಮುಂದುವರೆಯುತ್ತಿತ್ತು. ಇದನ್ನು ವಿರೋಧಿಸಿ ಇನ್ನೊಂದು ಗುಂಪಿನ ಮಹಿಳೆಯರು ಜಮೀನಿನಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದರು. ಆಗ ಕಾಮಗಾರಿ ನಡೆಸುತ್ತಿದ್ದ ಗುಂಪಿನ ಆದೇಶದಂತೆ ಟಿಪ್ಪರ್‌ ಚಾಲಕ, ಕಲ್ಲು ಮಣ್ಣನ್ನು ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರ ಮೇಲೆ ತಂದು ಸುರಿದು, ಜೀವಂತ ಸಮಾಧಿಗೆ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

ಮಮತಾ ಪಾಂಡೆ ಹಾಗೂ ಆಶಾ ಪಾಂಡೆ ಇಬ್ಬರು ಮಹಿಳೆಯರು ತಮ್ಮ ಜಮೀನಿನಲ್ಲಿ ಪರಿವಾರದ ಮತ್ತೊಬ್ಬ ಸದಸ್ಯರು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು. ಇದಕ್ಕೆ ಮಮತಾ ಹಾಗೂ ಆಶಾ ಇಬ್ಬರು ವಿರೋಧಿಸಿದ್ದಾರೆ. ನಿಮ್ಮ ಜಮೀನಿಗೆ ದಾರಿಗಾಗಿ ನಮ್ಮ ಜಮೀನು ಬಲಿಕೊಡುವುದಿಲ್ಲ. ಇದು ನಮ್ಮ ಜಮೀನು, ಉಚಿತವಾಗಿ ನೀಡಲು ಸಾಧ್ಯವಿಲ್ಲ ಎಂದು ಗದರಿದ್ದಾರೆ.

ಮಮತಾ ಹಾಗೂ ಆಶಾ ಪಾಂಡೆ ವಿರೋಧದಿಂದ ಮರಳಿದ್ದ ಪರಿವಾರ ಸದಸ್ಯರು ಏಕಾಏಕಿ ಟಿಪ್ಪರ್ ಮೂಲಕ ಜಲ್ಲಿ, ಕಲ್ಲು ತುಂಬಿದ ಮಣ್ಣು ತಂದಿದ್ದಾರೆ. ಈ ವೇಳೆ ದಾರಿ ಮಾಡಲು ಉದ್ದೇಶಿಸಿದ ಸ್ಥಳದಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಹಿಳೆಯರ ಮೇಲೆ ಟಿಪ್ಪರ್ ಮೂಲಕ ಮಣ್ಣು ಸುರಿದ್ದಾರೆ.

ಈ ಮೂಲಕ ಜೀವಂತ ಸಮಾಧಿ ಮಾಡಲು ಯತ್ನಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಈ ವೇಳೆ ಒರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ಇತ್ತ ಮಣ್ಣು ಸುರಿಯಲು ಬಳಸಿದ ಟಿಪ್ಪರ್ ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೇವಾ ಜಿಲ್ಲೆಯ ಎಸ್ಪಿ ವಿವೇಕ್ ಸಿಂಗ್ ಅವರು, “ಘಟನೆ ನಿನ್ನೆ ನಡೆದಿದೆ. ಇದು ಎರಡು ಕಡೆಯ ಕುಟುಂಬಗಳ ಜಮೀನು ವಿವಾದ. ಒಂದು ಕಡೆಯವರು ರಸ್ತೆ ಮಾಡಲು ಬಯಸಿದ್ದರು. ಅದಕ್ಕಾಗಿ ಕಲ್ಲು ಮಣ್ಣು ತುಂಬಿಸುತ್ತಿದ್ದರು.

ಆ ಸಂದರ್ಭ ಪ್ರತಿಭಟಿಸುತ್ತಿದ್ದ ಇನ್ನೊಂದು ಕಡೆ ಮಹಿಳೆಯರ ಮೇಲೆ ಕಲ್ಲು ಮಣ್ಣಿನ ರಾಶಿಯನ್ನು ಸುರಿದಿದ್ದಾರೆ. ಬಿಎನ್‌ಎಸ್‌ನ ಸೆಕ್ಷನ್ 110 ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮಹಿಳೆಯರ ಪೈಕಿ ಓರ್ವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *